ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂ ವಾಲೆಟ್‌ ಹಣಕ್ಕೆ ವಿಮೆ ಸೌಲಭ್ಯ

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ದೇಶದ ಅತಿದೊಡ್ಡ ಮೊಬೈಲ್‌ ವಾಲೆಟ್‌ ಆಗಿರುವ ಪೇಟಿಎಂ,  ವಿಮೆ ಸೌಲಭ್ಯಕ್ಕೆ ಚಾಲನೆ ನೀಡಿದೆ. ವಾಲೆಟ್‌ನಲ್ಲಿ ಇರುವ ಗ್ರಾಹಕರ ಮತ್ತು ವರ್ತಕರ ಹಣದ ದುರ್ಬಳಕೆ ತಡೆಗಟ್ಟಲು ಈ ವಿಮೆ ಸೌಲಭ್ಯ ಜಾರಿಗೆ ತರಲಾಗಿದೆ. 
 
ವಂಚನೆ ಸ್ವರೂಪದ ವಹಿವಾಟು, ಮೊಬೈಲ್‌ ಕಳ್ಳತನ, ವಾಲೆಟ್‌ ದುರ್ಬಳಕೆಯಂತಹ ಸಂದರ್ಭಗಳಲ್ಲಿ ನಡೆದ ವಹಿವಾಟಿನ ಮೊತ್ತವನ್ನು ಮರಳಿಸಲಾಗುವುದು. ಈ ವಿಮೆ ಸೌಲಭ್ಯಕ್ಕೆ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ.
 
ವಾಲೆಟ್‌ನಲ್ಲಿನ ಹಣಕ್ಕೆ ಸಂಪೂರ್ಣ ಸುರಕ್ಷತೆ ಒದಗಿಸಲು ಸಂಸ್ಥೆ ಈ ಕ್ರಮ ಕೈಗೊಂಡಿದೆ. ವಾಲೆಟ್‌ನಲ್ಲಿನ ಹಣ ಅಥವಾ ಗರಿಷ್ಠ ₹ 20 ಸಾವಿರದ ಮೊತ್ತಕ್ಕೆ ವಿಮೆ ರಕ್ಷಣೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT