ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲ್ಗುಣಿ ಹೊಳೆಗೆ ಮತ್ತೆ ಹೊಸ ಅಣೆಕಟ್ಟೆ?

‘ಬಹುಗ್ರಾಮ ಕುಡಿಯುವ ನೀರು’ ಯೋಜನೆ ಕಾಮಗಾರಿ ಪೂರ್ಣ
Last Updated 22 ಮಾರ್ಚ್ 2017, 6:48 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಒಟ್ಟು ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ ಪ್ರಥಮ ಬಾರಿಗೆ ಕಾಮಗಾರಿ ಆರಂಭಗೊಂಡ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಫಲ್ಗುಣಿ ಹೊಳೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ನೀರಿನ ಮಟ್ಟ ಇಳಿಮುಖವಾಗದೆ ಸ್ಥಿರವಾಗಿದೆ.

ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳು ನದಿಯಲ್ಲಿ ನೀರಿನ ಬದಲಾಗಿ ಕೇವಲ ಮರಳು ಮಾತ್ರ ಕಾಣುತ್ತಿದ್ದು, ಈ ಬಾರಿ ಮಾತ್ರ ಇಲ್ಲಿನ ಕಿರು ಜಲ ವಿದ್ಯುತ್ ಘಟಕದ ಅಣೆಕಟ್ಟೆ ಹಿನ್ನೆಲೆಯಲ್ಲಿ ಮಾರ್ಚ್‌ ತಿಂಗಳಿನಲ್ಲಿಯೂ ನೀರಿನ ಮಟ್ಟ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಇಳಿಮುಖವಾಗಿದೆ.

ಬಂಟ್ವಾಳ ಮತ್ತು ಮೂಡುಬಿದಿರೆ ಗಡಿ ಭಾಗದಲ್ಲಿರುವ ಪುಚ್ಚಮೊಗರು ಸೇತುವೆ ಬಳಿ 1.5 ಮೀ. ಎತ್ತರದ ಅಣೆ ಕಟ್ಟೆಯಿಂದ ಕಳೆದ ಹಲವು ವರ್ಷಗ ಳಿಂದ ಮೂಡುಬಿದಿರೆ ಪುರಸಭೆಗೆ ಕುಡಿ ಯುವ ನೀರು ಪೂರೈಕೆಯಾಗುತ್ತಿದೆ.

ಇನ್ನೊಂದೆಡೆ ಬಂಟ್ವಾಳ ನೇತ್ರಾವತಿ ನದಿಗೆ ತುಂಬೆ ಅಣೆಕಟ್ಟೆ ಮೂಲಕ ಮಂಗ ಳೂರು ಮಹಾನಗರ ಪಾಲಿಕೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದರೂ ಬಂಟ್ವಾಳ ಪುರಸಭೆ ಹೊರತು ಪಡಿಸಿ ಇತರ ಗ್ರಾಮೀಣ ಪ್ರದೇಶಗಳಿಗೆ ಕುಡಿ ಯುವ ನೀರಿಗೆ ಮಾತ್ರ ಬರ ಏಕೆ? ಎಂಬ ಪ್ರಶ್ನೆ ನಾಗರಿಕರಿಂದ ವ್ಯಕ್ತವಾಗಿತ್ತು.

ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕಳೆದ ವರ್ಷ ಫಲ್ಗುಣಿ ಹೊಳೆಗೆ ಪುಚ್ಚಮೊಗರು ಮತ್ತು ನೇತ್ರಾವತಿ ನದಿಗೆ ಕರೋಪಾಡಿ ಎಂಬಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋ ಜನೆ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಪೈಕಿ ಕರೋಪಾಡಿ ಕಾಮಗಾರಿ ಬಹು ತೇಕ ಪೂರ್ಣಗೊಂಡಿದ್ದು, ₹ 36 ಕೋಟಿ ವೆಚ್ಚದ ಪುಚ್ಚಮೊಗರು ಕಾಮಗಾರಿ ಕೂಡಾ ಅಂತಿಮ ಹಂತದಲ್ಲಿದೆ.

ಈಗಾಗಲೇ ಫಲ್ಗುಣಿ ಹೊಳೆಯಲ್ಲಿ ಜ್ಯಾಕ್ವೆಲ್ ಮತ್ತು ಇಂಟೆಕ್ವೆಲ್ ರಚಿಸಲಾ ಗಿದ್ದು, ಮೇಲ್ಭಾಗದಲ್ಲಿ ಎತ್ತರದ ಸರ್ಕಾರಿ ಜಮೀನಿನಲ್ಲಿ ಮೂರು ಹಂತದ ಶುದ್ಧೀಕ ರಣ ಘಟಕ ನಿರ್ಮಾಣಗೊಂಡು ವಿದ್ಯು ತ್ ಸಂಪರ್ಕ ಮತ್ತು ಪಂಪ್ ಮತ್ತಿತರ ಯಂತ್ರೋಪಕರಣ ಅಳವಡಿಸುವ ಕಾಮ ಗಾರಿ ಪ್ರಗತಿಯಲ್ಲಿದೆ.

ಇನ್ನೊಂದೆಡೆ ಸಿದ್ಧ ಕಟ್ಟೆಯಲ್ಲಿ 4.5 ಲಕ್ಷ ಲೀ., ಪಂಜಿಕಲ್ಲು ಎಂಬಲ್ಲಿ 5.5 ಲಕ್ಷ ಲೀ. ಸಾಮರ್ಥ್ಯ ಹೊಂದಿರುವ ಎತ್ತರದ ಟ್ಯಾಂಕ್, ಅಣ್ಣಳಿಕೆ ಎಂಬಲ್ಲಿ 4.5 ಲಕ್ಷ ಲೀ. ಮತ್ತು ಕುರಿಯಾಳ ಎಂಬಲ್ಲಿ 50 ಸಾವಿರ ಲೀ. ಸಾಮರ್ಥ್ಯದ ಭೂಗತ ಟ್ಯಾಂಕ್ (ಸಂಪ್) ನಿರ್ಮಾಣಗೊಂಡಿದೆ.

ಈ ನಡುವೆ ಬೆಂಜನಪದವು ಎಂಬಲ್ಲಿ ಕೂಡಾ 1 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಗೊಂಡು ಸಂಗಬೆಟ್ಟುವಿನಿಂದ ಬಂಟ್ವಾಳ -ಮೂಡುಬಿದಿರೆ ರಸ್ತೆ ಬದಿ 250 ಮಿ.ಮೀ. ವ್ಯಾಸ ಹೊಂದಿರುವ ಸಿಮೆಂಟ್ ಪೈಪ್ ಅಳವಡಿಸುವ ಕಾಮಗಾರಿಯೂ ಬಹುತೇಕ ಅಂತಿಮ ಹಂತದಲ್ಲಿದೆ.

ಇದೇ ಮಾರ್ಚ್‌ ತಿಂಗಳ ಅಂತ್ಯದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವುದಾಗಿ ಮೊಗೆರೋಡಿ ಕನ್‌ಸ್ಟ್ರಕ್ಷನ್‌ ಸಂಸ್ಥೆ ಗುತ್ತಿಗೆ ದಾರ ಸುಧಾಕರ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಈ ಯೋಜನೆ ಯಶಸ್ವಿಗೊಂಡಲ್ಲಿ ಇಲ್ಲಿನ ಸಂಗಬೆಟ್ಟು ಮಾತ್ರವಲ್ಲದೆ, ಚೆನ್ನೈ ತ್ತೋಡಿ, ಕುಕ್ಕಿಪಾಡಿ, ರಾಯಿ, ಪಂಜಿ ಕಲ್ಲು, ಅರಳ, ಅಮ್ಟಾಡಿ ಗ್ರಾಮ ಪಂಚಾ ಯಿತಿ ವ್ಯಾಪ್ತಿ ಸೇರಿದಂತೆ ಕಳ್ಳಿಗೆ ಗ್ರಾಮದ ಒಂದು ಭಾಗ ಸಹಿತ ಒಟ್ಟು 16 ಗ್ರಾಮ ಗಳಿಗೆ ನಿರಂತರ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಎಂಜಿ ನಿಯರ್ ಗಿರೀಶ್ ತಿಳಿಸಿದ್ದಾರೆ.

ಹೊಸ ಅಣೆಕಟ್ಟೆ: ತಾಲ್ಲೂಕಿನ ಪುಚ್ಚ ಮೊಗರು- ಅರಳ- ಪೊಳಲಿ ಮೂಲಕ ಮಂಗಳೂರು ಕಡೆಗೆ ಸಾಗುವ ಫಲ್ಗುಣಿ ಹೊಳೆಗೆ ಅರಳ ಗ್ರಾಮದ ಮುಲ್ಲಾರಪಟ್ಣ ಸಮೀಪದ ಮುಚ್ಚೂರು ಎಂಬಲ್ಲಿ ಈಗಾ ಗಲೇ ಯಶಸ್ವಿಯಾಗಿ ನಿರ್ಮಾಣಗೊಂಡ ತೂಗು ಸೇತುವೆ ಬಳಿ ₹ 4.85 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ವತಿ ಯಿಂದ ಮತ್ತೆ 2 ಮೀ. ಎತ್ತರದ ಹೊಸ ಅಣೆಕಟ್ಟೆ ನಿರ್ಮಿಸಲು ಇಲಾಖೆ ಮುಂದಾಗಿದೆ.

ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆದೇಶ ಹಂತದಲ್ಲಿದೆ. ಈ ಅಣೆಕಟ್ಟೆಯಿಂದ ಇಲ್ಲಿನ ಸುಮಾರು ಆರೇಳು ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಿಂದ ಕೃಷಿ ಕರು ಮತ್ತು ಬಹುಗ್ರಾಮ ಕುಡಿ ಯುವ ನೀರಿನ ಯೋಜನೆಗೆ ಫಲಕಾರಿ ಯಾಗಲಿದೆ.

ಇನ್ನೊಂದೆಡೆ ಅಣೆಕಟ್ಟೆ ಮೇಲ್ಭಾಗದಲ್ಲಿ ಲಘು ವಾಹನ ಸಂಚಾ ರಕ್ಕೆ ಅವಕಾಶ ನೀಡುವ ಮೂಲಕ ಬಂ ಟ್ವಾಳ ಮತ್ತು ಮಂಗಳೂರು ತಾಲ್ಲೂಕಿನ ಎರಡು ಗ್ರಾಮಗಳಿಗೆ ಸಂಪರ್ಕ ಕೊಂಡಿ ಯಾಗಲಿದೆ ಎನ್ನುವುದು ಇಲಾಖೆ ಎಂಜಿನಿಯರ್ ಷಣ್ಮುಗಂ ಅಭಿಪ್ರಾಯ.
-ಮೋಹನ್ ಕೆ.ಶ್ರೀಯಾನ್ ರಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT