ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಸಬಲೀಕರಣದ 10 ಮಂತ್ರಗಳು

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಆಧುನಿಕ ಭಾರತೀಯ ಮಹಿಳೆಯರು  ಹಳೆಯ ಸಂಪದ್ರಾಯಗಳನ್ನು ಮೀರಿ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಹೊಸ ಜವಾಬ್ದಾರಿಗಳನ್ನು ವಹಿಸಿಕೊಂಡು ವೃತ್ತಿಪರರಾಗುತ್ತಿದ್ದಾರೆ.ಆರ್ಥಿಕವಾಗಿ ಸ್ವಾವಲಂಬಿಯಾಗುವ ಮೂಲಕ ಇಂದಿನ ಮಹಿಳೆಯರು ಸಮರ್ಥವಾಗಿ ಮತ್ತು ಸ್ವತಂತ್ರವಾಗಿ ಬದುಕು ಸಾಗಿಸುವ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಮಹಿಳೆಯರು ತಮ್ಮ ಅಸ್ಮಿತೆಗಾಗಿ ವ್ಯಕ್ತಿತ್ವದ ಛಾಪು ಮೂಡಿಸುವುದು ಸಹ ಮಹತ್ವದ್ದಾಗಿದೆ. ಅದು ಮನೆಯಲ್ಲಿರಬಹುದು, ಕಚೇರಿ ಇರಬಹುದು ಅಥವಾ ಸಮಾಜದಲ್ಲಿರಬಹುದು. ಹೀಗಾಗಿಯೇ ಆರ್ಥಿಕವಾಗಿ ಅವಲಂಬನೆಯಯನ್ನು ತಪ್ಪಿಸಬೇಕಾಗಿದೆ. ವಿಚ್ಛೇದನ, ಸಾವು ಅಥವಾ ಕೌಟುಂಬಿಕ ಸಮಸ್ಯೆಗಳಂತಹ ಸಂಕಷ್ಟಗಳು ಎದುರಾದಾಗ ಸಮರ್ಥವಾಗಿ ಬದುಕನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ಸ್ವಾವಲಂಬನೆಯಾಗಿದ್ದರೆ ಬದುಕು ಸಹ ಬಹುತೇಕ ಸುಗಮವಾಗಿ ಸಾಗಿಸಲು ಸಹಕಾರಿಯಾಗುತ್ತದೆ. ಹಣಕಾಸು ಉಳಿತಾಯಕ್ಕೆ ಹಲವು ರೀತಿಯ ಯೋಜನೆಗಳಿವೆ. ವಿಮೆ ಸೇರಿದಂತೆ ಹಣ ಹೂಡಿಕೆಗೆ ಹತ್ತಾರು ಯೋಜನೆಗಳಿವೆ.

ಹಣಕಾಸಿನ ಯೋಜನೆಗಳು
ಹಣಕಾಸಿನ ಉದ್ದೇಶಗಳ ಬಗ್ಗೆ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಶಿಕ್ಷಣ, ಸುಗಮವಾದ ಬದುಕು, ನಿವೃತ್ತಿ ಜೀವನ, ಹಣದುಬ್ಬರವೂ ಸೇರಿದಂತೆ ಎಲ್ಲ ಅಂಶಗಳನ್ನು ಸಮಗ್ರವಾಗಿ ಅರಿತುಕೊಂಡು ವ್ಯವಸ್ಥಿತವಾಗಿ ಹಣವನ್ನು ವಿವಿಧ ಯೋಜನೆಗಳಲ್ಲಿ ಹೂಡಬೇಕು. ಮಕ್ಕಳ ಶಿಕ್ಷಣ ಬಗ್ಗೆ ಯೋಚಿಸುತ್ತದ್ದರೆ ಭವಿಷ್ಯದಲ್ಲಿ ಅದು ಎಷ್ಟು ದುಪ್ಪಟ್ಟಾಗಲಿದೆ ಎನ್ನುವ ಬಗ್ಗೆಯೂ ಯೋಚಿಸಬೇಕು. ವೃತ್ತಿ ಶಿಕ್ಷಣ ಪದವಿ ಕೋರ್ಸ್‌ಗಳಿಗೆ ಇಂದು ₹4 ಲಕ್ಷ ವೆಚ್ಚವಾಗುತ್ತಿದ್ದರೆ, 10 ವರ್ಷಗಳ ನಂತರ ₹20 ಲಕ್ಷವಾಗುತ್ತದೆ. ಹೀಗಾಗಿ ಅದರಂತೆ ಹಣ ಹೂಡಿಕೆ ಮಾಡಬೇಕು.

ವೈಯಕ್ತಿಕ ಸಂಶೋಧನೆ
ಉತ್ತಮ ಅರ್ಹತೆ ಹೊಂದಿರುವ ಹಣಕಾಸಿನ ಯೋಜನಾಕಾರರು ನಿಮಗೆ ಹಣಕಾಸಿನ ಹೂಡಿಕೆಯ ಸಲಹೆ ನೀಡಬಹುದು. ಆದರೆ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ನೀವೇ ವಿವಿಧ ಹಣಕಾಸು ಯೋಜನೆಗಳಲ್ಲಿ ಹಣ ಹೂಡಬಹುದು. ಈ ಬಗ್ಗೆ ಅಂತರ್ಜಾಲದಲ್ಲೂ ಸಾಕಷ್ಟು ಮಾಹಿತಿ ದೊರೆಯುತ್ತದೆ. ಉದಾಹರಣೆಗೆ ನೀವು ವೈದ್ಯಕೀಯ ವಿಮೆ ಬಗ್ಗೆ ಯೋಚಿಸುತ್ತಿದ್ದರೆ ಇದಕ್ಕಾಗಿಯೇ ಹಲವು ವೆಬ್‌ಸೈಟ್‌ಗಳಿವೆ. ಈ ವೆಬ್‌ಸೈಟ್‌ಗಳಿಂದ ಮಾಹಿತಿ ಪಡೆದು ವೈದ್ಯಕೀಯ ವಿಮೆ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬಹುದು.

ವೈಯಕ್ತಿಕ ಹಣಕಾಸು ಯೋಜನೆ
ಇತರರನ್ನು ಅನುಸರಿಸಿ ಹಣ ಹೂಡಿಕೆ ಮಾಡುವ ಪ್ರವೃತ್ತಿ ಹೂಡಿಕೆದಾರರಲ್ಲಿ ಸಾಮಾನ್ಯವಾಗಿದೆ. ಇದು ತಪ್ಪು. ಯಾವಾಗಲೂ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಹಣ ಹೂಡಿಕೆ ಮಾಡಬೇಕು. ಹೂಡಿಕೆಗೂ ನಿರ್ದಿಷ್ಟವಾದ ಉದ್ದೇಶಗಳಿದ್ದರೆ ಉತ್ತಮ.ಸಾಕಷ್ಟು ಸಮಯಾವಕಾಶ
ಹೂಡಿಕೆ ಯೋಜನೆಯ ಸಮಯದ ಬಗ್ಗೆ ಚಿಂತನೆ ನಡೆಸಬೇಕು. ಹೂಡಿಕೆ ಮತ್ತು ಅವಧಿಗೆ ತಾಳೆಯಾಗುವಂತೆ ಲೆಕ್ಕಾಚಾರ ಹಾಕಬೇಕು.

ದೀರ್ಘಾವಧಿಯ ಹಣ ಹೂಡಿಕೆ ಮಾಡುವ ಯೋಜನೆಯಿಂದ ತಕ್ಕಣಕ್ಕೆ ಲಾಭ ನಿರೀಕ್ಷಿಸುವುದು ತಪ್ಪು. ವಿವಿಧ ಹೂಡಿಕೆಗಳಾದ ವಿಮೆ, ಮುಚ್ಯುವಲ್‌ ಫಂಡ್‌, ನಿಶ್ಚಿತ ಠೇವಣಿ ಮತ್ತು ಭವಿಷ್ಯ ನಿಧಿಗಳಿಗೆ ಬೇರೆ ಬೇರೆ ಅವಧಿಯನ್ನು ನಿಗದಿಪಡಿಸಲಾಗಿದೆ. ಸಮಯಕ್ಕೆ ಅನುಸಾರ ಈ ಯೋಜನೆಗಳಿಂದ ಹಣ ಪಡೆಯಬಹುದು.

ಉದಾಹರಣೆಗೆ ನಿಶ್ಚಿತ ಠೇವಣಿಯಲ್ಲಿ ಹಣ ಹೂಡಿದರೆ ಎರಡು ಅಥವಾ ಐದು ವರ್ಷಗಳ ಅವಧಿಯಲ್ಲಿ ನಿಮ್ಮ ಹಣ ವಾಪಸ್‌ ಪಡೆಯಬಹುದು. ಇದು ನೀವು ಎಷ್ಟು ವರ್ಷಕ್ಕೆ ಹಣ ಹೂಡಿಕೆ ಮಾಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಆದರೆ, ವಿಮೆ ಯೋಜನೆಗಳು ದೀರ್ಘಾವಧಿಯದ್ದಾಗಿವೆ. ವಿಮೆಯಲ್ಲಿ ಹಣ ಹೂಡುವವರಿಗೆ ದೀರ್ಘಾವಧಿಯ ನಂತರ ಹಣ ದೊರೆಯುತ್ತದೆ. ಹೀಗಾಗಿ ಮಾಹಿತಿ ಪಡೆದು ಹಣ ವಿನಿಯೋಗಿಸುವುದು ಜಾಣತನ.

ಅಪಾಯದ ಹೂಡಿಕೆ
ಜಾಣ ಹೂಡಿಕೆದಾರರು ಕೆಲವು  ಬಾರಿ ಅಪಾಯಗಳನ್ನು ಸಹ ಎದುರಿಸಲು ಸಿದ್ಧರಾಗಿರುತ್ತಾರೆ. ಹೀಗಾಗಿ ನಿಮ್ಮ ಹೂಡಿಕೆಯನ್ನ ವಿಭಿನ್ನ ಯೋಜನೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ. ಷೇರು, ಸಾಲ ಪಡೆಯುವುದು, ವಿಮೆ, ರಿಯಲ್‌ ಎಸ್ಟೇಟ್‌ ಇತ್ಯಾದಿಗಳಲ್ಲಿ ಹಣ ವಿನಿಯೋಗಿಸಬೇಕು. ಆದರೆ, ಇದೇ ಸಂದರ್ಭದಲ್ಲಿ ಹಣಕಾಸಿನ ಅಗತ್ಯಗಳು ಮತ್ತು ಅಪಾಯಗಳ ಬಗ್ಗೆಯೂ ಎಚ್ಚರವಹಿಸಬೇಕು.

ಅನಿಶ್ಚಿತ ಘಟನೆಗಳ ಬಗ್ಗೆ ಯೋಜನೆ
ಪ್ರಸ್ತುತ ಸಂದರ್ಭಕ್ಕೆ ಅನುಸಾರವಾಗಿ ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸುತ್ತೀ. ಆದರೆ, ಅನಿರೀಕ್ಷಿತ ನಡೆಯುವ ಘಟನೆಗಳ ಬಗ್ಗೆ ಯೋಚಿಸಬೇಕು. ಒಬ್ಬ ಮಹಿಳೆಯಾಗಿ ವಿಭಿನ್ನ ದೃಷ್ಟಿಕೋನದಲ್ಲೂ ಯೋಚಿಸಬೇಕಾಗುತ್ತದೆ. ದಿಢೀರನೆ ಎದುರಾಗಬಹುದಾದ ಸಂಕಷ್ಟಗಳನ್ನು ಎದುರಿಸಲು ಸಜ್ಜಾಗಬೇಕಾಗುತ್ತದೆ. ಸಾವು, ವಿಚ್ಛೇದನ ಇತ್ಯಾದಿ ಘಟನೆಗಳಿಂದ ಮಾನಸಿಕವಾಗಿ ಕುಗ್ಗುವವರೇ ಹೆಚ್ಚು. ಇಂತಹ ಸಂದರ್ಭಗಳಲ್ಲೇ ಮಕ್ಕಳ ಜವಾಬ್ದಾರಿಯನ್ನು ಸಹ ವಹಿಸಿಕೊಳ್ಳಬೇಕಾಗುತ್ತದೆ. ಆಗ ನೀವು ಹೂಡಿಕೆ ಮಾಡಿದ ಹಣ ಆರ್ಥಿಕವಾಗಿ ಶಕ್ತಿಯುತವನ್ನಾಗಿ ಮಾಡಿ ನಿಮ್ಮ ನೆರವಿಗೆ ಬರುತ್ತದೆ. ನಿಮ್ಮೊಬ್ಬರ ಆದಾಯದಿಂದಲೇ ಕುಟುಂಬದ ಅಗತ್ಯಗಳನ್ನು ಪೂರೈಸಲು ನೀವು ಸಮರ್ಥರಾಗಿರುತ್ತೀರಿ.

ಸಮರ್ಪಕ ದಾಖಲೆಗಳು
ಹಲವು ಬಾರಿ ಅಸಮರ್ಪಕ ದಾಖಲೆಗಳು ಅಥವಾ ತಪ್ಪು ಮಾಹಿತಿ ಹೊಂದಿದ ದಾಖಲೆಗಳಿಂದ ಹೂಡಿಕೆದಾರರಿಗೆ ಹಣ ದೊರೆಯದಿರುವ ಹಲವು ಪ್ರಕರಣಗಳಿವೆ. ಆದ್ದರಿಂದ ಸಮರ್ಪಕವಾಗಿ ದಾಖಲೆಗಳನ್ನು ಹೊಂದುವುದು ಅತ್ಯಗತ್ಯ. ಜತೆಗೆ ಇನ್ನೊಬ್ಬರಿಗೂ ನಿಮ್ಮ ಹಣ ಹೂಡಿಕೆ ಬಗ್ಗೆ ಮಾಹಿತಿಯನ್ನು ನೀಡಿರಬೇಕು.

ಭವಿಷ್ಯಕ್ಕಾಗಿ ಹೂಡಿಕೆ
ಕುಟುಂಬದಲ್ಲಿ ಮುಖ್ಯವಾಗಿ ನೀವೊಬ್ಬರೇ ದುಡಿಯುವವರು ಅಲ್ಲದೇ ಇರಬಹುದು. ಆದರೆ, ಕಾರ್ಯನಿರತ ಮಹಿಳೆಯಾಗಿ ಕುಟುಂಬದ ಅಗತ್ಯಕ್ಕೆ ತಕ್ಕಂತೆ ಹಾಗೂ ಜೀವನ ಶೈಲಿಗೆ ಹಣ ನೀಡುವುದು ಸಾಮಾನ್ಯ. ಹೀಗಾಗಿ ಕುಟುಂಬವು ನಿಮ್ಮ ಗೈರುಹಾಜರಿಯಲ್ಲಿ ಹಣಕಾಸಿನ ಕೊರತೆಯಾಗದಂತೆ ಎಚ್ಚರವಹಿಸಬೇಕಾಗುವುದು ಸಹ ಜವಾಬ್ದಾರಿಯಾಗುತ್ತದೆ. ಹೀಗಾಗಿ ಸಾಕಷ್ಟು ವಿಮೆ ಯೋಜನೆಗಳನ್ನು ಹೊಂದುವುದು ಅಗತ್ಯ. ಆನ್‌ಲೈನ್‌ನಲ್ಲಿ ಈ ಬಗ್ಗೆ ಮಾಹಿತಿ ಪಡೆಯಬಹುದು. ಸರಳವಾದ ಯೋಜನೆಗಳ ಮಾಹಿತಿ ಪಡೆದು ಹಣ ಹೂಡಿಕೆ ಮಾಡಬಹುದು. ಪಿಂಚಣ ದೊರೆಯುವ ಯೋಜನೆಗಳಲ್ಲೂ ಹಣ ಹೂಡಬಹುದು. ಇದರಿಂದ ನಿವೃತ್ತಿ ನಂತರ ನಿರ್ದಿಷ್ಟ ಆದಾಯ ಪಡೆಯಲು ಸಾಧ್ಯವಾಗುತ್ತದೆ.

ಯೋಜನೆ ಮತ್ತು ಅನುಷ್ಠಾನ
ಇನ್ನು ನೀವು ಮಾಡಿದ ಯೋಜನೆಗಳನ್ನು ಸಮರ್ಪಕವಾಗಿ ಮತ್ತು ಸಕಾಲಕ್ಕೆ ಅನುಷ್ಠಾನಗೊಳಿಸುವುದು ಮುಖ್ಯ. ನಿಮ್ಮ ವೃತ್ತಿಯ ಆರಂಭದ ಅವಧಿಯಲ್ಲೇ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಲು ಅನುಕೂಲವಾಗುತ್ತದೆ. ದೀರ್ಘಾವಧಿಯ ಹಣಕಾಸಿನ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಬೇಕು. ಇದನ್ನು ಮುಂದೂಡುವುದು ಒಳ್ಳೆಯ ಲಕ್ಷಣವಲ್ಲ. ಇದರಿಂದ ಭವಿಷ್ಯದಲ್ಲಿ ಹಣಕಾಸಿನ ಹೊರೆಯಾಗುತ್ತದೆ. ನಿರ್ದಿಷ್ಟವಾದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಆರ್ಥಿಕವಾಗಿ ಸಬಲರಾಗಿ ಸುಗಮವಾಗಿ ಬದುಕು ಸಾಗಿಸಬಹುದು.
 

-ಲೇಖಕಿ – ಅಂಜಲಿ ಮಲ್ಹೋತ್ರಾ
(‘ಅವಿವಾ ಇಂಡಿಯಾ’ದ  ಮಾರ್ಕೆಟಿಂಗ್‌   ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT