ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆತ್ತಲೆ ತಿರುಗಿ, ಹಾಸ್ಟೆಲ್‌ ವಿದ್ಯಾರ್ಥಿನಿಯರ ಒಳಉಡುಪು ಧರಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಬಂಧನ

Last Updated 22 ಮಾರ್ಚ್ 2017, 4:49 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನುಗ್ಗಿ ಒಳ ಉಡುಪು ಕದ್ದೊಯ್ಯುತ್ತಿದ್ದ ಯುವಕನನ್ನು ಬುಧವಾರ ಬಂಧಿಸಲಾಗಿದೆ.

ರಾತ್ರಿ ಹಾಸ್ಟೆಲ್‌ಗೆ ಬೆತ್ತಲೆಯಾಗಿ ಬಂದು ಯುವತಿಯರು ಒಣಗಲು ಹಾಕಿರುವ ಒಳ ಉಡುಪುಗಳನ್ನು ಧರಿಸಿ ಖುಷಿಪಡುತ್ತಿದ್ದ.

ಹುಡುಗಿಯರಂತೆ ನಡೆಯುವುದು, ನಾಚುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.

ಈ ರೀತಿ ವಿಚಿತ್ರವಾಗಿ ವರ್ತಿಸುತ್ತಾ ಕಾಟ ಕೊಡುತ್ತಿದ್ದ ಯುವಕನನ್ನು ಪೊಲೀಸರ ವಿಶೇಷ ತಂಡ ನಗರದಲ್ಲಿ ಬಂಧಿಸಿದೆ.

ಈತನ ಹೆಸರು ಅಬು ತಾಲಿಮ್(24 ವರ್ಷ) ಎಂದು ತಿಳಿದು ಬಂದಿದೆ. ಬೆತ್ತಲೆಯಾಗಿ ಓಡಾಟ ಹಾಗೂ ಈತನ ಮುಖ ಚರ್ಯೆಯನ್ನು ಗಮನಿಸಿ ಪೊಲೀಸರ ತಂಡ ಹುಡುಕಾಟ ನಡೆಸಿತ್ತು.

ಮೂರು ಅಥವಾ ಆರು ತಿಂಗಳಿಗೊಮ್ಮೆ ಬಂದು ಹೋಗುವ ಈ ವ್ಯಕ್ತಿ ಯುವತಿಯರ ಒಳ ಉಡುಪುಗಳನ್ನೆಲ್ಲ ಕದ್ದೊಯ್ಯುತ್ತಿದ್ದ. ಫೆ.12ರಂದು ರಾತ್ರಿ 12ಕ್ಕೆ ಹಾಸ್ಟೆಲ್‌ಗೆ ಆತ ಬಂದಿದ್ದ. ಆಗ ಆತನ ವಿಚಿತ್ರ ನಡವಳಿಕೆ  ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯವನ್ನೇ ಆಧರಿಸಿ ಹಾಸ್ಟೆಲ್‌ನ ವಾರ್ಡನ್‌ ಸುಮಿತ್ರಾ ಅವರು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ಸೋಮವಾರ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT