ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮೇಲ ಬಂದ್ ಇಂದು

Last Updated 20 ಮಾರ್ಚ್ 2017, 6:19 IST
ಅಕ್ಷರ ಗಾತ್ರ

ಆಲಮೇಲ: ತಾಲ್ಲೂಕು ಕೇಂದ್ರದ ಸ್ಥಾನಮಾನಕ್ಕಾಗಿ ಒತ್ತಾಯಿಸಿ ನಡೆದಿ ರುವ ಆಮರಣ ಉಪವಾಸ ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿತು. ಭಾನು ವಾರ ಸಂಜೆ ಆಮರಣ ಉಪವಾಸ ನಿರತರಲ್ಲಿ ಮೂವರು ಅಸ್ವಸ್ಥಗೊಂಡು ಪ್ರತಿಭಟನೆ ತೀವ್ರವಾಯಿತು.

ಶನಿವಾರ ಶಾಸಕರು ಆಮರಣ ಉಪ ವಾಸ ಸ್ಥಳಕ್ಕೆ ಭೇಟಿ ನೀಡಿ ಬೆಂಬಲಿಸಿದ ನಂತರ ಅಹೋರಾತ್ರಿ ಆಮರಣ ಉಪ ವಾಸ ಧರಣಿ ಸತ್ಯಾಗ್ರಹ ಭಾನುವಾರವೂ ಮುಂದುವರಿಯಿತು.

ಅಸ್ವಸ್ಥಗೊಂಡ ರಮೇಶ ಭಂಟ ನೂರ, ಅಯೂಬ ದೇವರಮನಿ, ಅಶೋಕ ಭೂಸನೂರ ತೀರ ಬಳಲಿದ್ದ ರಿಂದ ಸೂಕ್ತ ಔಷಧೋಪಚಾರ ನೀಡ ಲಾಯಿತು. ಮಧ್ಯಾಹ್ನ ಡಾ. ಪ್ರಶಾಂತ ಧೂಮಗೊಂಡ ನೇತೃತ್ವದ ತಂಡ ಎಲ್ಲ ಉಪವಾಸ ನಿರತರನ್ನು ಪರೀಕ್ಷಿಸಿದರು. ಬಳಗಾನೂರ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಆರ್.ಯಂಟಮಾನ ಧರಣಿ ಸ್ಥಳಕ್ಕೆ ಭೇಟಿ ನೀಡಿದರು.

ಆಮರಣ ಉಪವಾಸದಲ್ಲಿ ತಾಲ್ಲೂಕು ಹೋರಾಟ ಒಕ್ಕೂಟದ ಪ್ರಮುಖ ರಮೇಶ ಭಂಟನೂರ, ಗ್ರಾಪಂ ಮಾಜಿ ಅಧ್ಯಕ್ಷ ಅಯೂಬ ದೇವರಮನಿ, ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಬಸವರಾಜ ಹೂಗಾರ, ನವಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಭೀಮಾಶಂಕರ ಕೊಟಾರಗಸ್ತಿ, ಪಟ್ಟಣ ಪಂಚಾಯಿತಿ ಸದಸ್ಯ ಈರಣ್ಣ ವಡಗೇರಿ, ವಿಶ್ವನಾಥ ಹಿರೇಮಠ, ಅಮೃತ ಕೊಟ್ಟಲಗಿ, ಮಾಣಿಕ ಕಲಕುಟ ಗೇರ, ಶರಣು ಗುರಕಾರ, ಅಶೋಕ ಭೂಸನೂರ, ವಾಹಬ್ ಸುಂಬಡ ಉಪವಾಸದಲ್ಲಿ ಭಾಗಿಯಾಗಿದ್ದಾರೆ.

ಸೋಮವಾರ ಆಲಮೇಲ ಬಂದ್: ತಾಲ್ಲೂಕು ಹೋರಾಟ ಒಕ್ಕೂಟದ ಮನ ವಿಗೆ ಸ್ಪಂದಿಸಿದ ವರ್ತಕರ ಸಂಘದ ಅಧ್ಯಕ್ಷ ದೇವಪ್ಪ ಗುಣಾರಿ ‘ಆಲಮೇಲ ಪಟ್ಟಣದ ಎಲ್ಲ ಕಾರ್ಯಗಳು ಸೋಮ ವಾರ ಸ್ತಬ್ಧಗೊಳ್ಳಲಿವೆ, ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದಿಲ್ಲ ಸಂಪೂರ್ಣ ಬಂದ್ ಗೆ ಕರೆ ನೀಡಿದ್ದೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT