ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಷತ್ರಗಳ ಲೋಕದಲ್ಲಿ ‘ರೋಗ್’

ಸಿನಿ ಹನಿ
Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ವೇದಿಕೆಯ ಮೇಲೆ ನಟೀಮಣಿಯರಾದ ಕಾವ್ಯಾ ಶಾ, ಕಾರುಣ್ಯಾ ರಾಮ್ ಹಾಗೂ ಹರ್ಷಿಕಾ ಪೂಣಚ್ಚ ಅವರ ಆಕರ್ಷಕ ನೃತ್ಯ. ವೇದಿಕೆಯ ಮುಂಭಾಗದಲ್ಲಿ ಸುದೀಪ್, ಅಲಿ ಬಾಷಾ, ಶ್ರೀಕಾಂತ್, ರಕ್ಷಿತಾ, ಪ್ರೇಮ್, ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ! ಹೀಗೆ ಎರಡೂ ಕಡೆ ತುಂಬಿಕೊಂಡಿದ್ದ ತಾರೆಯರನ್ನು ನೋಡಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ. ಅದು ‘ರೋಗ್’ ಚಿತ್ರದ ಹಾಡುಗಳ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ.

‘ಪ್ರೀತಿ, ಹಾಸ್ಯ, ಸಾಹಸ ಎಲ್ಲವನ್ನೂ ಸಮರಸವಾಗಿ ಒಳಗೊಂಡ ಸಿನಿಮಾ ರೋಗ್’ ಎಂದರು ನಿರ್ದೇಶಕ ಪುರಿ ಜಗನ್ನಾಥ್.

ಅದೇ ವೇದಿಕೆಯಲ್ಲಿ ಶಿವರಾಜಕುಮಾರ್, ಪುನೀತ್ ರಾಜಕುಮಾರ್ ಅವರಿಗೂ ಆ್ಯಕ್ಷನ್–ಕಟ್ ಹೇಳಿದ್ದ ಜಗನ್ನಾಥ್, ರಾಜಕುಮಾರ್ ಕುಟುಂಬವನ್ನು ನೆನಪಿಸಿಕೊಂಡರು.

ಸಿ.ಆರ್. ಮನೋಹರ್ ಈ ಚಿತ್ರಕ್ಕೆ ಹಣ ಹೂಡಿರುವ ನಿರ್ಮಾಪಕ. ಇಶಾನ್ ಎಂಬ ತಮ್ಮ ಸೋದರ ಸಂಬಂಧಿಯನ್ನು ಈ ಚಿತ್ರದ ಮೂಲಕ ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ.

ಇಶಾನ್‌ಗೆ ನಾಯಕಿಯಾಗಿರುವ ಮನ್ನಾರ್ ಚೋಪ್ರಾ, ‘ಪ್ರಿಯಾಂಕಾ ಚೋಪ್ರಾ ಅವರ ಸೋದರಿ ಎಂದೇ ಜನ ನನ್ನನ್ನು ಗುರ್ತಿಸುತ್ತಾರೆ. ಆದರೆ ರೋಗ್ ಚಿತ್ರದ ನಾಯಕಿಯಾಗಿ ನನ್ನನ್ನು ಗುರ್ತಿಸುವಂತಾಗಬೇಕು ಎಂದು ಆಶಿಸುತ್ತೇನೆ’ ಎಂದರು. ಪುರಿ ಜಗನ್ನಾಥ್ ಅವರ ತೆಲುಗಿನ ‘ಜ್ಯೋತಿಲಕ್ಷ್ಮಿ’ ಚಿತ್ರದಲ್ಲಿ ನಟಿಸಿದ್ದ ಏಂಜೆಲಾ ಕ್ರಿಸ್ಲಿಂಜ್‌ಕಿ ಈ ಚಿತ್ರದ ಮತ್ತೊಬ್ಬ ನಾಯಕಿ.

ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಹಾಡುಗಳನ್ನು ನಟ ಸುದೀಪ್ ಅದ್ದೂರಿ ವೇದಿಕೆಯಲ್ಲಿ ಅನಾವರಣ ಮಾಡಿದರು. ಕನ್ನಡ ಅವತರಣಿಕೆಯ ಐದು ಹಾಡುಗಳನ್ನು ವಿ. ನಾಗೇಂದ್ರಪ್ರಸಾದ್ ಬರೆದಿದ್ದಾರೆ. ಚಿನ್ಮಯಿ, ಶ್ರೇಯಾ ಘೋಶಾಲ್, ಸುನಿಲ್ ಕಶ್ಯಪ್, ಮಾಳವಿಕಾ, ಪ್ರಣವಿ, ಯಾಸಿನ್ ನಾಜಿರ್, ಹೇಮಚಂದ್ರ ಹಾಡಿದ್ದಾರೆ. ಅವಿನಾಶ್, ಠಾಕುರ್ ಅನೂಪ್ ಸಿಂಗ್, ಅಲಿ, ತುಳಸಿ ಶಿವಮಣಿ ತಾರಾಗಣದಲ್ಲಿದ್ದಾರೆ. ಮುಖೇಶ್ ಜಿ. ಛಾಯಾಗ್ರಹಣ, ಸುನಿಲ್ ಕಷ್ಯಪ್ ಸಂಗೀತ ಚಿತ್ರಕ್ಕಿದೆ. ಹಿಂದಿಯಲ್ಲೂ ಸಿನಿಮಾ ಮರುನಿರ್ಮಾಣ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT