ಮೊದಲ ಓದು

ಯಾರ ಮುಲಾಜೂ ಇಲ್ಲದೆ... (ಗದ್ಯ ಬರಹಗಳ ಸಂಕಲನ) ಲೇ: ಹರಿಯಪ್ಪ ಪೇಜಾವರ ಪ್ರ: ಶ್ರೇಯಸ್‌ ಪ್ರಕಾಶನ, ಐಎಚ್‌ 27, 1ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, ಲ್ಯಾಂಡ್‌ಲಿಂಕ್‌ ಟೌನ್‌ಶಿಪ್‌, ದೇರೆಬೈಲ್‌, ಕೊಂಚಾಡಿ, ಮಂಗಳೂರು – 575008

(ಪು: 144 ಬೆ: ₹ 130)

ಯಾರ ಮುಲಾಜೂ ಇಲ್ಲದೆ... (ಗದ್ಯ ಬರಹಗಳ ಸಂಕಲನ)

ಲೇ: ಹರಿಯಪ್ಪ ಪೇಜಾವರ
ಪ್ರ: ಶ್ರೇಯಸ್‌ ಪ್ರಕಾಶನ, ಐಎಚ್‌ 27, 1ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, ಲ್ಯಾಂಡ್‌ಲಿಂಕ್‌ ಟೌನ್‌ಶಿಪ್‌, ದೇರೆಬೈಲ್‌, ಕೊಂಚಾಡಿ, ಮಂಗಳೂರು – 575008

ಕವಿ ಹರಿಯಪ್ಪ ಪೇಜಾವರ ಅವರ ಕುತೂಹಲಕರ ಬರಹಗಳ ಪುಸ್ತಕ ಇದು. ಕುತೂಹಲಕರ ಏಕೆಂದರೆ, ಇಲ್ಲಿ ಒಂದೇ ಬಗೆಯ ಬರಹಗಳಿಲ್ಲ. ವಿಮರ್ಶೆ, ಪತ್ರ, ಅನಿಸಿಕೆ, ಲಹರಿ, ಚಿಂತನೆ, ಪ್ರತಿಕ್ರಿಯೆ, ಅನುವಾದ, ಈ ಲೇಖಕನೊಂದಿಗೆ ವಿದ್ಯಾರ್ಥಿಗಳು ನಡೆಸಿದ ಮಾತುಕತೆ ಇವೆಲ್ಲವೂ ಇವೆ. ಪುಸ್ತಕದ ಹೆಸರು ‘ಯಾರ ಮುಲಾಜೂ ಇಲ್ಲದೇ...’ ಎಂದಿರುವುದರಿಂದ ಇಲ್ಲಿಯೂ ಯಾವ ಸಂಕೋಚ, ಮುಜುಗರಗಳು ಹಣಕಿಹಾಕಿಲ್ಲ. ಹರಿಯಪ್ಪ ಪೇಜಾವರ ಅವರ ಮೂಲ ಧರ್ಮ ಸಾಹಿತ್ಯವಾದ್ದರಿಂದ ಅವರ ಚಿಂತನೆಗಳು ಅದರ ಸುತ್ತಲೇ ಹರಡಿಕೊಂಡಿವೆ.

ಸಾಹಿತ್ಯ ಕೃತಿಗಳಿಗೆ ಪ್ರತಿಕ್ರಿಯಿಸಿದ್ದು, ಮತ್ತು ಅವುಗಳ ವಿಮರ್ಶೆಯ ಕುರಿತು ಇಲ್ಲಿ ಬಹುಪಾಲು ಬರಹಗಳಿವೆ. ಇವೆಲ್ಲವೂ ಲೇಖಕರು ಸಾಹಿತ್ಯಕ್ಕೆ ಮುಖಾಮುಖಿಯಾದ, ಅದನ್ನು ಅವರು ನೋಡುವ ಅನನ್ಯ ಕ್ರಮವನ್ನು ಕಾಣಿಸುವ ಬರಹಗಳಾಗಿವೆ. ಅದಕ್ಕೆ ಪ್ರಾತಿನಿಧಿಕ ಎಂಬಂತೆ ಅವರ ‘ನವ್ಯ ಸಾಹಿತ್ಯ ಮತ್ತು ಸಾಹಿತ್ಯ ವಿದ್ಯಾರ್ಥಿ’ ಎಂಬ ಲೇಖನವಿದೆ. ಇದು ಮಾತ್ರವಲ್ಲ, ಅವರ ‘ಭಾಷೆಯಲ್ಲಿ ಮೋಸ; ಜೀವ ವಿರೋಧ ಮತ್ತು ಪಲಾಯನ ವಾದ’ ಭಾಷೆಯ ಕುರಿತಾಗಿ ಹೊಸ ಹೊಳಹುಗಳನ್ನು ಓದುಗರ ಮುಂದಿಡುತ್ತದೆ. ಬೇರೆಬೇರೆ ಸಮಯ, ಸಂದರ್ಭದಲ್ಲಿ ಬರೆದ ಪೇಜಾವರರ ಇಲ್ಲಿನ ಲೇಖನಗಳು ಓದುಗರನ್ನು ಮುಟ್ಟುವ ತುರ್ತನ್ನು ಪಡೆದಿವೆ. ಭಿನ್ನ ಬಗೆಯಲ್ಲಿ ಸಾಹಿತ್ಯವನ್ನು ಓದುಗರಿಗೆ ದರ್ಶಿಸುವ ಶಕ್ತಿಯೇ ಅವುಗಳ ಜೀವಾಳವಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಗ್ರಾಮಜೀವನದ ಸಂಕ್ರಮಣ ಚಿತ್ರಣ

ಮುನ್ನುಡಿ ಕನ್ನಡಿ
ಗ್ರಾಮಜೀವನದ ಸಂಕ್ರಮಣ ಚಿತ್ರಣ

16 Apr, 2017
ಮೊದಲ ಓದು

ಪುಸ್ತಕ ವಿಮರ್ಶೆ
ಮೊದಲ ಓದು

16 Apr, 2017
ಮೊದಲ ಓದು

ಪುಸ್ತಕ ವಿಮರ್ಶೆ
ಮೊದಲ ಓದು

16 Apr, 2017
ಆತ್ಮಸಂಗಾತಕ್ಕಾಗಿ ಹಂಬಲಿಸುವ ಸಖ್ಯಗೀತಗಳು

ಹೊಸ ಓದು
ಆತ್ಮಸಂಗಾತಕ್ಕಾಗಿ ಹಂಬಲಿಸುವ ಸಖ್ಯಗೀತಗಳು

16 Apr, 2017
ಉರಗತಜ್ಞನ ಬದುಕಿನ ರೋಚಕ ಪುಟಗಳು

ವಿಮರ್ಶೆ
ಉರಗತಜ್ಞನ ಬದುಕಿನ ರೋಚಕ ಪುಟಗಳು

26 Mar, 2017