ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್ವಸತಿ ಭೂಮಿಯಲ್ಲಿ ಶುಂಠಿ ಕೃಷಿ

Last Updated 18 ಮಾರ್ಚ್ 2017, 9:31 IST
ಅಕ್ಷರ ಗಾತ್ರ

ಹುಣಸೂರು: ನಾಗಾಪುರ ಗಿರಿಜನ ಪುನ ರ್ವಸತಿ ಕೇಂದ್ರದ ವ್ಯಾಪ್ತಿಯಲ್ಲಿ ಅಕ್ರಮ ವಾಗಿ ಶುಂಠಿ ಬೇಸಾಯ ಮಾಡುತ್ತಿರುವ ಬಗ್ಗೆ  ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರ ತಂಡ ಸಿದ್ಧಪಡಿಸಿರುವ ವರದಿ ಯನ್ನು ತಹಶೀಲ್ದಾರ್‌ ಅವರಿಗೆ ಸಲ್ಲಿಸಿದೆ.

ಹುಣಸೂರು ತಾಲ್ಲೂಕಿನ ನಾಗಾ ಪುರ ಗಿರಿಜನ ಪುನರ್ವಸತಿ ಕೇಂದ್ರದ ಫಲಾನುಭವಿಗಳಿಗೆ ವಿತರಿಸಿದ್ದ ಕೃಷಿ ಭೂಮಿಯನ್ನು ಅನ್ಯರು ಬಳಸಿಕೊಂಡು ಶುಂಠಿ ಬೇಸಾಯ ಮಾಡುತ್ತಿದ್ದು, ಈ ಬಗ್ಗೆ ಗಿರಿಜನ ಹೋರಾಟ ಸಮಿತಿ ನೀಡಿದ ದೂರಿನ ಮೇರೆಗೆ ತಹಶೀಲ್ದಾರ್‌ ಮೋಹನ್‌ ಅವರು ಕಂದಾಯ ನಿರೀಕ್ಷಕ ರಾಜ ಕುಮಾರ್‌, ಗ್ರಾಮಲೆಕ್ಕಿಗರಾದ ಶಿವ ಕುಮಾರ್‌ ಮತ್ತು ದಯಾನಂದ ಅವರಿ ರುವ ತಂಡ ರಚಿಸಿ ಪ್ರಾಥಮಿಕ ತನಿಖೆಗೆ ಸೂಚಿಸಿದ್ದರು.

ಈ ತಂಡದ ಶುಕ್ರವಾರ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದೆ.

‘ಸ್ಥಳ ಪರಿಶೀಲಿಸಲು ತಂಡ ಭೇಟಿ ನೀಡಿದ್ದು, ಗಿರಿಜನರ ಆರೋಪದಲ್ಲಿ ಸತ್ಯಾಂಶವಿದೆ. ಗಿರಿಜನರು ಹಣ ಪಡೆದು ತಮ್ಮ ಕೃಷಿ ಭೂಮಿಯನ್ನು ಅನ್ಯರಿಗೆ ನೀಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಗಿರಿಜನರು ಹಾಗೂ ಭೂಮಿ ಷರತ್ತಿನ ಮೇಲೆ ಪಡೆದ ವ್ಯಕ್ತಿಗಳು ಸ್ಥಳ ದಲ್ಲಿ ಇರದ ಕಾರಣ ದಾಖಲೆ ಪತ್ರಗಳ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ’ ಎಂದು ತನಿಖಾ ತಂಡದ ಸದಸ್ಯ ಶಿವಕುಮಾರ್‌ ತಿಳಿಸಿದ್ದಾರೆ.

ಗಿರಿಜನರಿಗೆ ಸೇರಿದ ಕೃಷಿ ಭೂಮಿ ಯಲ್ಲಿ ಅನ್ಯರು ಯಾವುದೇ ಕಾರಣ ದಿಂದಲೂ ಕೃಷಿ ಮಾಡಬಾರದು ಹಾಗೂ ಪರಭಾರೆ ಪಡೆಯುವಂತಿಲ್ಲ. ಕಾನೂನು ಕ್ರಮ ತೆಗೆದುಕೊಳ್ಳಲಾಗು ವುದು ಎಂಬ ಫಲಕ ಹಾಕಿಸುವಂತೆ ತಂಡ ತಹಶೀ ಲ್ದಾರ್‌ಗೆ ಮನವಿ ಮಾಡಲಿದೆ ಎಂದರು.

**

ಪುನರ್ವಸತಿ ಕೇಂದ್ರಕ್ಕೆ ಹೊಂದಿಕೊಂಡಿರುವ ಅದ್ವಾಳು ಕೆರೆಯನ್ನು ಒತ್ತುವರಿ ಮಾಡಿ, ಶುಂಠಿ ಬೇಸಾಯ ಮಾಡಲಾಗಿದೆ. ಅಲ್ಲದೇ, 16 ಕೊಳವೆ ಬಾವಿ ಕೊರೆಯಲಾಗಿದೆ.
-ಶಿವಕುಮಾರ್‌, ಗ್ರಾಮ ಲೆಕ್ಕಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT