ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃದು ರೇಷ್ಮೆ ಘಟಕ ತಿಂಗಳಲ್ಲಿ ಕಾರ್ಯಾರಂಭ

Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮೃದು ರೇಷ್ಮೆ ಘಟಕವು ಇನ್ನೊಂದು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಎಂ.ಕೆ.ಸೋಮಶೇಖರ್‌ ಇಲ್ಲಿ ಶನಿವಾರ ತಿಳಿಸಿದರು.

ಚನ್ನಪಟ್ಟಣದಲ್ಲಿ ಸ್ಥಗಿತಗೊಂಡಿದ್ದ ಘಟಕದ ಆವರಣದಲ್ಲಿಯೇ ₹ 8.77 ಕೋಟಿ ಯೋಜನಾ ವೆಚ್ಚದಲ್ಲಿ ಸಂಘಟಿತ ರೇಷ್ಮೆ ನೇಯ್ಗೆ ಕಾರ್ಖಾನೆ ಆರಂಭಿಸಲಾಗುತ್ತಿದೆ.

30 ಯಂತ್ರಚಾಲಿತ ಮಗ್ಗಗಳು, ವೈಂಡಿಂಗ್‌, ಡಬ್ಲಿಂಗ್‌, ಟ್ವಿಸ್ಟಿಂಗ್‌, ಡೈಯಿಂಗ್‌ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೃದು ರೇಷ್ಮೆ (ಸಾಫ್ಟ್‌ ಸಿಲ್ಕ್‌) ಘಟಕದಲ್ಲಿ ಕ್ರೇಪ್‌, ಜಾರ್ಜೆಟ್‌ ಬಟ್ಟೆಗಳನ್ನು ತಯಾರಿಸಬಹುದಾಗಿದೆ. ಮೈಸೂರು ಸಿಲ್ಕ್‌ ಸೀರೆಯ ಆರಂಭಿಕ ದರ ₹ 10 ಸಾವಿರ ಇದೆ. ಇದಕ್ಕಿಂತ ಕಡಿಮೆ ದರದ ಸಾಫ್ಟ್‌ ಸಿಲ್ಕ್‌ ಸೀರೆಗಳನ್ನು ಈ ಘಟಕದಲ್ಲಿ ತಯಾರಿಸಲಾಗುವುದು. ₹ 5 ಸಾವಿರ ಆರಂಭಿಕ ದರದ ಮೈಸೂರು ಸಿಲ್ಕ್‌ ಸೀರೆಗಳು ಗ್ರಾಹಕರಿಗೆ ಲಭಿಸಲಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT