ಶುಕ್ರವಾರದ ವಹಿವಾಟಿನಲ್ಲಿಯೂ 6 ಅಂಶ ಹೆಚ್ಚಾಗಿ, ಸಾರ್ವಕಾಲೀನ ಗರಿಷ್ಠ ಮಟ್ಟವಾದ 9,160 ರಲ್ಲಿ ವಹಿವಾಟು ಅಂತ್ಯಕಂಡಿತು. ವಾರದ ವಹಿವಾಟಿನಲ್ಲಿ ನಿಫ್ಟಿ 225 ಅಂಶಗಳಷ್ಟು ಗಳಿಕೆ ಕಂಡುಕೊಂಡಿದೆ.
ಬಿಎಸ್‌ಇ ಗರಿಷ್ಠ ಏರಿಕೆ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 703 ಅಂಶಗಳಷ್ಟು ಗರಿಷ್ಠ ಏರಿಕೆ ಕಂಡು 29,649 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ. ಕಳೆದ ವಾರ ಕೇವಲ 114 ಅಂಶಗಳಷ್ಟು ಏರಿಕೆ ಕಂಡಿತ್ತು.
ಉತ್ತಮ ಖರೀದಿ: ಎಫ್‌ಎಂಸಿಜಿ, ಗ್ರಾಹಕ ಬಳಕೆ ವಸ್ತುಗಳು, ವಿದ್ಯುತ್, ಲೋಹ, ಬ್ಯಾಂಕ್, ವಾಹನ, ಆರೋಗ್ಯ ಸೇವೆ, ಐ.ಟಿ, ಸರ್ಕಾರಿ ಸ್ವಾಮ್ಯದ ಕಂಪೆನಿಗಳು, ತೈಲ ಮತ್ತು ಅನಿಲ ಹಾಗೂ ತಂತ್ರಜ್ಞಾನ ವಲಯದ ಷೇರುಗಳಲ್ಲಿ ಉತ್ತಮ ವಹಿವಾಟು ನಡೆಯಿತು.