ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕ್ಷೇತ್ರ ಕ್ಷೀಣ: ಮಾನ್ಪಡೆ ಕಳವಳ

ಕುತ್ತಾರಿನಲ್ಲಿ ಜಿಲ್ಲಾ ರೈತ ಸಮ್ಮೇಳನ: ಸ್ವಾಮಿನಾಥನ್ ವರದಿಗೆ ಆಗ್ರಹ
Last Updated 20 ಮಾರ್ಚ್ 2017, 5:34 IST
ಅಕ್ಷರ ಗಾತ್ರ

ಉಳ್ಳಾಲ: ಕೃಷಿಕರಿಗೆ ಅನುಕೂಲವಾ ಗುವ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡುವ ಭರವಸೆಯಲ್ಲಿ ಮತ ಪಡೆದಿರುವ ಮೋದಿ ನೇತೃತ್ವದ ಸರ್ಕಾರ, ಇದೀಗ  ಬಂಡವಾಳಶಾಹಿಗಳ ಜತೆಗೆ ಕೈಜೋಡಿಸಿದೆ.

ಕೃಷಿ ಭೂಮಿ ಯನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡುತ್ತಾ ದೇಶವನ್ನು ಮಾರಾಟ ಮಾಡಲು ಹೊರಟಿದೆ ಎಂದು ಕರ್ನಾ ಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿ ತಿಯ ಅಧ್ಯಕ್ಷ ಮಾರುತಿ ಮಾನ್ಪಡೆ ಆಕ್ರೋಶ ವ್ಯಕ್ತಪಡಿಸಿದರು.

ಅವರು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯ ಕುತ್ತಾರು ಮುನ್ನೂರು ಯುವಕ ಮಂಡಲದಲ್ಲಿ ಭಾನುವಾರ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ  ರೈತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಶೇ 64 ರಷ್ಟಿದ್ದ ಕೃಷಿ, ಸದ್ಯ ಶೇ 40 ಕ್ಕೆ ಇಳಿದಿರುವುದು ಕಳ ವಳಕಾರಿ. ಶೇ 49ರಷ್ಟು ರೈತರು ಇರುವ ರಾಜ್ಯದಲ್ಲಿ, ಶೇ 13 ರಷ್ಟು ಆದಾಯ ಮಾತ್ರ ಕೃಷಿಯಿಂದ ಬರುತ್ತಿದೆ. ಆಡಳಿತ ನಡೆಸುವವರ ನೀತಿಯಿಂದ ಕೃಷಿ ಕ್ಷೇತ್ರ ಕ್ಷೀಣಿಸುತ್ತಿದೆ. ಹಿಂದಿನ ಪ್ರಧಾನಿ ನರಸಿಂಹರಾವ್‌ ಮತ್ತು ಮನಮೋಹನ್ ಸಿಂಗ್  ಸರ್ಕಾರದ ಅವಧಿಯಲ್ಲಿ ಡಬ್ಲ್ಯು ಟಿಒ ಸದಸ್ಯತ್ವಕ್ಕೆ ಮುಂದಾಗಿ, ಕೃಷಿ ಕ್ಷೇತ್ರಕ್ಕೆ ಹೊಸ ನೀತಿಗಳ ಜಾರಿಯಾ ಯಿತು. ಇದರಿಂದ ಕೃಷಿ ಕ್ಷೇತ್ರಕ್ಕೆ ಬಂಡವಾಳಶಾಹಿಗಳ ಪ್ರವೇಶವಾಯಿತು ಎಂದು ತಿಳಿಸಿದರು.

ಕೃಷಿಕರಿಗೆ ವಿದೇಶಗಳಲ್ಲಿ ಶೇ 42 ಸಬ್ಸಿಡಿ ಕೊಡುತ್ತಿದ್ದಾರೆ. ಆದರೆ ಭಾರತ ದಲ್ಲಿ ಕೇವಲ ₹3 ಸಬ್ಸಿಡಿ ಕೊಡುತ್ತಿದ್ದಾರೆ.  ರೈತರ ಪರವಾದ ನೀತಿಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಅನುಸರಿಸುತ್ತಿಲ್ಲ. ಸದ್ಯದ ಸರ್ಕಾರಗಳು ಬಸವ ವಿಮಾ ಯೋಜನೆ ಜಾರಿ ಮಾಡುವುದಾಗಿ ಹೇಳುತ್ತಿದ್ದು, ಏಳು ವರ್ಷದ ಬೆಳೆಯನ್ನು ನೋಡಿ, ವಿಮಾ ಕೊಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ರೈತ ಕಲ್ಯಾಣ ಇಲಾಖೆಯಲ್ಲಿ ಮಾತಿನ ಕಲ್ಯಾಣ ಮಾತ್ರ ನಡೆಯುತ್ತಿದೆ ಎಂದರು.

ಹಿರಿಯ  ರೈತ ಮುಂದಾಳು ಪಿ.ಗಂ ಗಯ್ಯ  ಗಟ್ಟಿ ಧ್ವಜಾರೋಹಣಗೈದರು. ಕರ್ನಾಟಕ  ಪ್ರಾಂತ  ರೈತ ಸಂಘದ ಜಿಲ್ಲಾ ಸಮಿತಿ ಕೆ.ಆರ್. ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು. 

ರೈತ ಸಂಘ ಜಿಲ್ಲಾ ಸಮಿ ತಿಯ  ಪ್ರಧಾನ ಕಾರ್ಯದರ್ಶಿ  ಕೆ.ಯಾ ದವ ಶೆಟ್ಟಿ,  ಗೌರವಾಧ್ಯಕ್ಷ  ಬಾಲಕೃಷ್ಣ ಸಾಲ್ಯಾನ್ ಕಂಪ, ಶ್ರೀನಿವಾಸ ಆಳ್ವ ಕಟ್ಟೆ ಮಾರ್ ಮಂಜನಾಡಿ, ಕೋಟೆಕಾರು  ಸೇವಾ ಸಹಕಾರಿ ಬ್ಯಾಂಕಿನ ಗೌರವಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಕಾರ್ಯಾಧ್ಯಕ್ಷ ಸಂ ಜೀವ ಭಂಡಾರಿ ತೋಡ್ದಲ,  ಕೋಶಾಧಿ ಕಾರಿ ಜಯಂತ ಅಂಬ್ಲಮೊಗರು  ಮೊದ ಲಾದವರು ಉಪಸ್ಥಿತರಿದ್ದರು.  ಪ್ರಧಾನ ಕಾರ್ಯದರ್ಶಿ ಸಂಜೀವ ಪಿಲಾರ್ ಸ್ವಾಗತಿಸಿದರು.  ವಾಸುದೇವ ಉಚ್ಚಿಲ್ ವಂದಿಸಿದರು.

*
ಕೃಷಿಕರು ಖರ್ಚು ಮಾಡಿದ ನಂತರ ಶೇ 50 ರಷ್ಟು ಲಾಭಾಂಶ ಕೊಡುವುದು ಸ್ವಾಮಿನಾಥನ್ ವರದಿಯ ಪ್ರಮುಖ ಉಲ್ಲೇಖವಾಗಿದೆ.
-ಮಾರುತಿ ಮಾನ್ಪಡೆ,
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT