ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಜಿ ತಂಡ ಚಾಂಪಿಯನ್

Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹತ್ವದ ಪಂದ್ಯದಲ್ಲಿ ಕೆಚ್ಚೆದೆಯ ಆಟ ಆಡಿದ ಎಂಇಜಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಚಾಂಪಿ ಯನ್‌ಷಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಲೀಗ್‌ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಎಂಇಜಿ  3–2 ಗೋಲುಗಳಿಂದ ಎಜಿಒಆರ್‌ಸಿ ತಂಡವನ್ನು ಪರಾಭವಗೊಳಿಸಿತು.

ಈ ಮೂಲಕ ಪೂರ್ಣ ಮೂರು ಅಂಕ ಕಲೆಹಾಕಿದ ಎಂಇಜಿ ತಂಡ ಒಟ್ಟು ಪಾಯಿಂಟ್ಸ್‌ ಅನ್ನು 22ಕ್ಕೆ ಹೆಚ್ಚಿಸಿಕೊಂಡಿ ತಲ್ಲದೆ, ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು. ಆಡಿದ 9 ಪಂದ್ಯಗಳಿಂದ 20 ಪಾಯಿಂಟ್ಸ್‌ ಸಂಗ್ರಹಿಸಿದ್ದ ಸ್ಟೂಡೆಂಟ್‌ ಯೂನಿಯನ್‌ ತಂಡ ಶುಕ್ರವಾರದ ಅಂತ್ಯಕ್ಕೆ ಪಟ್ಟಿಯಲ್ಲಿ ಮೊದಲ ಸ್ಥಾನ ಹೊಂದಿತ್ತು.

ಹೀಗಾಗಿ ತನ್ನ ಖಾತೆಯಲ್ಲಿ 19 ಅಂಕ ಹೊಂದಿದ್ದ ಎಂಇಜಿ ತಂಡ ಪ್ರಶಸ್ತಿಯ ಕನಸು ಸಾಕಾರಗೊಳಿಸಿಕೊಳ್ಳ ಬೇಕಾದರೆ ಎಜಿಒಆರ್‌ಸಿ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಕಣಕ್ಕಿಳಿದ ಎಂಇಜಿ ಆಟಗಾರರು ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. 

11ನೇ ನಿಮಿಷದಲ್ಲಿ ಎಂಇಜಿ ತಂಡ ಎದುರಾಳಿಗಳ ರಕ್ಷಣಾ ಕೋಟೆ ಭೇದಿಸು ವಲ್ಲಿ ಯಶಸ್ವಿಯಾಯಿತು. ಸಹ ಆಟಗಾರ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಆಸಿಫ್‌ ಅದನ್ನು ಕ್ಷಿಪ್ರಗತಿಯಲ್ಲಿ  ಎಜಿಒಆರ್‌ಸಿ ತಂಡದ ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು.

ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಎಜಿಒಆರ್‌ಸಿ ತಂಡದ ನಬೀಲ್‌ ಅವಕಾಶ ನೀಡಲಿಲ್ಲ. 13ನೇ ನಿಮಿಷದಲ್ಲಿ ಚೆಂಡಿನೊಂದಿಗೆ ಎದುರಾಳಿ ಆವರಣ ಪ್ರವೇಶಿಸಿದ ಅವರು ಗೋಲ್‌ಕೀಪರ್‌ನ ಕಣ್ತಪ್ಪಿಸಿ ಅದನ್ನು ಗುರಿ ಮುಟ್ಟಿಸಿದರು.

ಆ ನಂತರದ 20 ನಿಮಿಷಗಳ ಅವಧಿ ಯಲ್ಲಿ ಎರಡೂ ತಂಡಗಳು ಮುನ್ನಡೆಯ ಗೋಲಿಗಾಗಿ ಹೋರಾಟ ಮುಂದುವರಿಸಿದವು. ಎಂಇಜಿ ತಂಡದ ಪ್ರಯತ್ನಕ್ಕೆ 39ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಕ್ರಿಸ್ಟೋಫರ್‌ ಗೋಲು ದಾಖಲಿಸಿ ತಂಡ ವನ್ನು ಬೆಂಬಲಿಸಲು ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳ ಸಂತಸಕ್ಕೆ ಕಾರಣರಾದರು. ಹೀಗಾಗಿ ಎಂಇಜಿ ತಂಡ 2–1ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದ ಆರಂಭದಿಂದಲೇ ಎಜಿಒಆರ್‌ಸಿ ತಂಡ ಸಮಬಲದ ಗೋಲು ದಾಖಲಿಸಲು ಪ್ರಯತ್ನಿಸಿತು. ಆದರೆ ಎಂಇಜಿ ತಂಡದ ರಕ್ಷಣಾ ವಿಭಾಗದ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ. 78ನೇ ನಿಮಿಷದಲ್ಲಿ ಎಂಇಜಿ ಅಂತರ ಹೆಚ್ಚಿಸಿಕೊಂಡಿತು. ವಿಷ್ಣು, ಗೋಲು ಬಾರಿಸಿ ತಂಡದ ಗೆಲುವಿನ ಕನಸಿಗೆ ಬಲ ತುಂಬಿದರು.

81ನೇ ನಿಮಿಷದಲ್ಲಿ ಎಜಿಒಆರ್‌ಸಿ ತಂಡದ ನಬೀಲ್‌ ವೈಯಕ್ತಿಕ ಎರಡನೇ ಗೋಲು ದಾಖಲಿಸಿದ್ದರಿಂದ ಆಟದ ರೋಚಕತೆ ಹೆಚ್ಚಿತ್ತು. ನಂತರದ ಅವಧಿ ಯಲ್ಲಿ ಎಚ್ಚರಿಕೆಯ ಆಟ ಆಡಿದ ಎಂಇಜಿ ತಂಡ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದಿತು.

ಡ್ರಾ ಮಾಡಿಕೊಂಡ ಎಡಿಇ: ಎಡಿಇ ಮತ್ತು ಇನ್‌ಕಮ್‌ ಟ್ಯಾಕ್ಸ್‌ ತಂಡಗಳ ನಡುವಣ ‘ಎ’ ಡಿವಿಷನ್‌ ಲೀಗ್‌ ಪಂದ್ಯ 1–1 ಗೋಲುಗಳಿಂದ ಡ್ರಾ ಆಯಿತು.
ಇನ್‌ಕಮ್‌ ಟ್ಯಾಕ್ಸ್‌ ತಂಡದ ಸೈಯದ್‌ ಅಹ್ಮದ್‌ 14ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಎಡಿಇ ತಂಡದ ಕಬಿ ಲಾನ್‌ 55ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT