ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕ್ ಆ್ಯಂಡ್ ರೋಲ್ ಸಂಗೀತದ ದಂತಕತೆ ಚಕ್ ಬೆರಿ ವಿಧಿವಶ

Last Updated 19 ಮಾರ್ಚ್ 2017, 6:16 IST
ಅಕ್ಷರ ಗಾತ್ರ

ವಾಷಿಂಗ್ಟನ್: ರಾಕ್ ಆ್ಯಂಡ್ ರೋಲ್ ಸಂಗೀತದ ದಂತಕತೆ ಚಕ್ ಬೆರಿ (90) ವಿಧಿವಶರಾಗಿದ್ದಾರೆ. ಮಿಸ್ಸೂರಿ ಸೇಂಟ್  ಚಾರ್ಲ್ಸ್ ಕೌಂಟಿಯಲ್ಲಿರುವ  ನಿವಾಸದಲ್ಲಿ ಇವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೋಲ್ ಓವರ್ ಬಿಥೋವೆನ್,ಯು ನೆವರ್ ಕಾನ್ಟ್ ಕ್ಯಾಚ್ ಮಿ, ಸ್ವೀಟ್ ಲಿಟಿಲ್ ಸಿಕ್ಸ್ಟೀನ್ , ಜೋನಿ ಬಿ ಗುಡಿ ಮೊದಲಾದ ಆಲ್ಬಂಗಳ ಮೂಲಕ ಜನಪ್ರಿಯತೆ ಗಳಿಸಿದ ಸಂಗೀತಗಾರನಾಗಿದ್ದರು ಚಾರ್ಲ್ಸ್ ಎಡ್ವರ್ಡ್  ಆಂಡರ್ಸನ್ ಬೆರಿ ಎಂಬ ಚಕ್ ಬೆರಿ.

Johnny B. Goode ಹಾಡು 2010ರ  ನ್ ಮ್ಯಾಗಜಿನ್‍ನಲ್ಲಿ ಶ್ರೇಷ್ಠ ಹಾಡುಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿತ್ತು.

ಸಂಗೀತ ಲೋಕಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಇವರಿಗೆ 1984ರಲ್ಲಿ ಗ್ರ್ಯಾಮಿ ಪ್ರಶಸ್ತಿ ನೀಡಲಾಗಿತ್ತು. ಕಳೆದ ವರ್ಷ 90ನೇ ಹುಟ್ಟುಹಬ್ಬ ಆಚರಿಸಿದ ವೇಳೆಯಲ್ಲಿ 38 ವರ್ಷಗಳ ಹಿಂದೆ ರೆಕಾರ್ಡ್ ಮಾಡಿದ ತನ್ನ ಮೊದಲ ಸ್ಟುಡಿಯೊ ಆಲ್ಬಂನ್ನು ಬಿಡುಗಡೆ ಮಾಡುವುದಾಗಿ ಚಕ್ ಬೆರಿ  ಹೇಳಿದ್ದರು.

ರಾಕ್ ಸಂಗೀತಕ್ಕೆ ಕಾಲಿಡುವ ಮುನ್ನ ಇವರು ಬಡಗಿಯಾಗಿ, ಹವ್ಯಾಸಿ ಛಾಯಾಗ್ರಾಹಕರಾಗಿ, ಕ್ಷೌರಿಕರಾಗಿಯೂ ಕೆಲಸ ಮಾಡಿದ್ದರು.

ಹಲವಾರು ಕ್ಲಾಸಿಕ್ ಹಾಡುಗಳನ್ನು ಇವರು ಹಾಡಿದ್ದರೂ 1972ರಲ್ಲಿ ಬಿಡುಗಡೆಯಾದ My Ding-a-Ling ಎಂಬ ಹಾಡು ಅವರ ವೃತ್ತಿ ಜೀವನದಲ್ಲಿನ ಹಿಟ್ ಹಾಡಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT