ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಗುಪ್ತಚರ ಇಲಾಖೆ ಅಧಿಕಾರಿಗಳ ವಶದಲ್ಲಿರುವ ನಾಪತ್ತೆಯಾದ ಭಾರತದ ಧರ್ಮಗುರುಗಳು

Last Updated 18 ಮಾರ್ಚ್ 2017, 14:07 IST
ಅಕ್ಷರ ಗಾತ್ರ

ಲಾಹೋರ್: ಕಳೆದ ನಾಲ್ಕು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾದ ಧರ್ಮಗುರು ಸಯ್ಯದ್ ಆಸಿಫ್ ಅಲಿ ನಿಜಾಮಿ ಮತ್ತು ಸೂಫಿ ಧರ್ಮಗುರು ಪಾಕಿಸ್ತಾನದ ಗುಪ್ತಚರ ಇಲಾಖೆ ಅಧಿಕಾರಿಗಳ ವಶದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಇಬ್ಬರು ಧರ್ಮಗುರುಗಳು ಪಾಕಿಸ್ತಾನದ ಮುತ್ತಾಹೀದ ಕ್ವಾಮಿ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದರು ಎಂಬ ಆರೋಪದ ಮೇಲೆ ವಶಕ್ಕೆ ತೆಗೆದುಕೊಂಡಿದ್ದು, ರಹಸ್ಯ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಲ್ತಾಫ್ ಹುಸೇನ್‌ ನೇತೃತ್ವದ ಪಾಕಿಸ್ತಾನದ ಮುತ್ತಾಹೀದ ಕ್ವಾಮಿ ಚಳುವಳಿಯಲ್ಲಿ  ಭಾಗಿಯಾಗಿ ಬಂಧನಕ್ಕೊಳಗಾಗಿದ್ದರು. 


ಧರ್ಮಗುರುಗಳಾದ ಸಯ್ಯದ್ ಆಸೀಫ್ ನಿಜಾಮಿ ಮತ್ತು ನಾಜಿಮ್ ನಿಜಾಮಿ ಅವರು ಅಸೀಫ್ ನಿಜಾಮಿ ಅವರು ಹಜರತ್ ನಿಜಾಮುದ್ದೀನ್ ಅಲಿ ದರ್ಗಾದ ಧರ್ಮಗುರುಗಳಾಗಿದ್ದರು. ಇವರು ನಜೀಮ್ ಅಲಿ ನಿಜಾಮಿ ಜೊತೆ ಮಾರ್ಚ್ 8ಕ್ಕೆ ಸಹೋದರಿಯನ್ನು ನೋಡುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳಿದ್ದರು.

ಇವರು ಮಾರ್ಚ್ 13ಕ್ಕೆ ಪಾಕ್ಪಥನ್‌ನಲ್ಲಿರುವ ಸೂಫಿ ಧರ್ಮಗುರುಗಳಾದ ಬಾಬಾ ಫರೀದ್ ಅವರನ್ನು ಭೇಟಿ ಮಾಡಿದ್ದರು. ನಂತರ ಇವರು ಮಾರ್ಚ್ 14ಕ್ಕೆ ಕರಾಚಿಯ ಶಹೀನ್ ಏರ್‌ಲೈನ್ಸ್ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT