ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಯುಗದಲ್ಲೂ ಔಷಧ ಬಳಕೆ

Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಕ್ರಿಸ್ತಪೂರ್ವ 120,000 ಹಾಗೂ 35000 ವರ್ಷಗಳ ಹಿಂದೆ ಯುರೋಪ್‌ ಖಂಡಗಳಲ್ಲಿ ವಾಸಿಸುತ್ತಿದ್ದ ಮನುಷ್ಯನ  ಪ್ರಬೇಧಕ್ಕೆ ನಿಯಾಂಡರ್‌ತಾಲ್‌ ಎಂದು ಹೆಸರಿಸಲಾಗಿದೆ.

ಈ ಕಾಲದಲ್ಲಿಯೇ ರೋಗನಿರೋಧಕಗಳನ್ನು ಬಳಸಿರುವುದು ಪತ್ತೆಯಾಗಿದೆ. ಅದುವರೆಗೂ ಜಾಣ್ಮೆ ಇರದ ಮನುಷ್ಯ ಜೀವಿ ಎಂದು ಅವರನ್ನು ಪರಿಗಣಿಸಲಾಗುತ್ತಿತ್ತು. ಹಲ್ಲಿನ ಅವಶೇಷಗಳನ್ನು ಅಧ್ಯಯನ ಮಾಡಿದಾಗ ಹಲ್ಲಿನ ಮೇಲೆ ನಿರ್ಮಾಣವಾಗುವ ಪೊರೆಯಲ್ಲಿ ಔಷಧೀಯ ಅಂಶಗಳು ಕಂಡು ಬಂದಿವೆ. ಇದನ್ನು ವಂಶವಾಹಿಗಳ ಅಧ್ಯಯನಕ್ಕೆ ಒಳಪಡಿಸಿದಾಗ ಈ ಅಂಶ ಸ್ಪಷ್ಟವಾಗಿದೆ.

**

ಸ್ಪೇನ್‌ನ ಎಲ್‌ ಸಿಡ್ರೊನ್‌ನಲ್ಲಿ ಪತ್ತೆಯಾದ ಪುರುಷ ನಿಯಾಂಡರ್‌ತಾಲ್ ವ್ಯಕ್ತಿಯ ಮೇಲ್ಭಾಗದ ದವಡೆ

ಮೆಥನೊಒಬ್ರಿವಿಬ್ಯಾಕ್ಟರ್ ಒರೈಲ್ಸ್ (ಮೂಳೆ ಮತ್ತು ಹಲ್ಲುಗಳ ಸೋಂಕಿಗೆ ಕಾರಣವಾಗುವ ಸೂಕ್ಷ್ಮಾಣು ಕ್ರಿಮಿ)
ಸೂಕ್ಷ್ಮ ಕ್ರಿಮಿಗಳಿಗೆ ತುತ್ತಾಗಿ ದವಡೆಗೆ ಬಾವು ಬಂದಿರುವುದು

ಪೊಪುಲಸ್ ಟ್ರೈಚೊಕರ್ಪ ಪೊಪಲರ್ ಟ್ರಿ (ಇದಕ್ಕೆ ಬ್ಲಾಕ್‌ಪಟನ್‌ ಎಂಬ ಹೆಸರೂ ಉಂಟು)
ಈ ಗಿಡವು ಅಸ್ಪಿರಿನ್‌ ಘಟಕಗಳನ್ನೊಳಗೊಂಡ ಸಾಲಿಸಿಲಿಕ್‌ ಆ್ಯಸಿಡ್‌ ಒಳಗೊಂಡಿದೆ. ಇದು ನೋವು ನಿವಾರಕ ಔಷಧಿಯಾಗಿದ್ದು, ದವಡೆ ಊದಿಕೊಂಡಾಗ ಆಗುವ ನೋವು ನಿವಾರಿಸುತ್ತದೆ.

ಎಂಟ್ರೊಸಿಟೋಜೂನ್ ಬೈನೂವ್ಸಿ (ಉದರ ಮತ್ತು ಕರುಳು ಭಾಗದ ಸೋಂಕಿಗೆ ಕಾರಣವಾಗುವ ಸೂಕ್ಷ್ಮಾಣು ಕ್ರಿಮಿ)
ಕರುಳಿಗೆ ಸೂಕ್ಷ್ಮಾಣು ಕ್ರಿಮಿಗಳು ಸೋಕಿ ಅತಿಸಾರ ಕಾಯಿಲೆಗೆ ತುತ್ತಾಗಿರುವುದಕ್ಕೆ ಪುರಾವೆ

ಪೆನಿಸಿಲಿಯಂ ರುಬೆನ್ಸ್
ಆಹಾರ ಶಿಲೀಂಧ್ರಗಳು ಮತ್ತು ಪೆನ್ಸಿಲಿನ್‌ ಔಷಧಿ ಬಳಸಿರುವ ಬಗ್ಗೆ ಪುರಾವೆ
ಇದು ಸ್ವಾಭಾವಿಕ ರೋಗನಿರೋಧಕವಾಗಿದ್ದು, ಇದು ಕರುಳಿಗೆ ಸೋಂಕುವ ಸೂಕ್ಷ್ಮ ಕ್ರಿಮಿಗಳನ್ನು ನಾಶಮಾಡುತ್ತದೆ.

ದವಡೆಗಳು ಮುಂಬಾಗಿರುವ, ವಿಶಾಲವಾದ ಹಣೆಯ ಮುಖಲಕ್ಷಣ ಇರುವ ಮನುಷ್ಯರು ಇವರಾಗಿದ್ದರು.
ಪುರುಷನ ಮೇಲ್ದವಡೆಯನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಈ ಆಸಕ್ತಿಕರ ಅಂಶಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT