ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಸ್‌ನಿಂದ ಅಡುಗೆ ಮಾಡಿ

ಗ್ಯಾಸ್‌ಕಿಟ್ ಮತ್ತು ಸೋಲಾರ್ ಲೈಟ್ ವಿತರಣೆ ಕಾರ್ಯಕ್ರಮ
Last Updated 20 ಮಾರ್ಚ್ 2017, 5:05 IST
ಅಕ್ಷರ ಗಾತ್ರ

ಶಿರಾ: ‘ಮರ ಗಿಡಗಳನ್ನು ಕಡಿಯುವ ಅಧಿಕಾರ ಯಾರಿಗೂ ಇಲ್ಲ, ಪ್ರತಿಯೊಬ್ಬರು ಸಸಿಗಳನ್ನು ಬೆಳೆಸಬೇಕು’ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಅರಣ್ಯ ಇಲಾಖೆ ಆವರಣದಲ್ಲಿ ಭಾನುವಾರ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಗ್ಯಾಸ್‌ಕಿಟ್ ಮತ್ತು ಸೋಲಾರ್ ಲೈಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಪರಿಸರ ನಾಶದಿಂದ ಮಳೆ ಕಡಿಮೆಯಾಗಿದೆ. ಮಳೆ ಬಾರದಿದ್ದರೆ ಜನರು ನೀರಿಲ್ಲದೆ ತತ್ತರಿಸಬೇಕಾಗುತ್ತದೆ. ಆದ್ದರಿಂದ ಅರಣ್ಯ  ಕಾಪಾಡುವುದು ಅಗತ್ಯ. ಸೌಧೆಗಾಗಿ ಮರ ಕಡಿಯಬಾರದು’ ಎಂದರು.

‘ಮಹಿಳೆಯರು ಸೌಧೆಯಿಂದ ಅಡುಗೆ ಮಾಡದೆ ಗ್ಯಾಸ್ ಮೂಲಕವೇ ಅಡುಗೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು. ಜನರಿಗೆ ಅನುಕೂಲವಾಗಲಿ ಎಂದು ಅರಣ್ಯ ಇಲಾಖೆ ಗ್ಯಾಸ್ ಹಾಗೂ ಸೋಲಾರ್ ಲೈಟ್ ನೀಡಿದೆ’ ಎಂದು ಹೇಳಿದರು. 

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗಿರಿಜಮ್ಮ ಶ್ರೀರಂಗಯಾದವ್, ಲಕ್ಷ್ಮಿದೇವಿ ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಕೆ.ಆರ್.ಮಂಜುಳಾಬಾಯಿ ಶೇಷಾನಾಯ್ಕ್, ಪಾಂಡುರಂಗಪ್ಪ, ತಾಲ್ಲೂಕು ಪಂಆಯಿತಿ ಕಾರ್ಯನಿರ್ವಹಣಾಧಿಕಾರಿ ಮಹಮದ್ ಮುಬೀನ್, ಉಪ್‌ಕಾರ್ ಗ್ಯಾಸ್‌ ಮಾಲೀಕ ನಸ್ರುಲ್ಲಾ ಖಾನ್, ಆರ್ಎಫ್ಒ ಸುರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT