ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಿಕಾ ಸ್ಥಾನಕ್ಕೆ ಮಾಳವಿಕಾ

ಬಾಲಿವುಡ್
Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇರಾನಿನ ಮಜಿದ್ ಮಜಿದಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ನಿರ್ವಹಿಸಬೇಕಿದ್ದ  ಪಾತ್ರ ನಟಿ ಮಾಳವಿಕಾ ಮೋಹನನ್ ಪಾಲಾಗಿದೆ.

ಮಜಿದಿ ಅವರ ‘ಬಿಯಾಂಡ್ ದಿ ಕ್ಲೌಡ್’ ಚಿತ್ರದ ಪ್ರಮುಖ ಪಾತ್ರಕ್ಕಾಗಿ ದೀಪಿಕಾ ಪಡುಕೋಣೆ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರ ಸ್ಕ್ರೀನ್ ಟೆಸ್ಟ್‌ ಆಗಿ ಪಾತ್ರ ಅಂತಿಮವಾಗಿತ್ತು. ಆದರೆ ಡೇಟ್ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳಿಂದ ದೀಪಿಕಾ ಅವರು ಪಾತ್ರದಿಂದ ವಂಚಿತರಾಗಿದ್ದಾರೆ.

‘ನಾನು ಮತ್ತು ವರಮಹಾಲಕ್ಷ್ಮಿ’  ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಮಾಳವಿಕಾ ಮೋಹನನ್ ಕೆಲವು ಮಲೆಯಾಳಂ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಇವರು ಖ್ಯಾತ ಸಿನಿಮಾಟೋಗ್ರಾಫರ್ ಕೆ.ಯು. ಮೋಹನನ್ ಅವರ ಮಗಳು. ‘ಬಿಯಾಂಡ್ ದಿ ಕ್ಲೌಡ್’ ಮೂಲಕ ಮಾಳವಿಕಾ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ಹಿಟ್‌ ಚಿತ್ರಗಳ ಮೂಲಕ ಬಾಲಿವುಡ್‌ ನಿರ್ದೇಶಕರ ಮೆಚ್ಚಿನ ನಾಯಕಿಯಾಗಿದ್ದ ದೀಪಿಕಾ ಅವರಿಗೆ ಪರ್ಯಾಯವಾಗಿ ಆಯ್ಕೆಯಾಗಿರುವ ಈ ಬೆಡಗಿ ಬಿ ಟೌನ್‌ನಲ್ಲಿ ನೆಲೆಯೂರುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT