ಮೊದಲ ಓದು

ಅಂತರ್ಜಲ ಬಳಕೆ– ಹನಿ ಹನಿಯಲ್ಲೂ ಕಟ್ಟಬೇಕಿದೆ ರೈತನ ಬದುಕು ಲೇ: ಡಾ. ಎ.ಎಸ್‌. ಕುಮಾರ ಸ್ವಾಮಿ ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ,ಶಿವಮೊಗ್ಗ – 577201

ಪು: 360 ಬೆ: ₹ 250

ಅಂತರ್ಜಲ ಬಳಕೆ– ಹನಿ ಹನಿಯಲ್ಲೂ ಕಟ್ಟಬೇಕಿದೆ ರೈತನ ಬದುಕು
ಲೇ:
ಡಾ. ಎ.ಎಸ್‌. ಕುಮಾರ ಸ್ವಾಮಿ
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ,ಶಿವಮೊಗ್ಗ – 577201

ನೀರಿನ ಕೊರತೆ ಈ ಬೇಸಿಗೆಯಲ್ಲಿ ಪ್ರತಿದಿನವೂ ಜನರ ಅನುಭವಕ್ಕೆ ಬರುತ್ತಿದೆ. ರೈತರನ್ನು ಗಮನದಲ್ಲಿಟ್ಟುಕೊಂಡು ಕೃಷಿವಿಜ್ಞಾನಿ ಎ.ಎಸ್‌. ಕುಮಾರ ಸ್ವಾಮಿ ಇದನ್ನು ಬರೆದಿದ್ದಾರೆ. ಅಂತರ್ಜಲವನ್ನು ಹೇಗೆ ಮಿತವಾಗಿ ಬಳಸಬೇಕು, ಅದರ ಶೋಧನೆ ಹೇಗೆ, ಕೊಳವೆ ಬಾವಿ ಕೊರೆಸುವುದು, ಬೆಳೆಗಳ ಆಯ್ಕೆ ಹೇಗಿರಬೇಕು, ಅತಿ ನಿರಾವರಿಯಿಂದ ಆಗುವ ಆಪತ್ತು ಮತ್ತಿತರ ಕೃಷಿ ಸಂಬಂಧಿ ಮಾಹಿತಿಯನ್ನು ಈ ಕೃತಿ ಕೊಡುತ್ತದೆ. ಅಂತರ್ಜಲವನ್ನೇ ಅವಲಂಬಿಸಿ ಬೆಳೆ ಬೆಳೆಯಬೇಕಾದ ರೈತನ ಆಪ್ತ ಸಂಗಾತಿಯಾಗಿ, ಮಾರ್ಗದರ್ಶಿಯಾಗಿ ಈ ಪುಸ್ತಕ ರೂಪುಗೊಂಡಿದೆ.

ಓದು, ಬರಹ ಬಲ್ಲ ಪ್ರತಿಯೊಬ್ಬರಿಗೂ ಅಂತರ್ಜಲದ ಬಳಕೆಯ ಬಗ್ಗೆ ಗೊತ್ತಾಗುವಂತೆ ಸಾಕಷ್ಟು ವಿವರವಾಗಿ, ವಿಸ್ತಾರವಾಗಿ, ಚಿತ್ರಗಳೊಂದಿಗೆ ಕುಮಾರ ಸ್ವಾಮಿ ತಮ್ಮ ಪುಸ್ತಕದಲ್ಲಿ ಕೊಟ್ಟಿದ್ದಾರೆ. ನೀರನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ನಿಟ್ಟಿನಲ್ಲಿ ಇಲ್ಲಿನ ಬರಹ ಮಹತ್ವದ್ದಾಗಿದೆ. ಹಾಗಾಗಿ ಇದು ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಬಹುದು. ಸಾಂಪ್ರದಾಯಿಕ ಹಾಗೂ ಆಧುನಿಕ ತಂತ್ರಜ್ಞಾನಗಳ ಮೂಲಕ ನೀರನ್ನು ಮಿತವಾಗಿ ಬಳಕೆ ಮಾಡುವ ಕ್ರಮಗಳನ್ನು ಇದು ಒಳಗೊಂಡಿದೆ. ಕೃಷಿಕ್ಷೇತ್ರದಲ್ಲಿನ ಲೇಖಕರ ಅಪಾರ ಅಧ್ಯಯನ ಮತ್ತು ಅನುಭವ ಆಧರಿಸಿ ಬರೆಯಲಾಗಿರುವ ಈ ಬರಹದಿಂದ ನೀರಿನ ಸರಿಯಾದ ಮತ್ತು ಲಾಭದಾಯಕ ಬಳಕೆ ಸಾಧ್ಯವಾಗುತ್ತದೆ. ಆದ್ದರಿಂದ ಇದು ಈ ಕ್ಷೇತ್ರದ ಆಸಕ್ತರಿಗೆ, ರೈತರಿಗೆ ಸಕಾಲಿಕ, ಸೂಕ್ತ ನೆರವು ನೀಡಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಗ್ರಾಮಜೀವನದ ಸಂಕ್ರಮಣ ಚಿತ್ರಣ

ಮುನ್ನುಡಿ ಕನ್ನಡಿ
ಗ್ರಾಮಜೀವನದ ಸಂಕ್ರಮಣ ಚಿತ್ರಣ

16 Apr, 2017
ಮೊದಲ ಓದು

ಪುಸ್ತಕ ವಿಮರ್ಶೆ
ಮೊದಲ ಓದು

16 Apr, 2017
ಮೊದಲ ಓದು

ಪುಸ್ತಕ ವಿಮರ್ಶೆ
ಮೊದಲ ಓದು

16 Apr, 2017
ಆತ್ಮಸಂಗಾತಕ್ಕಾಗಿ ಹಂಬಲಿಸುವ ಸಖ್ಯಗೀತಗಳು

ಹೊಸ ಓದು
ಆತ್ಮಸಂಗಾತಕ್ಕಾಗಿ ಹಂಬಲಿಸುವ ಸಖ್ಯಗೀತಗಳು

16 Apr, 2017
ಉರಗತಜ್ಞನ ಬದುಕಿನ ರೋಚಕ ಪುಟಗಳು

ವಿಮರ್ಶೆ
ಉರಗತಜ್ಞನ ಬದುಕಿನ ರೋಚಕ ಪುಟಗಳು

26 Mar, 2017