ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲೆಬ್ರಿಟಿಗಳ ಜಲರಕ್ಷಣೆ ಪಾಠ

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹೋಳಿ ಆಡಲಾರೆನೆಂದ ನಟಿ

ಫಿಟ್‌ನೆಸ್‌ ಐಕಾನ್‌ ಗುಲ್‌ ಪನಾಗ್‌, ಸಾಮಾಜಿಕ ಜಾಲತಾಣಗಳಲ್ಲಿ ನೀರು ಹೇಗೆ ಉಳಿಸುವುದು ಎಂಬ ಸಲಹೆ ನೀಡುತ್ತಲೇ ಇರುತ್ತಾರೆ. ಕಳೆದ ವರ್ಷ ಅವರು ಚಂಡೀಗಡದ ಕೆಲವು ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾದ ಕಾರಣಕ್ಕೆ ಹೋಳಿ ಆಚರಣೆಯನ್ನು ಆಡಿರಲಿಲ್ಲ.

‘ಹೋಳಿ ಆಡುವುದರಿಂದ ತುಂಬಾ ನೀರು ಪೋಲಾಗುತ್ತದೆ. ನೀರಿನ ಅಭಾವ ಇರುವುದರಿಂದ ನಾನು ಬಣ್ಣದ ಹಬ್ಬವನ್ನು ಈ ಬಾರಿ ಆಡುತ್ತಿಲ್ಲ’ ಎಂದಿದ್ದರು. ‘ಪರಿಸರ ರಕ್ಷಿಸಬೇಕಾದರೆ ಜಲ ಸಂರಕ್ಷಣೆ ಮಾಡಬೇಕು. ಮನೆಯಲ್ಲಿ ಎಲ್ಲರೂ ಮಿತವಾಗಿ ನೀರು ಬಳಸುವಂತೆ ಜಾಗ್ರತೆ ವಹಿಸುತ್ತೇನೆ. ಅವಶ್ಯಕತೆ ಇಲ್ಲದಾಗ ನಲ್ಲಿಯಲ್ಲಿ ಸುಮ್ಮನೆ  ನೀರು ಹರಿಯಲು ಬಿಡಬಾರದು’ ಎಂದು ಸಲಹೆ ನೀಡಿದ್ದಾರೆ. 

***

ರೂಪದರ್ಶಿಯಿಂದ ನೀರಿನ ಜಾಗೃತಿ

ಬ್ರೆಜಿಲ್‌ ರೂಪದರ್ಶಿ ಜಿಸೆಲೆ ಬಂಡ್‌ಚೆನ್‌ ಪರಿಸರ ಕಾರ್ಯಕ್ರಮದ ರಾಯಭಾರಿ. ಇವರ ಪರಿಸರ ಜಾಗೃತಿ ಬೆಳೆದಿದ್ದು ಭಾರತದ ಅಮೆಜಾನ್‌ ರೇನ್‌ಫಾರೆಸ್ಟ್‌ನಲ್ಲಿ.

ಜಲಮಾಲಿನ್ಯ, ಅರಣ್ಯ ನಾಶದ ವಿರುದ್ಧ ಇವರು ಹಲವು ಬಾರಿ ಧ್ವನಿ ಎತ್ತಿದ್ದಾರೆ. ಅಲ್ಲದೆ ತಮ್ಮ ಸ್ವಂತ ಊರಿನಲ್ಲಿ ‘ಶುದ್ಧ ನೀರಿನ ಪ್ರಾಜೆಕ್ಟ್’ ಪ್ರಾರಂಭಿಸಿದರು. ಸ್ಥಳೀಯ ಮರಗಳ ಕಸಿ ಮತ್ತು ಸೂಕ್ಷ್ಮ ಜಲಾಯನ ನೀರು ಸಂಗ್ರಹ ಇವರು ಪ್ರೋತ್ಸಾಹ ನೀಡಿದ್ದಾರೆ. 

***

ಅಭಿಯಾನಕ್ಕೆ ಜೊತೆಯಾದ ಸೆಲೆನಾ

ಹಾಲಿವುಡ್‌ ನಟಿ ಸೆಲೆನಾ ಶುದ್ಧ ಕುಡಿಯುವ ನೀರು ಒದಗಿಸುವ ‘ಟ್ಯಾಪ್‌ ಪ್ರಾಜೆಕ್ಟ್‌’ಗೆ ರಾಯಭಾರಿಯಾಗಿದ್ದಾರೆ.  ಈ ಪ್ರಾಜೆಕ್ಟ್‌ ಯಶಸ್ವಿಯಾಗಲು ₹65 (ಒಂದು ಡಾಲರ್‌) ಆದರೂ ನೀಡುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಪ್ರತಿಯೊಬ್ಬರು ಶುದ್ಧೀಕರಿಸಿದ ನೀರನ್ನೇ ಕುಡಿಯಬೇಕು.

ಈಗ ವಾತಾವರಣ ಕೆಡುತ್ತಿದೆ. ಇದರಿಂದ ಹಲವು ಕಾಯಿಲೆಗಳು ಉಂಟಾಗುತ್ತಿದೆ. ಹಾಗಾಗಿ ಈ ಅಭಿಯಾನಕ್ಕೆ ಪ್ರತಿಯೊಬ್ಬರೂ ಕೈಜೋಡಿ. ಮಕ್ಕಳಿಗೂ ಶುದ್ಧ ನೀರನ್ನೇ ನೀಡಿ ಎಂದು ಸಲಹೆ ಹೇಳಿದ್ದಾರೆ.

***

ನೀರು ಉಳಿಸಿ ಎಂದ ತಮನ್ನಾ

ದೇಶದ ಹಲವು ಕಡೆ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ. ಹಾಗಾಗಿ ನೀರು ವ್ಯರ್ಥವಾಗದಂತೆ ಜಾಗ್ರತೆ ವಹಿಸಿ. ದಯವಿಟ್ಟು ನೀರನ್ನು ಮಿತವಾಗಿ ಬಳಸಿ ಎಂದು ಟ್ವೀಟ್‌ ಮಾಡುವ ಮೂಲಕ ಅಭಿಮಾನಿಗಳ ಬಳಿ ನಟಿ ತಮನ್ನಾ ವಿನಂತಿಸಿಕೊಂಡಿದ್ದಾರೆ.

***

ನೀರಿನ ಮಹತ್ವದ ಜಾಗೃತಿ

‘ನಿಮ್ಮ ಮನೆಯಲ್ಲಿ ಸಾಕಾಗುವಷ್ಟು ನೀರಿದೆ ಎಂದರೆ ನೀವು ಪುಣ್ಯವಂತರು. ಪ್ರಪಂಚದಲ್ಲಿ ಶೇ 90ರಷ್ಟು ಮಂದಿ ನೀರಿಲ್ಲದೆ ಪರದಾಡುತ್ತಿದ್ದಾರೆ. ನೀರು ಸಮುದಾಯದ ಸಂಪನ್ಮೂಲ. ಅದನ್ನು ಮಿತವಾಗಿ ಬಳಸಬೇಕು. ಉಳಿದವರಿಗೂ ಬೇಕು ಎಂಬ ಅರಿವಿರಬೇಕು. ಅವಶ್ಯಕತೆಗಿಂತ ಹೆಚ್ಚಾಗಿ ಬಳಸುವುದು ಮುಂದುವರೆದರೆ ಸದ್ಯದಲ್ಲಿಯೇ ಅದು ನಮಗೆ ಪಾಠ ಕಲಿಸಲಿದೆ’ ಎನ್ನುವ ಮೂಲಕ ಅವರು ನೀರಿನ ಮಹತ್ವದ ಅರಿವು ಮಾಡಿಸಿದ್ದಾರೆ ನಿರ್ದೇಶಕ ಶೇಖರ್‌ ಕಪೂರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT