ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಿಂದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ

Last Updated 18 ಮಾರ್ಚ್ 2017, 11:03 IST
ಅಕ್ಷರ ಗಾತ್ರ

ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲ ಯದ ಕುಲಪತಿಯಾಗಿದ್ದ ದಿವಂಗತ ಶಿವಶಂಕರಮೂರ್ತಿ ಅವರ ಪುತ್ರಿ ಶ್ರುತಿ ಅವರು ಜಮ್ಮು– ಕಾಶ್ಮೀರದಿಂದ ಕನ್ಯಾಕು ಮಾರಿಯವರೆಗೆ ಸೈಕಲ್ ಪ್ರಯಾಣ ಬೆಳೆಸಿದ್ದು, 37ನೇ ದಿನವಾದ ಶುಕ್ರವಾರ ಮಂಗಳೂರು ಮೂಲಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿ ಮಾರ್ಗವಾಗಿ ಕೇರಳದ ಕಡೆ ಪ್ರಯಾಣ ಬೆಳೆಸಿದರು.

ಲಿಂಗ ಸಮಾನತೆ ಮತ್ತು ಹರೆಯದವರಿಗೆ ಜೀವನ ಕೌಶಲ ಶಿಕ್ಷಣ ಅವರ ಸೈಕಲ್‌ ಯಾತ್ರೆಯ ಉದ್ದೇಶ ಇಟ್ಟುಕೊಂಡಿರುವ ಮೈಸೂರು ಮೂಲದ 27 ವರ್ಷದ ಶ್ರುತಿ ಅವರು ಫೆ.8 ರಂದು ಜಮ್ಮು ಕಾಶ್ಮೀರದಿಂದ ಸೈಕಲ್ ಯಾತ್ರೆ ಆರಂಭಿಸಿ ಈ ವರೆಗೆ 3 ಸಾವಿರಕ್ಕೂ ಅಧಿಕ ಕಿ.ಮೀ. ಕ್ರಮಿಸಿದ್ದಾರೆ. 11 ರಾಜ್ಯ ದಾಟಿ ಇದೀಗ ಕೇರಳ ತಲುಪಿದ್ದಾರೆ.

ಮೂಲತಃ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿರುವ ಶ್ರುತಿ ಮೂರು ವರ್ಷ ಬೆಂಗಳೂ ರಿನಲ್ಲಿ ಎಂಜಿನಿಯ ರಿಂಗ್ ವೃತ್ತಿ ಮಾಡಿದ್ದರು. ಬಳಿಕ ಹದಿಹರೆಯದ ಮಕ್ಕಳ ವಿಷಯದಲ್ಲಿ ಫೆಲೋಶಿಪ್ ಪಡೆದು ಜೀವನ ಕೌಶಲ ಶಿಕ್ಷಣ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ತೊಕ್ಕೊಟ್ಟಿನಲ್ಲಿ ಮಾಧ್ಯಮ ದೊಂದಿಗೆ ಮಾತನಾಡಿದ ಅವರು, ‘ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 48 ದಿನಗಳಲ್ಲಿ 4,500 ಕಿ.ಮೀ ಸೈಕ್ಲಿಂಗ್ ಮಾಡುವ ಗುರಿಯೊಂದಿಗೆ ಹೊರಟಿದ್ದು, ದಾರಿಯಲ್ಲಿ ಸಿಗುವ ಸರ್ಕಾರಿ ಶಾಲೆಗಳಲ್ಲಿ ಹದಿಹರೆಯದವರ ಸಮಸ್ಯೆಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯ ವನ್ನು ನಡೆಸುತ್ತಿದ್ದೇನೆ. ಕಳೆದ 36 ದಿನಗಳ ಸೈಕ್ಲಿಂಗ್ ಸಮಯದಲ್ಲಿ ಸುಮಾರು 1,500ಕ್ಕೂ ಹೆಚ್ಚು ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದ್ದೇನೆ’ ಎಂದರು.

‘ಸೈಕ್ಲಿಂಗ್ ಸಮಯದಲ್ಲಿ ಎಲ್ಲ ಕಡೆ ಉತ್ತಮ ಬೆಂಬಲ ಸಿಕ್ಕಿತ್ತು. ಕಾಶ್ಮೀರ ದಿಂದ ಗೋವಾವರಗೆ ಸ್ನೇಹಿ ತರು ಸ್ಕಾರ್ಪಿಯೊ ಮೂಲಕ ಬೆಂಗಾವ ಲಾಗಿ ಬಂದಿದ್ದರು. ಗೋವಾದಿಂದ ಕನ್ಯಾಕು ಮಾರಿಯವರೆಗೆ ಏಕಾಂಗಿಯಾಗಿ ಸೈಕ್ಲಿಂಗ್ ನಡೆಸುವ ಯೋಜನೆ ಹಾಕಿ ಕೊಂಡಿದ್ದು, ಮಾ. 27ಕ್ಕೆ ಕನ್ಯಾಕುಮಾರಿ ತಲುಪುವ ಗುರಿ ಇದೆ.  36 ದಿನಗಳ ಪಯಣದಲ್ಲಿ ಹವಾಮಾನ ಬದಲಾವಣೆ, ಆಹಾರ ಸಮಸ್ಯೆಯಾದರೂ ಎಲ್ಲ ಕಡೆ ಜನರು ಸಹಕಾರ ನೀಡಿದರು’ ಎಂದರು.

ದಿನಕ್ಕೆ 8 ಗಂಟೆ ಸೈಕ್ಲಿಂಗ್: ಬೆಳಿಗ್ಗೆ 6 ಗಂಟೆಯಿಂದ ಸೈಕ್ಲಿಂಗ್ ಆರಂಭಿಸುವ ಶ್ರುತಿ ಸಂಜೆ 6ರ ವರೆಗೆ  ಸೈಕ್ಲಿಂಗ್ ನಡೆಸು ತ್ತಾರೆ. ದಾರಿಯಲ್ಲಿ ಸಿಗುವ ಸರ್ಕಾರಿ ಶಾಲೆಗಳಲ್ಲಿ ಜಾಗೃತಿ ಕಾರ್ಯ ಕ್ರಮಗಳಿಗೆ ಎರಡು ಗಂಟೆ ವ್ಯಯಿಸಿ, ಎರಡು ಗಂಟೆ ಕಾಲ ಆಹಾರ ವಿಶ್ರಾಂತಿಗೆ ಬಳ ಸುತ್ತಾರೆ. ಉಳಿದ 8 ಗಂಟೆಗಳ  ಕಾಲ ನಿರಂತರ ವಾಗಿ ಸೈಕಲ್‌ನಲ್ಲಿ ದಾರಿ ಕ್ರಮಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT