ಸ್ಟಾಕ್ಹೋಮ್ನ ಸೆಂಟ್ರಲ್ ಸ್ಟೇಷನ್ನಲ್ಲಿ ದಿನವೂ ಎರಡೂವರೆ ಲಕ್ಷ ಜನ ಓಡಾಡುತ್ತಾರೆ. ಅವರು ಹೊರಹಾಕುವ ಬಿಸಿಗಾಳಿಯನ್ನು ಬಳಸಿ ಇನ್ನೊಂದು ಕಟ್ಟಡವನ್ನು ಬೆಚ್ಚಗಾಗಿಸುತ್ತಾರೆ. ಸ್ಟೇಷನ್ನಲ್ಲಿ ಜನ ಹೊರಸೂಸುವ ಬಿಸಿಗಾಳಿಯು ಗವಾಕ್ಷಿಯನ್ನು ಸೇರುತ್ತದೆ. ಅಲ್ಲಿಂದ ಅದನ್ನು ನೀರನ್ನು ಬಿಸಿಯಾಗಿಸಲು ಬಳಸುತ್ತಾರೆ. ಆ ನೀರನ್ನು ಪಕ್ಕದ ಇನ್ನೊಂದು ಕಟ್ಟಡಕ್ಕೆ ಹಾಯಿಸಿ, ವಾತಾವರಣವನ್ನು ಬಿಸಿ ಮಾಡುವ ವ್ಯವಸ್ಥೆ ಇದೆ.