ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಜಿ ಮುಖಂಡನ ಗಲ್ಲು ಕಾಯಂ

Last Updated 19 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಢಾಕಾ:  ನಿಷೇಧಿತ ಹರ್ಕತ್‌ ಉಲ್‌ ಜಿಹಾದಿ ಅಲ್‌ ಇಸ್ಲಾಮಿ ಸಂಘಟನೆಯ ಮುಖಂಡ ಮುಫ್ತಿ ಹನ್ನನ್‌  ಮತ್ತು ಇವರ ಇಬ್ಬರು ಸಹಚರರಿಗೆ ವಿಧಿಸಿದ್ದ ಮರಣದಂಡನೆಯನ್ನು ಬಾಂಗ್ಲಾದೇಶದ ಸುಪ್ರೀಂಕೋರ್ಟ್‌ ಭಾನುವಾರ ಎತ್ತಿಹಿಡಿದಿದೆ. 
 
2004ರಲ್ಲಿ ಬಾಂಗ್ಲಾದೇಶದಲ್ಲಿನ ಬ್ರಿಟನ್‌ ಹೈಕಮಿಷನರ್‌ ಅನ್ವರ್ ಚೌಧರಿ ಮೇಲಿನ ಹಲ್ಲೆ ಮತ್ತು ಮೂವರ ಸಾವಿನ ಆರೋಪ ಹನ್ನನ್‌ ಹಾಗೂ ಇವರ ಸಹಚರರ ಮೇಲೆ ಇತ್ತು. 
 
ಕಾನೂನು ಪ್ರಕಾರ ಹುನ್ನನ್‌ ಮತ್ತು  ಇತರರು ಜೀವದಾನಕ್ಕೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಬಹುದು. ಒಂದು ವೇಳೆ ಅದಕ್ಕೆ ಅವಕಾಶ ದೊರೆಯದೇ ಇದ್ದರೆ ನಾಲ್ಕು ವಾರಗಳಲ್ಲಿ ಮರಣದಂಡನೆ ಜಾರಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT