ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬೊಬ್ಬರ ತಲೆಯಲ್ಲೂ ವಿಭಿನ್ನ ಆಲೋಚನೆಗಳು...

Last Updated 18 ಮಾರ್ಚ್ 2017, 20:06 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳಸಲು ಪಿಇಎಸ್‌ ವಿಶ್ವವಿದ್ಯಾಲಯ ಶನಿವಾರ ‘ಎಪ್ಸಿಲಾನ್‌–2017’ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಬಳಸದೆ ಇದ್ದ ಹಳೆಯ ವೈಜ್ಞಾನಿಕ ಅನ್ವೇಷಣೆಗಳಿಗೆ ಹೊಸ ರೂಪ, ಜನರ ಅಗತ್ಯಕ್ಕೊಂದು ಆ್ಯಪ್‌, ಶಕ್ತಿಯ ಪರಿಣಾಮಕಾರಿ ಬಳಕೆಗೆ ಹೊಸ ವಿಧಾನ ಹೀಗೆ ವಿದ್ಯಾರ್ಥಿಗಳಿಗೆ ತಮ್ಮ ವಿಭಿನ್ನ ಆಲೋಚನೆಗಳನ್ನು ಪ್ರಸ್ತುತ ಪಡಿಸಲು ಅದು ವೇದಿಕೆಯಾಗಿತ್ತು.

ಸೌರಫಲಕಗಳು ಒಂದೇ ಕಡೆ ಕೇಂದ್ರಿಕೃತವಾಗಿರುವುದರಿಂದ ಬೆಳಿಗ್ಗೆ ಮಾತ್ರ ಸೂರ್ಯನ ಶಾಖ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ಸೂರ್ಯನ ಪ್ರಖರತೆ ಬದಲಾದಂತೆ ಅದರತ್ತ ಫಲಕವೂ ತಿರುಗುತ್ತಾ ಹೋದರೆ ಹೆಚ್ಚು ಶಾಖ ಹೀರಿಕೊಳ್ಳಲು ಸಾಧ್ಯ ಎಂದು ಪಿಇಎಸ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಅಭಿಷೇಕ್‌ ಪ್ರಸಾದ್‌ ಮತ್ತು ಅಭಿಷೇಕ್‌ ನಾರಾಯಣ್‌ ತಮ್ಮ ‘ಸೋಲಾರ್‌ ಟ್ರಾಕರ್‌’ ಮಾದರಿ ಮೂಲಕ ಪ್ರಸ್ತುತ ಪಡಿಸಿದರು.

ಅಗತ್ಯದ ವಸ್ತುವೊಂದರ ಬೆಲೆ, ಗುಣಮಟ್ಟ, ವಿನ್ಯಾಸ ಯಾವ ಯಾವ ತಾಣಗಳಲ್ಲಿ ಹೇಗಿದೆ ಎಂದು ಹೋಲಿಕೆ ಮಾಡಲು ಅನುಕೂಲವಾಗುವಂತೆ ಪಿಇಎಸ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ವಿಭಾಗದ ನಿಖಿಲ್‌ ಹೊಸ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.  

‘ವಿಜ್ಞಾನಿ ರಾಬರ್ಟ್‌ ಸ್ಟಿರ್ಲಿಂಗ್‌ ಅನ್ವೇಷಿಸಿದ್ದ ಸ್ಟಿರ್ಲಿಂಗ್‌ ಎಂಜಿನ್‌ (ಶಾಖ ಎಂಜಿನ್‌) ಈಗ ಬಳಕೆಯಲ್ಲಿಲ್ಲ. ಗಾಳಿಯ ಸಂಕುಚಿತ ಮತ್ತು ವಿಸ್ತರಣೆ ವಿಧಾನದಿಂದ ಕಾರ್ಯನಿರ್ವಹಿಸುವ ಈ ಎಂಜಿನ್‌ನನ್ನು. ಸೌರಫಲಕಗಳೊಂದಿಗೆ ಅಳವಡಿಸುವ ಮೂಲಕ ಹೆಚ್ಚು ವಿದ್ಯುತ್‌ ಪಡೆಯಬಹುದು’ ಎಂದು ಮಾದರಿ ತಯಾರಿಸಿದ ಪಿಇಎಸ್‌ ಕಾಲೇಜಿನ ಮೆಕಾನಿಕಲ್‌ ವಿಭಾಗದ ವೈ.ಆರ್‌.ಸಿ.ರೋಹಿತ್‌ ಮತ್ತು ಎ.ಎಲ್‌.ರಾಜೇಶ್‌ ವಿವರಿಸಿದರು.

ಮೈಸೂರಿನ ಜಿಎಸ್‌ಎಸ್‌ಎಸ್ ಮಹಾವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಎಸ್‌. ಭಾವನಾ, ಎಂ. ಚಿತ್ರಾ ಅವರು ರೂಪಿಸಿದ್ದ ಟಚ್‌ ಅಲರಾಂ ಹಾಗೂ ದಯಾನಂದ ಸಾಗರ್‌ ಕಾಲೇಜಿನ ಶ್ರೀನಿವಾಸ ರೆಡ್ಡಿ, ಚಿರಂತ್‌ ಅವರು ರೂಪಿಸಿದ್ದ ಬೆಳಕನ್ನು ಬಳಸಿಕೊಂಡು ರೊಬೊಟ್‌ ಚಲನೆಯನ್ನು ನಿಯಂತ್ರಿಸುವ ಮಾದರಿಗಳು ಗಮನ ಸೆಳೆದವು.

ರೆಡಿಯೊ ತರಂಗಗಳನ್ನು ಗುರುತಿಸುವ ರೆಡಿಯೊ ಶಾಕ್‌, ವಿಜ್ಞಾನ ರಸಪ್ರಶ್ನೆ, ಹೊಸ ಅನ್ವೇಷಣೆ, ರೇಸ್‌ ಕಾರುಗಳನ್ನು ರೂಪಿಸುವ ಸೋಪ್‌ಬಾಕ್ಸ್‌ ರೇಸ್‌, ಹಳೆ ಅನ್ವೇಷಣೆಗಳಿಗೆ ಪ್ರಸ್ತುತತೆ ನೀಡುವ ಸೈನ್ಸ್‌ ಶೋಡೌನ್‌, ಯುರೇಕಾ, ಮಿಷನ್‌ ಇಂಪಾಸಿಬಲ್‌ ಸ್ಪರ್ಧೆಗಳು ನಡೆದವು.

ವಿದ್ಯುತ್‌ ಅಪಾಯ ತಡೆಯುವ ಹೆಲ್ಮೆಟ್‌
2015ನೇ ಬ್ಯಾಚ್‌ನ ವಿದ್ಯಾರ್ಥಿ ಪ್ರಣವ್‌ ಅನ್ವೇಷಿಸಿದ್ದ ‘ಸ್ಮಾರ್ಟ್‌ ಹೆಲ್ಮೆಟ್‌’ ಬೆಸ್ಕಾಂನಲ್ಲಿ ಬಳಕೆಯಾಗುತ್ತಿದೆ. ‘ಕಂಬದಲ್ಲಿ ವಿದ್ಯುತ್‌ ಪ್ರವಹಿಸುತ್ತಿದೆ ಎಂದರೆ ಈ ಹೆಲ್ಮೆಟ್ ಸದ್ದು ಮಾಡಲು ಪ್ರಾರಂಭಿಸುತ್ತದೆ. ಪ್ರಾಯೋಗಿಕವಾಗಿ 15 ಹೆಲ್ಮೆಟ್‌ಗಳನ್ನು ನೀಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಪ್ರಣವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT