ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರನ್ನು ಕಡೆಗಣಿಸದಿರಿ: ಸಲಹೆ

Last Updated 20 ಮಾರ್ಚ್ 2017, 9:11 IST
ಅಕ್ಷರ ಗಾತ್ರ

ಮೈಸೂರು: ವೃದ್ಧಾಪ್ಯಕ್ಕೆ ಸರಿದ ಪೋಷಕ ರನ್ನು ಯುವಪೀಳಿಗೆ ನಿರ್ಲಕ್ಷಿಸುತ್ತಿದೆ ಎಂದು ಜಿಲ್ಲಾ ರೋಟರಿ ಮಾಜಿ ಗವರ್ನರ್ ಎಂ.ಲಕ್ಷ್ಮಿನಾರಾಯಣ ಬೇಸರ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181ರ ವತಿಯಿಂದ ಸರಸ್ವತಿಪುರಂ ನಲ್ಲಿನ ರೋಟರಿ ಪಶ್ಚಿಮ ಸಭಾಂಗಣ ದಲ್ಲಿ ಭಾನುವಾರ ಏರ್ಪಡಿಸಿದ್ದ  7, 8, 9ರ ರೋಟರಿ ಸಮಾವೇಶ, ಊರು ಗೋಲು–ದಾರಿದೀಪ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತ ನಾಡಿದರು.

ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಗಲು ರಾತ್ರಿ ಎನ್ನದೇ ದುಡಿಯುವ ಪೋಷಕರು, ಮಕ್ಕಳಿಂದ ಅವಜ್ಞೆಗೆ ಒಳಗಾಗುತ್ತಿದ್ದಾರೆ. ಇದು ಮುಂದೆಯೂ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗಾಗಿ, ಪೋಷಕರು ತಾವು ದುಡಿಯುತ್ತಿರುವಾಗಲೇ ತಮ್ಮ ನಿವೃತ್ತಿಯ ನಂತರಕ್ಕೆ ಒಂದಿಷ್ಟು ಹಣವನ್ನು ಉಳಿತಾಯ ಮಾಡಿಕೊಳ್ಳ ಬೇಕು. ಇಲ್ಲದಿದ್ದರೆ ಪರಿಸ್ಥಿತಿ ಬಿಗಡಾಯಿ ಸಲಿದೆ ಎಂದು ತಿಳಿಸಿದರು.

ಮಕ್ಕಳಿಗೆ ಬಾಲ್ಯದಿಂದಲೇ ಪೋಷಕರ ಮಹತ್ವ ಕುರಿತು ಅವರಿಗೆ ತಿಳಿ ಹೇಳಬೇಕು. ಆಗ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದು. ಬಾಲ್ಯದಲ್ಲಿ ನಮ್ಮನ್ನು ಮಕ್ಕಳಂತೆ ನೋಡಿಕೊಳ್ಳುವ ಪೋಷಕ ರನ್ನು ವೃದ್ಧಾಪ್ಯದಲ್ಲಿ ಮಕ್ಕಳಂತೆ ಕಾಣಬೇಕಾದುದು ಧರ್ಮ ಎಂದು ಅವರು ಕಿವಿಮಾತು ಹೇಳಿದರು.

ರಾಮಕೃಷ್ಣ ಆಶ್ರಮದ ಹಿರಿಯ ಸನ್ಯಾಸಿ ನಿತ್ಯಸ್ಥಾನಂದಜೀ ಮಹಾರಾಜ್, ಸಾಹಿತಿ ಶಿವರಾಮು ಕಾಡನಕುಪ್ಪೆ, ಅಂತರರಾಷ್ಟ್ರೀಯ ರೋಟರಿ ಜಿಲ್ಲಾ ಗವರ್ನರ್ ಡಾ.ಆರ್.ಎಸ್.ನಾಗಾರ್ಜುನ, ವಲಯ ಸಹಾಯಕ ಗವರ್ನರ್ ಯಶಸ್ವಿನಿ ಸೋಮಶೇಖರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT