ಶುಕ್ರವಾರ, 29 ಮಾರ್ಚ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಹಾಡುಗಳನ್ನು ಎಸ್‌ಪಿ ಬಾಲಸುಬ್ರಮಣ್ಯಂ ಹಾಡಬಾರದು: ಇಳಯರಾಜಾ

Last Updated 20 ಮಾರ್ಚ್ 2017, 10:15 IST
ಅಕ್ಷರ ಗಾತ್ರ

ಚೆನ್ನೈ : ನಾನಿನ್ನು ಇಳಯರಾಜಾ ಸಂಗೀತ ಸಂಯೋಜನೆ ಮಾಡಿರುವ ಯಾವುದೇ ಹಾಡುಗಳನ್ನು ಹಾಡುವುದಿಲ್ಲ ಎಂದು ಗಾಯಕ ಎಸ್‍ಪಿ ಬಾಲಸುಬ್ರಮಣ್ಯಂ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಬರೆದಿರುವ ಎಸ್‌ಪಿಬಿ  ಸಂಗೀತ ನಿರ್ದೇಶಕ ಇಳಯರಾಜಾ ಅವರು ತಮಗೆ ಕಾನೂನು ನೋಟಿಸ್ ಕಳಿಸಿದ್ದಾರೆ. ಹಾಗಾಗಿ ಇನ್ನು ಮುಂದೆ ನಾನು ಅವರು ನಿರ್ದೇಶಿಸಿದ, ಸಂಯೋಜನೆ ಮಾಡಿದ ಹಾಡುಗಳನ್ನು ಹಾಡುವುದಿಲ್ಲ ಎಂದಿದ್ದಾರೆ.

ಟೊರಾಂಟೊದಲ್ಲಿ ಆಗಸ್ಟ್ ತಿಂಗಳಲ್ಲಿ ಆರಂಭವಾದ ಎಸ್‍‌ಪಿಬಿ50 ಎಂಬ ಕಾರ್ಯಕ್ರಮದ ಪ್ರವಾಸದಲ್ಲಿದ್ದಾರೆ ಎಸ್‌ಪಿಬಿ, ಗಾಯಕಿ ಚಿತ್ರಾ ಮತ್ತು ಚರಣ್ ಜತೆ ಎಸ್‍ಪಿಬಿ ರಷ್ಯಾದಲ್ಲಿ ಕಾರ್ಯಕ್ರಮ ನೀಡಿದ್ದು, ಶ್ರೀಲಂಕಾ, ಮಲೇಷ್ಯಾ, ಸಿಂಗಾಪೂರ್, ದುಬೈನಲ್ಲೂ ಕಾರ್ಯಕ್ರಮ ನೀಡಿದ್ದಾರೆ.

5 ದಶಕಗಳ ಕಾಲ ಇಳಯರಾಜಾ ಜತೆ ಸಂಗೀತದ ನಂಟು ಹೊಂದಿದ್ದಾರೆ ಎಸ್‍ಪಿಬಿ. ಇಳಯರಾಜಾ ಅವರ ಅನುಮತಿ ಇಲ್ಲದೆ ಅವರ ಹಾಡುಗಳನ್ನು ಎಲ್ಲಿಯೂ ಹಾಡುವಂತಿಲ್ಲ ಎಂದು ಇಳಯರಾಜಾ ಎಸ್‍ಪಿಬಿಗೆ ನೋಟಿಸ್ ಕಳುಹಿಸಿದ್ದಾರೆ.

ಎಸ್‍ಪಿಬಿ ಜತೆ ಚಿತ್ರಾ ಮತ್ತು ಚರಣ್ ಅವರಿಗೂ ಕೂಡಾ ನೋಟಿಸ್ ಲಭಿಸಿದೆ.

ನಾನು ಈ ಸಂಗೀತ ಕಾರ್ಯಕ್ರಮ ಆರಂಭ ಮಾಡುವವರೆಗೆ ನನಗೆ ರಾಜಾ ಅವರ ಕಚೇರಿಯಿಂದ ಯಾವುದೇ ನೋಟಿಸ್ ಸಿಕ್ಕಿರಲಿಲ್ಲ. ಆದರೆ ನಾನು ಅಮೆರಿಕ ಪ್ರವಾಸ ಆರಂಭಿಸಿದಾಗ ಯಾಕೆ ಈ ನೋಟಿಸ್ ಸಿಕ್ಕಿತು ಎಂಬುದು ತಿಳಿಯುತ್ತಿಲ್ಲ. ಇದೊಂದು ಕಾನೂನು ನಿಯಮ ಆಗಿರುವುದರಿಂದ ನಾನು ಅದನ್ನು ಪಾಲಿಸಲೇಬೇಕಾಗಿದೆ ಎಂದು ಎಸ್‍ಪಿಬಿ ಫೇಸ್‍ಬುಕ್‍ನಲ್ಲಿ  ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT