ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಸೆಕ್ಟರ್ ಅಧಿಕಾರಿಗಳ ಬದಲು

ಬದಲಾದ ಅಧಿಕಾರಿಗಳು ಕೂಡಲೇ ಕೆಲಸಕ್ಕೆ ಹಾಜರಾಗುವಂತೆ ಜಿಲ್ಲಾಧಿಕಾರಿ ಬಿ.ರಾಮು ಸೂಚನೆ
Last Updated 20 ಮಾರ್ಚ್ 2017, 9:29 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ನೇಮಕವಾಗಿದ್ದ ಕೆಲವು ಸೆಕ್ಟರ್ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.

ಪಿಯುಸಿ ಪರೀಕ್ಷೆ ಹಾಗೂ ಬರ ಪರಿಸ್ಥಿತಿ ಸೇರಿದಂತೆ ಪ್ರಭಾರ ಹುದ್ದೆಗಳಲ್ಲಿ ನಿರತರಾಗಿರುವ ಅಧಿಕಾರಿಗಳ ಬದಲಿಗೆ ಹೊಸದಾಗಿ ಬೇರೆ ಅಧಿಕಾರಿಗಳನ್ನು ನೇಮಕ ಮಾಡಿ ತಿದ್ದುಪಡಿ ಆದೇಶ ಹೊರಡಿಸಲಾಗಿದೆ.

ಬದಲಾದ ಅಧಿಕಾರಿಗಳು ಕೂಡಲೇ ಕೆಲಸಕ್ಕೆ ಹಾಜರಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೀಡುವ ಸೂಚನೆಯಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು ತಿಳಿಸಿದ್ದಾರೆ.

ತಂಡದ ಸಂಖ್ಯೆ 1:  ಪೊಲೀಸ್ ಠಾಣೆ ಮತ್ತು ವ್ಯಾಪ್ತಿ- ಬೇಗೂರು (ದೂ. ಸಂ: 08226-231100) ಠಾಣೆಯ ಕಿರಣ್‌ಕುಮಾರ್ (ಮೊ: 99020 01023). ವ್ಯಾಪ್ತಿ ಪ್ರದೇಶಗಳು: ಹೊಸಮಠ, ಶ್ರೀಕಂಠಪುರ, ಚನ್ನವಡೆಯನಪುರ–1, ಯಡವನಹಳ್ಳಿ, ಹೊಣಕನಪುರ-5, ಹೊರೆಯಾಲ–1 ಮತ್ತು 2, ರಂಗೂಪುರ, ಬೆಳಚಲವಾಡಿ 1 ಮತ್ತು 2, ಕುರುಬರಹುಂಡಿ, ಬೆಟ್ಟದಮಾದಹಳ್ಳಿ.

ಮತಗಟ್ಟೆ ಸಂಖ್ಯೆ 1ರಿಂದ 8, 21, 22, 27 ಹಾಗೂ 33. ಸೆಕ್ಟರ್ ಅಧಿಕಾರಿ ಸುಂದ್ರಮ್ಮ, ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕಿ (ಮೊ: 99452 92355) ಅವರ ಬದಲಿಗೆ ಉಮೇಶ್, ರೇಷ್ಮೆ ಸಹಾಯಕ ನಿರ್ದೇಶಕ, ರೇಷ್ಮೆ ಇಲಾಖೆ, ಯಳಂದೂರು (ಮೊ: 89700 53954) ಅವರನ್ನು ನೇಮಕ ಮಾಡಲಾಗಿದೆ.

ತಂಡದ ಸಂಖ್ಯೆ 3: ಪೊಲೀಸ್‌ ಠಾಣೆ ಮತ್ತು ವ್ಯಾಪ್ತಿ- ಬೇಗೂರು, ಕಿರಣ್‌ಕುಮಾರ್ (ದೂ.ಸಂ: 08226-231100) ವ್ಯಾಪ್ತಿ ಪ್ರದೇಶಗಳು: ಚಿಕ್ಕಾಟಿ 1 ಮತ್ತು 2, ತೊಂಡವಾಡಿ-1 ಮತ್ತು 2, ಹಾಲಹಳ್ಳಿ, ಕಮರಹಳ್ಳಿ, ಸೋಮಹಳ್ಳಿ- 1, 2 ಮತ್ತು 3, ಕೊಡಗಾಪುರ, ಶಿಗೇವಾಡಿ, ಮರಳಾಪುರ. ಮತಗಟ್ಟೆ ಸಂಖ್ಯೆ 11ರಿಂದ 14, 16,17 ಹಾಗೂ 50 ರಿಂದ 55.

ಸೆಕ್ಟರ್ ಅಧಿಕಾರಿ ವರಲಕ್ಷ್ಮಿ, ಸಹಾಯಕ ನಿರ್ದೇಶಕಿ, ಉಪ ಖಜಾನಾಧಿಕಾರಿ ಕಚೇರಿ, ಗುಂಡ್ಲುಪೇಟೆ ಅವರ ಬದಲಿಗೆ ದೇವರಾಜ್, ಸಹಾಯಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ, ಅಟ್ಟುಗೂಳಿಪುರ, ಚಾಮರಾಜನಗರ ತಾಲ್ಲೂಕು (ಮೊ: 96201 52142) ಅವರನ್ನು ನೇಮಿಸಲಾಗಿದೆ.

ತಂಡದ ಸಂಖ್ಯೆ 8: ಪೊಲೀಸ್‌ ಠಾಣೆ ಮತ್ತು ವ್ಯಾಪ್ತಿ: ಚಾಮರಾಜನಗರ ಗ್ರಾಮಾಂತರ ಠಾಣೆಯ (ದೂ.ಸಂ: 08226-222092), ಲೋಹಿತ್ ಕುಮಾರ್ (ಮೊ: 94808 04646). ವ್ಯಾಪ್ತಿ ಪ್ರದೇಶಗಳು:  ಹೆಗ್ಗವಾಡಿ, ಭುಜಗನಪುರ, ಕೆರೆಹಳ್ಳಿ, ಮುಕ್ಕಡಹಳ್ಳಿ- 1 ಮತ್ತು 2, ಹೆಗ್ಗವಾಡಿ, ಮಲೆಯೂರು, ಮೂಡ್ನಾಕೂಡು 1 ಮತ್ತು 2, ಸಾಗಡೆ 1, 2, 3. ಮತಗಟ್ಟೆ ಸಂಖ್ಯೆ 65 ರಿಂದ 70, 73, 74 ಹಾಗೂ 83 ರಿಂದ 87.

ಸೆಕ್ಟರ್ ಅಧಿಕಾರಿ ರಾಮಕೃಷ್ಣಯ್ಯ, ಸಿಡಿಪಿಓ, ಗುಂಡ್ಲುಪೇಟೆ (ಮೊ: 98455 65133) ಮಹೇಶ್, ಮಕ್ಕಳ ಕಾರ್ಮಿಕ ಯೋಜನಾ ವ್ಯವಸ್ಥಾಪಕ, ಚಾಮರಾಜನಗರ (ಮೊ: 98861 64951) ಅವರ ಬದಲಿಗೆ ಕ್ರಮವಾಗಿ ಮದನ್ ಮೋಹನ್, ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕೃಷಿ ಇಲಾಖೆ, (ಮೊ:  87624 22339) ಹಾಗೂ ಸತೀಶ್, ಸಹಾಯಕ ನಿರ್ದೇಶಕ, ಅಕ್ಷರ ದಾಸೋಹ, ಗುಂಡ್ಲುಪೇಟೆ (ಮೊ: 94808 35584) ಅವರನ್ನು ನೇಮಿಸಲಾಗಿದೆ.

ತಂಡದ ಸಂಖ್ಯೆ 10: ಪೊಲೀಸ್‌ ಠಾಣೆ ಮತ್ತು ವ್ಯಾಪ್ತಿ: ತೆರಕಣಾಂಬಿ (ದೂ.ಸಂ: 08229-232235), ಸಾಗರ್ (ಮೊ: 94808 04652). ವ್ಯಾಪ್ತಿ ಪ್ರದೇಶಗಳು:  ಪರಮಾಪುರ, ಪಡಗೂರು, ಯಡಹುಂಡಿ, ಕೆಲಸೂರು- 1 ಮತ್ತು 2, ಮಲ್ಲಮ್ಮನಹುಂಡಿ, ಮೂಡಗೂರು, ಶ್ಯಾನಡ್ರಹಳ್ಳಿ. ಬಲಚವಾಡಿ, ಕೆಲಸೂರುಪುರ, ಚಿಕ್ಕತುಪ್ಪೂರು- 1 ಮತ್ತು 2, ಕಿಲಗೆರೆ, ಚನ್ನಂಜಯ್ಯನಹುಂಡಿ. ಮತಗಟ್ಟೆ ಸಂಖ್ಯೆ 93 ರಿಂದ 102, 230 ರಿಂದ 234.

ಸೆಕ್ಟರ್ ಅಧಿಕಾರಿ ಎಲ್. ಗುರುಲಿಂಗಯ್ಯ, ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ (ಮೊ: 94489 99390) ಅವರ ಬದಲಾಗಿ ಸ್ವಾಮಿ, ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ, ಜಿಲ್ಲಾ ಪಂಚಾಯಿತಿ ಅವರನ್ನು ನೇಮಿಸಲಾಗಿದೆ.

ತಂಡದ ಸಂಖ್ಯೆ 11: ಪೊಲೀಸ್‌ ಠಾಣೆ ಮತ್ತು ವ್ಯಾಪ್ತಿ: ತೆರಕಣಾಂಬಿ, ಸಾಗರ್(ದೂರವಾಣಿ ಸಂಖ್ಯೆ 08229-232235), ವ್ಯಾಪ್ತಿ ಪ್ರದೇಶಗಳು: ಲಕ್ಕೂರು, ಗುರುವಿನಪುರ, ತೆರಕಣಾಂಬಿಹುಂಡಿ- 1 ಮತ್ತು 2, ತೆರಕಣಾಂಬಿ 1ರಿಂದ 5, ಬೆರಟಹಳ್ಳಿ, ಕಗ್ಗಳ 1, 2, ಕಗ್ಗಳದಹುಂಡಿ, ತ್ರಿಯಂಬಕಪುರ. ಮತಗಟ್ಟೆ ಸಂಖ್ಯೆ 103 ರಿಂದ 116.

ಸೆಕ್ಟರ್ ಅಧಿಕಾರಿ ಎಚ್.ಎಸ್. ಗೀತಾಂಬಾ, ಪ್ರಾಂಶುಪಾಲರು, ಡಯಟ್, ಚಾಮರಾಜನಗರ (ಮೊ: 94489 99363) ಅವರ ಬದಲಿಗೆ ಶಿವರಾಮೇಗೌಡ, ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್), ಚಾಮರಾಜನಗರ (ಮೊ: 94485 72952) ಅವರನ್ನು ನೇಮಿಸಲಾಗಿದೆ.

ತಂಡದ ಸಂಖ್ಯೆ 12: ಪೊಲೀಸ್‌ ಠಾಣೆ ಮತ್ತು ವ್ಯಾಪ್ತಿ: ತೆರಕಣಾಂಬಿ, ಸಾಗರ್ (ದೂ.ಸಂ: 08229-232235), ವ್ಯಾಪ್ತಿ ಪ್ರದೇಶಗಳು: ಕರಕಲಮಾದಹಳ್ಳಿ, ಬೊಮ್ಮನಹಳ್ಳಿ, ಕುರುಬರಹುಂಡಿ, ರಾಮಯ್ಯನಪುರ, ಚಿರಕನಹಳ್ಳಿ, ವಡ್ಡಗೆರೆ, ಕುಂದಕೆರೆ 1 ಮತ್ತು 2, ಹೆಗ್ಗವಾಡಿ, ಉಪಕಾರ ಕಾಲೊನಿ (ಬಿ), ಯರಿಯೂರು. ಮತಗಟ್ಟೆ ಸಂಖ್ಯೆ 124ರಿಂದ 134.

ಸೆಕ್ಟರ್ ಅಧಿಕಾರಿ ಡಿ. ನಾಗವೇಣಿ, ಪ್ರಭಾರ ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಮೊ: 94811 2479) ಅವರ ಸ್ಥಾನಕ್ಕೆ ಯಾಸಿನ್, ಸಹಾಯಕ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ, ಅಟ್ಟುಗೂಳಿಪುರ, ಚಾಮರಾಜನಗರ ತಾಲ್ಲೂಕು (ಮೊ: 88616 82300) ಅವರನ್ನು ನೇಮಿಸಲಾಗಿದೆ.

ತಂಡದ ಸಂಖ್ಯೆ 13: ಪೊಲೀಸ್‌ ಠಾಣೆ ಮತ್ತು ವ್ಯಾಪ್ತಿ: ತೆರಕಣಾಂಬಿ, ಸಾಗರ್ (ದೂ.ಸಂ: 08229-232235). ವ್ಯಾಪ್ತಿ ಪ್ರದೇಶಗಳು: ದೇವಾಪುರ, ಶೀಲವಂತಪುರ, ಸೋಮನಪುರ, ಕೊಡಸೋಗೆ- 1, 2, 3, ಕಡತಾಳಕಟ್ಟೆಹುಂಡಿ, ಕಂದೇಗಾಲ, ಬೆಟ್ಟಹಳ್ಳಿ, ಶಿಂಡನಪುರ, ದೊಡ್ಡತುಪ್ಪೂರು. ಮತಗಟ್ಟೆ ಸಂಖ್ಯೆ 117ರಿಂದ 123, 226 ರಿಂದ 229.

ಸೆಕ್ಟರ್ ಅಧಿಕಾರಿ ಬಿ.ಎಸ್. ಮೋಹನ್, ಜಿಲ್ಲಾ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಮೊ: 97408 00544) ಅವರ ಬದಲಿಗೆ ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ವ್ಯವಸ್ಥಾಪಕ, ರಾಜ್ಯ ಹಣಕಾಸು ಸಂಸ್ಥೆ (ಮೊ: 99452 69388) ಅವರನ್ನು ನೇಮಕವಾಗಿದೆ.

ತಂಡದ ಸಂಖ್ಯೆ 14: ಪೊಲೀಸ್‌ ಠಾಣೆ ಮತ್ತು ವ್ಯಾಪ್ತಿ: ತೆರಕಣಾಂಬಿ, ಸಾಗರ್ (ದೂ.ಸಂ: 08229-232235). ಸಂದೀಪ್ ಕುಮಾರ್ . ವ್ಯಾಪ್ತಿ ಪ್ರದೇಶಗಳು ಅಂಕನಹಳ್ಳಿ 1,2, ಬೊಮ್ಮಲಾಪುರ-1, 2, 3, ಹುಲ್ಲೇಪುರ, ಶಿವಪುರ 1 ಮತ್ತು 2, ಅಣ್ಣೂರು, ಅಣ್ಣೂರುಕೇರಿ 1,2,3, ಕೋಡಹಳ್ಳಿ 1, 2. ಮತಗಟ್ಟೆ ಸಂಖ್ಯೆ 148 ರಿಂದ 152, 155ರಿಂದ 157, 220ರಿಂದ 225.

ಸೆಕ್ಟರ್ ಅಧಿಕಾರಿ ಶೋಭಾ, ಜಿಲ್ಲಾ ವ್ಯವಸ್ಥಾಪಕಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, (ಮೊ: 94491 69859), ಅವರ ಬದಲಿಗೆ ಸೋಮಯ್ಯ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ಜಂಟಿ ಕೃಷಿ ನಿರ್ದೇಶಕರ ಕಚೇರಿ, ಚಾಮರಾಜನಗರ (ಮೊ: 99005 94349) ಅವರನ್ನು ನೇಮಿಸಲಾಗಿದೆ.

ತಂಡದ ಸಂಖ್ಯೆ 16: ಪೊಲೀಸ್‌ ಠಾಣೆ ಮತ್ತು ವ್ಯಾಪ್ತಿ: ಗುಂಡ್ಲುಪೇಟೆ (ದೂ.ಸಂ: 08229-222228), ಸಂದೀಪ್ ಕುಮಾರ್. ವ್ಯಾಪ್ತಿ ಪ್ರದೇಶಗಳು: ಚಿಕ್ಕಯಲಚಟ್ಟಿ, ಯಲಚಟ್ಟಿ, ಜಕ್ಕಹಳ್ಳಿ, ಕಣಿಯನಪುರ ಕಾಲೊನಿ, ಮಂಗಲ, ಬಂಡಿಪುರ, ಮಗುವಿನಹಳ್ಳಿ, ಮೇಲುಕಾಮನಹಳ್ಳಿ, ಕಲ್ಲೇಗೌಡನಹಳ್ಳಿ, ಪಸಯ್ಯನಪುರ, ಹಂಗಳ 1 ರಿಂದ 5. ಮತಗಟ್ಟೆ ಸಂಖ್ಯೆ 137ರಿಂದ 144, 158, 159, 165 ರಿಂದ 169.

ಸೆಕ್ಟರ್ ಅಧಿಕಾರಿ ಸಿದ್ದರಾಜು, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ನೀರಾವರಿ ಇಲಾಖೆ, ಚಾಮರಾಜನಗರ (ಮೊ:  94491 91832) ಅವರ ಬದಲಿಗೆ ಮಹದೇವು, ರೇಷ್ಮೆ ವಿಸ್ತರಣಾಧಿಕಾರಿ, ತಾಂತ್ರಿಕ ಸೇವಾ ಕೇಂದ್ರ, ಕಾಮಗೆರೆ, ಕೊಳ್ಳೇಗಾಲ ತಾಲ್ಲೂಕು (ಮೊ: 99803 65942) ಅವರನ್ನು ನೇಮಿಸಿದೆ.

ತಂಡದ ಸಂಖ್ಯೆ 17: ಪೊಲೀಸ್‌ ಠಾಣೆ ಮತ್ತು ವ್ಯಾಪ್ತಿ: ಗುಂಡ್ಲುಪೇಟೆ (ದೂ.ಸಂ: 08229-222228), ಸಂದೀಪ್ ಕುಮಾರ್ . ವ್ಯಾಪ್ತಿ ಪ್ರದೇಶಗಳು: ದೇವರಹಳ್ಳಿ, ಹಂಗಳದ ಹೊಸಹಳ್ಳಿ, ಕಳ್ಳೀಪುರ, ಗೋಪಾಲಪುರ, ಹೊನ್ನೇಗೌಡಹಳ್ಳಿ. ಗೋಪಾಲಪುರ, ಕಣ್ಣೇಗಾಲ, ಮದ್ದಯ್ಯನಹುಂಡಿ, ಭೀಮನಬೀಡು  1, 2, 3, ಕೂತನೂರು 1, 2, ಮಲ್ಲಯ್ಯನಪುರ 1, 2. ಮತಗಟ್ಟೆ ಸಂಖ್ಯೆ 170 ರಿಂದ 177, 192ರಿಂದ 198.

ಸೆಕ್ಟರ್ ಅಧಿಕಾರಿ ರಂಗನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕರ್ನಾಟಕ ಗೃಹ ಮಂಡಳಿ, ಚಾಮರಾಜನಗರ (ಮೊ: 94490 38966) ಅವರ ಬದಲಾಗಿ ರವೀಂದ್ರ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕರ್ನಾಟಕ ಗೃಹ ಮಂಡಳಿ, ಚಾಮರಾಜನಗರ (ಮೊ: 94484 70311) ಅವರನ್ನು ನೇಮಕವಾಗಿದೆ.

ತಂಡದ ಸಂಖ್ಯೆ 18: ಪೊಲೀಸ್‌ ಠಾಣೆ ಮತ್ತು ವ್ಯಾಪ್ತಿ: ಗುಂಡ್ಲುಪೇಟೆ (ದೂ.ಸಂ: 08229-222228), ಸಂದೀಪ್ ಕುಮಾರ್. ವ್ಯಾಪ್ತಿ ಪ್ರದೇಶಗಳು: ಬೇರಂಬಾಡಿ 1, 2, ಮದ್ದೂರು ಕಾಲೊನಿ, ಚನ್ನಮಲ್ಲಿಪುರ, ಹೊಂಗಹಳ್ಳಿ 1 ಮತ್ತು 2, ಮುಕ್ತಿಕಾಲೊನಿ, ಬರಗಿ 1, 2, ಮುಂಟೀಪುರ, ಮೂಕಹಳ್ಳಿ, ತೆಂಕಲಹುಂಡಿ, ಹೊನ್ನಶೆಟ್ಟರಹುಂಡಿ, ಹುಲಸಗುಂದಿ, ಮಡಹಳ್ಳಿ, ಉತ್ತಂಗೆರೆಹುಂಡಿ. ಮತಗಟ್ಟೆ ಸಂಖ್ಯೆ 178 ರಿಂದ 191, 241, 242.

ಸೆಕ್ಟರ್ ಅಧಿಕಾರಿ  ಮಹಾಂತೇಶ್, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ, ಚಾಮರಾಜನಗರ (ಮೊ: 94498 21666), ಅವರ ಬದಲಾಗಿ ಮುರುಳೇಶ್, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ, ಚಾಮರಾಜನಗರ (ಮೊ: 99451 19833) ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT