ನಮ್ಮ ಗುರುಗಳು ಲೇ

ಮೊದಲ ಓದು

ನಮ್ಮ ಗುರುಗಳು ಲೇ: ಡಾ. ಪಾಟೀಲ ಪುಟ್ಟಪ್ಪ ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ ರಸ್ತೆ, ಹುಬ್ಬಳ್ಳಿ – 580020

ಪು: 128 ಬೆ: ₹ 80

ನಮ್ಮ ಗುರುಗಳು
ಲೇ:
ಡಾ. ಪಾಟೀಲ ಪುಟ್ಟಪ್ಪ
ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ ರಸ್ತೆ, ಹುಬ್ಬಳ್ಳಿ – 580020

(ಪು: 128 ಬೆ: ₹ 80)

ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ಬರೆದಿರುವ ಇಲ್ಲಿನ ವ್ಯಕ್ತಿಚಿತ್ರಗಳು ‘ಗುರು’ಗಳ ಕುರಿತಾಗಿವೆ. ಒಳ್ಳೆಯ ಗುರುಗಳ ಅಗತ್ಯ ಸಮಾಜಕ್ಕೆ ಎಷ್ಟಿದೆ ಎಂಬುದರ ವಿವರಣೆಯ ಅಗತ್ಯ ಎಲ್ಲರಿಗೂ ಗೊತ್ತು. ಸಮಾಜವನ್ನು, ವ್ಯಕ್ತಿಗಳನ್ನು ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಹಿರಿದಾದದ್ದು. ಇಲ್ಲಿರುವುದು ಅಂತಹ ಗುರುಗಳು; ಅವರು ಕನ್ನಡ ಭಾಷೆಯನ್ನೂ ಬೆಳೆಸಿದವರು ಎನ್ನುವುದು ಇಲ್ಲಿನ ವಿಶೇಷ.

ಡೆಪ್ಯೂಟಿ ಚೆನ್ನಬಸಪ್ಪ, ಗಂಗಾಧರ ಮಡಿವಾಳೇಶ್ವರ ತುರಮುರಿ, ಡಾ. ಫರ್ಡಿನಾಂಡ್‌ ಕಿಟೆಲ್‌, ಮರ್ಡೇಕರ್‌ ಮಂಜಪ್ಪ, ಮೊಹರೆ ಹನುಮಂತರಾಯ, ಡಿ.ಸಿ. ಪಾವಟೆ, ಕು.ಶಿ. ಹರಿದಾಸ ಭಟ್ಟರು ಸೇರಿದಂತೆ ಇಲ್ಲಿ ಹದಿನಾಲ್ಕು ಗುರುಗಳ ಚಿತ್ರಣಗಳಿವೆ. ಈ ಗುರುಗಳು ಮಾಡಿದ ಕೆಲಸಗಳು, ಅವರು ಗಂಧದ ಕೊರಡಿನಂತೆ ವಿದ್ಯಾರ್ಥಿಗಳಿಗೆ, ಶಿಕ್ಷಣಕ್ಕೆ ತಮ್ಮನ್ನು ತಾವು ತೇಯ್ದುಕೊಂಡದ್ದನ್ನು ಪಾ.ಪು. ಇಲ್ಲಿ ಕಾಣಿಸಿದ್ದಾರೆ.

ಚಿತ್ರ ಅವಸರದಲ್ಲಿರುವ ಸಮಾಜ ಇಂತಹವರನ್ನು ಬೇಗ ಮರೆಯುತ್ತದೆ. ಇಲ್ಲವೇ ಪಕ್ಕಕ್ಕೆ ಸರಿಸುತ್ತದೆ. ಹಾಗೆ ಮರೆಯುವ ಮುನ್ನ ತಮ್ಮ ವಿಶಿಷ್ಟ ಪತ್ರಿಕಾಭಾಷೆಯಲ್ಲಿ ಅವರ ವ್ಯಕ್ತಿತ್ವ, ಕೆಲಸಗಳನ್ನು ಆಪ್ತವಾಗಿ ಮರುಸೃಷ್ಟಿಸಲಾಗಿದೆ. ‘ನನ್ನ ಜೀವನವೇ ನನ್ನ ಸಂದೇಶ’ ಎಂದ ಗಾಂಧೀಜಿಯ ಮಾತಿನಂತೆ ಇಂದಿನವರಿಗೆ ಮತ್ತು ನಾಳಿನವರಿಗೆ ಇಲ್ಲಿನ ವ್ಯಕ್ತಿತ್ವಗಳೇ ನಿಜವಾದ ಸಂದೇಶವಾಗುತ್ತಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

ವಿಮರ್ಶೆ
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

28 May, 2017
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

ವಿಮರ್ಶೆ
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

28 May, 2017
ಮೊದಲ ಓದು

ನಾಡು ನುಡಿ ಸಂಗಮ ಲೇ
ಮೊದಲ ಓದು

28 May, 2017
ಮೊದಲ ಓದು

ನಗೆ, ಬಗೆ ಬಗೆ ಲೇ
ಮೊದಲ ಓದು

28 May, 2017
ಮೊದಲ ಓದು

ಸಿರಿಬೆಳಕು ಲೇ
ಮೊದಲ ಓದು

28 May, 2017