ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಎನ್‌ಪಿಎ ₹6.06 ಲಕ್ಷ ಕೋಟಿ

ವಸೂಲಿಯಾಗದ ಸಾಲ
Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಿಯಾಗದ ಸಾಲದ ಪ್ರಮಾಣ ಹೆಚ್ಚುತ್ತಲೇ ಇದೆ. 2016–17ರ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಎನ್‌ಪಿಎ ₹1 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದ್ದು, ಒಟ್ಟಾರೆ ₹6.06 ಲಕ್ಷ ಕೋಟಿಗಳಿಗೆ ತಲುಪಿದೆ.

ವಸೂಲಿಯಾಗದ ಸಾಲ ಹೆಚ್ಚಳಕ್ಕೆ ವಿದ್ಯುತ್‌, ಉಕ್ಕು, ರಸ್ತೆ ಮೂಲಸೌಕರ್ಯ ಮತ್ತು ಜವಳಿ ವಲಯದ ಪಾಲೇ ಗರಿಷ್ಠ ಮಟ್ಟದಲ್ಲಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್‌ ಗಂಗ್ವಾರ್‌ ಅವರು ಮಾಹಿತಿ ನೀಡಿದ್ದಾರೆ.

ಖಾಸಗಿ ಬ್ಯಾಂಕ್‌ಗಳ ಪಾಲು: ಖಾಸಗಿ ವಲಯದ ಎನ್‌ಪಿಎ 2016 ಮಾರ್ಚ್‌ 31 ರಲ್ಲಿ ₹48,380 ಕೋಟಿಗಳಷ್ಟಿತ್ತು. ಇದು 2016 ಡಿಸೆಂಬರ್‌ 31ರ ಅಂತ್ಯಕ್ಕೆ ₹70,321 ಕೋಟಿಗಳಗೆ ಏರಿಕೆಯಾಗಿದೆ. 2014–15ರಲ್ಲಿ  ₹31,576 ಕೋಟಿಗಳಷ್ಟಿತ್ತು.

ಸರ್ಕಾರದ ಕ್ರಮಗಳು: ಎನ್‌ಪಿಎ ತಗ್ಗಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ಸಂಹಿತೆ  ಜಾರಿಗೊಳಿಸಲಾಗಿದೆ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ  ಸಾಲ ವಸೂಲಾತಿ ಕಾಯ್ದೆಗೆ ತಿದ್ದುಪಡತಿ ತರಲಾಗಿದೆ. ಅಲ್ಲದೆ, ಆರು ಸಾಲ ವಸೂಲಿ ಪ್ರಾಧಿಕಾರ ಸ್ಥಾಪಿಸಲಾಗಿದೆ ಎಂದು  ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಬ್ಯಾಂಕಿಂಗ್‌ ಮಾನದಂಡ  ಬಾಸೆಲ್‌–3 ನಿಯಮ ಅಳವಡಿಸಿಕೊಳ್ಳಲು 2019ರ ಒಳಗೆ  ಸರ್ಕಾರಿ ಬ್ಯಾಂಕ್‌ಗಳಿಗೆ ₹1.80 ಲಕ್ಷ ಕೋಟಿ ಬೇಕಿದೆ. ಕೇಂದ್ರ ಸರ್ಕಾರ ₹70 ಸಾವಿರ ಕೋಟಿ ನೀಡಲಿದೆ. ಇಳಿದ ₹1.70 ಲಕ್ಷ ಕೋಟಿಯನ್ನು ಮಾರುಕಟ್ಟೆಯಿಂದ ಸಂಗ್ರಹಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT