ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ.ಕ. ಪ್ರವಾಸಿ ತಾಣಗಳ ನಿರ್ಲಕ್ಷ್ಯ

ವಿಚಾರ ಸಂಕಿರಣದಲ್ಲಿ ಡಾ.ಮಹ್ಮದ್ ಬಾರಿ ಅಭಿಮತ
Last Updated 20 ಮಾರ್ಚ್ 2017, 8:35 IST
ಅಕ್ಷರ ಗಾತ್ರ

ಸುರಪುರ: ‘ಹೈದರಾಬಾದ್‌ ಕರ್ನಾಟಕದ ಅರಸರನ್ನು ಸಾಮ್ರಾಟರು ಎಂದು ಪರಿಗಣಿಸಲಿಲ್ಲ. ಹೀಗಾಗಿ ಇಲ್ಲಿನ ಐತಿಹಾಸಿಕ ತಾಣಗಳು ಪ್ರವಾಸೋದ್ಯಮ ದಿಂದ ವಂಚಿತಗೊಂಡಿವೆ’ ಎಂದು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಮಹ್ಮದ್ ನಜುರುಲ್‌ ಬಾರಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹೈದರಾಬಾದ್‌ ಕರ್ನಾಟಕ ಪ್ರವಾಸೋದ್ಯಮ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಈ ಭಾಗದ ಇತಿಹಾಸ ಸಾಕಷ್ಟು ಶ್ರೀಮಂತವಾಗಿದ್ದರೂ ಪ್ರಚಾರದ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳಕಿಗೆ ಬಂದಿಲ್ಲ. ಹೀಗಾಗಿ ಇಲ್ಲಿನ ಐತಿಹಾಸಿಕ ತಾಣಗಳು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ದಿಗೊಳ್ಳುವಲ್ಲಿ ವಂಚಿತವಾಗಿವೆ. ಇದಕ್ಕೆ ನಿರ್ಲಕ್ಷ್ಯವೇ ಮೂಲ ಕಾರಣ’ ಎಂದು ಅಭಿಪ್ರಾಯಪಟ್ಟರು.

‘ಇತಿಹಾಸವನ್ನು ಧರ್ಮದ ಆಧಾರದಲ್ಲಿ ಅವಲೋಕಿಸಲಾಗುತ್ತಿದೆ. ಈ ಕೆಟ್ಟ ಸಂಸ್ಕೃತಿ ಬೆಳೆದು ಬಂದಿರುವುದು ವಿಷಾದನೀಯ. ದೇಶದಲ್ಲಿ ಉತ್ತರ ಭಾರತದ ಇತಿಹಾಸಕ್ಕೆ ನೀಡಿದಷ್ಟು ಮಹತ್ವ ಹೈ.ಕ. ಭಾಗದ ಇತಿಹಾಸಕ್ಕೆ ನೀಡಿಲ್ಲ’ ಎಂದರು. 

‘ಪ್ರಾಚೀನ ಹಾಗೂ ಮಧ್ಯಕಾಲಿನ ಭಾರತದ ಇತಿಹಾಸವನ್ನು ಮೆಲುಕು ಹಾಕಿದಾಗ ಹೈ.ಕ. ಭಾಗದ ಅರಸರು ಬಹುತೇಕ ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರು. ಇವರೆಲ್ಲ ಪರಮತ ಸಹಿಷ್ಣುಗಳು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಇದೆಲ್ಲ ಪರಿಗಣಿಸಿಲ್ಲ’ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಸಿ. ಮಹಾಬಲೇಶ್ವರಪ್ಪ ಮಾತನಾಡಿ, ‘ಹೈ.ಕ. ಭಾಗದ ಇತಿಹಾಸ ಅತ್ಯಂತ ಪ್ರಾಚೀನವಾಗಿದೆ. ವೇದಗಳ ಕಾಲದಿಂದಲೇ ಗುರುತಿಸಿಕೊಂಡಿದೆ. ಈ ಭಾಗದ ಅನೇಕ ಅರಸರು ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ’.

‘ಈ ಭಾಗದ ಅರಸರ ಕೊಡುಗೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ಜನರಿಗೆ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ಆಗಬೇಕಿರುವುದು ಅಗತ್ಯ ಎಂದರು.
ಪ್ರಾಚಾರ್ಯ ಡಾ.ರಾಘವೇಂದ್ರ ಗುಡುಗುಂಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ಮಲ್ಲಿಕಾರ್ಜುನ ಶೆಟ್ಟಿ, ನಗರಸಭೆ ಅಧ್ಯಕ್ಷೆ ಜ್ಯೋತಿ ವೆಂಕಟರಡ್ಡಿ ಬೋವಿ, ಡಾ.ಚಿನ್ನಯ್ಯ ಸೋಸಲೆ, ಡಾ.ಅಮರೇಶ ಯತಗಲ್ ಸಿ, ಸೋಮಶೇಖರ, ದೇವು ಪತ್ತಾರ, ಶಿವರಂಜನ ಸತ್ಯಂಪೇಟೆ, ಡಾ.ಗಣಪತಿ ಸಿನ್ನೂರ, ಡಾ.ಸರ್ವೋದಯ, ಡಾ. ರಮೇಶ ಪೋತೆ, ಶಂಭುಲಿಂಗ ವಾಣಿ, ಭೀಮಣ್ಣ ಮಾಲಿಪಾಟೀಲ,

ಶರಣಗೌಡ ಪಾಟೀಲ, ಜಿ.ವಿ. ಶಿವುಕುಮಾರ, ಜಗದೀಶ ಪತ್ತಾರ, ಗುರುರಾಜ ಕುಲಕರ್ಣಿ, ಜಗದೀಶ ತಂಬಾಕೆ, ಹಣಮಂತ ವಗ್ಗ ಸೇರಿದಂತೆ ಕಲಬುರ್ಗಿ, ಯಾದಗಿರಿ, ರಾಯಚೂರು, ಲಿಂಗಸೂಗೂರ, ಮಾನ್ವಿ, ಬೀದರ್, ಬಳ್ಳಾರಿ ಸೇರಿದಂತೆ ವಿವಿಧ ಕಾಲೇಜುಗಳ ಇತಿಹಾಸ ಉಪನ್ಯಾಸಕರು ಇದ್ದರು.
ಡಾ.ಸಂಗಣ್ಣ ರಾಂಪುರೆ ಸ್ವಾಗತಿಸಿ, ಭೀಮರಾಯ ನಿರೂಪಿಸಿ, ಸಿದ್ದಪ್ಪ ದಿಗ್ಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT