ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಹೆಚ್ಚಳ: ಎಂಜಿನಿಯರ್ ಪದವೀಧರನ ಹೀಗೊಂದು ಪ್ರಯತ್ನ

Last Updated 22 ಮಾರ್ಚ್ 2017, 6:55 IST
ಅಕ್ಷರ ಗಾತ್ರ

ಕಣಿವೆ (ಎನ್.ಆರ್.ಪುರ): ಪ್ರಪಂಚದಲ್ಲಿ ನೀರು ವಿವಿಧ ರೂಪಗಳಲ್ಲಿ ದೊರೆತರೂ ಸಹ ಅದರ ಮೂಲ ಮಳೆ. ಇಂತಹ ಮಳೆಯ ನೀರನ್ನು ಸಂಗ್ರಹಿಸಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವೀಧರರೊಬ್ಬರು ಸತತ ಪ್ರಯತ್ನ ಮಾಡುತ್ತಿದ್ದಾರೆ.

ಪ್ರಗತಿಪರ ಕೃಷಿಕ ತಾಲ್ಲೂಕಿನ ಕಣಿವೆ ಗ್ರಾಮದ  ವಿನಯ್  ಅವರು ಜಲ ತಜ್ಞ ಶ್ರೀಪಡ್ರೆ ಅವರು ಸಿಮೆಂಟ್ ಕಟ್ಟೆ ನಿರ್ಮಿಸಿ ತಳಭಾಗದಲ್ಲಿ ಜಲ್ಲಿ, ಮರಳುಹಾಕಿ ಮಳೆ ನೀರನ್ನು ಸಂಗ್ರಹಿಸುವ ವಿಚಾರ ಬರೆದಾಗ ಅದರಿಂದ ಪ್ರೇರಿತವಾಗಿ ತಮ್ಮ ತೋಟದಲ್ಲೂ ಸಹ ಈ ಮಾದರಿಯನ್ನು ಅನುಸರಿಸಲು ಮುಂದಾದರು.

ಮನೆಯ ಬಳಿ ಬಾವಿ ನೀರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗುಡ್ಡದಿಂದ ಹರಿದು ಬರುವ ನೀರು ಹೊಳೆಗೆ ಸೇರುವುದನ್ನು ತಡೆಗಟ್ಟಲು ಮೇಲಿನ ಹಂತದಲ್ಲಿ  20 X10 ಅಳತೆ ಇಂಗು ಗುಂಡಿ ನಿರ್ಮಿಸಿದರು. ಇಲ್ಲಿ ನೀರು ತುಂಬಿದ ಮೇಲೆ ಕೊಳವೆ ಮೂಲಕ ನೀರು ಹಾಯಿಸಿ ಸಂಗ್ರಹಿಸಲು ಇನ್ನೊಂದು ಹಂತದಲ್ಲಿ 4X10 ಅಳತೆಯ ಇಂಗು ಗುಂಡಿ ನಿರ್ಮಿಸಿದ್ದಾರೆ.

ಇಲ್ಲಿ ಕಸವನ್ನು ತುಂಬಿಸಲಾಗಿ ರುತ್ತದೆ. ನೀರು ಮೇಲಿಂದ ಹರಿದು ಬಂದು ಇಂಗಲಾರಂಭಿಸಿದಾಗ ಕಸ ಕೊಳೆತ ನಂತರ ಗೊಬ್ಬರವಾಗುವು ದರಿಂದ ಇದನ್ನು ಫಿಲ್ಟರ್ ಮಾಡಿ ಸ್ಪಿಂಕ್ಲರ್ ಮೂಲಕ ತೋಟಕ್ಕೆ ಹಾಯಿಸ ಲಾಗುತ್ತದೆ. ಇಂಗು ಗುಂಡಿಯಲ್ಲಿ ನೀರು ಸಂಗ್ರಹದಿಂದ ಇವರ ಕುಡಿಯುವ ನೀರನ್ನು ಬಳಸುವ ಬಾವಿಯಲ್ಲಿ ಬೇಸಿಗೆ ಯಲ್ಲೂ ನೀರು ಲಭಿಸುವಂತಾಗಿದೆ.

ಅಡಿಕೆ ತೋಟದಲ್ಲೂ ಇದೇ ರೀತಿ ಪ್ರಯೋಗ ಮಾಡಿ ಗುಡ್ಡದಿಂದ ಸ್ವಾಭಾವಿ ಕವಾಗಿ ಹರಿದು ಬರುವ ಮಳೆಯ ನೀರು ಇಂಗಿಸಲು 40X40 ಅಳತೆಯ ಸಿಮೆಂಟ್ ಕಟ್ಟೆ ನಿರ್ಮಿಸಲಾಗಿದೆ. ಇಲ್ಲಿಂದ ನೀರು ಹರಿದು ಕೆಳಹಂತಕ್ಕೆ ಬರಲು ಇನ್ನೊಂದು 10X10 ಅಳತೆಯ ಸಿಮೆಂಟ್ ತೊಟ್ಟಿ ನಿರ್ಮಿಸಲಾಗಿದೆ. ಇಲ್ಲೂ ಸಹ ಗೊಬ್ಬರ ವಾಗಿ ಪರಿವರ್ತಿಸುವ ಕಸವನ್ನು ಹಾಕಿ ಅದು ಕೊಳೆತ ನಂತರ ನೀರನ್ನು ತೋಟಕ್ಕೆ ಸ್ಪಿಂಕ್ಲರ್ ಮೂಲಕ ಹಾಯಿಸಲಾಗುತ್ತದೆ.

ಅಡಿಕೆ ತೋಟದಲ್ಲಿ ನೀರಿನ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶ ದಿಂದ ಮೇಲಿಂದ ಹರಿದು ಬರುವ ಮಳೆಯ ನೀರಿನ ವಿರುದ್ಧ ದಿಕ್ಕಿಗೆ ಇಂಗು ಗುಂಡಿಯ ರೀತಿ ಕಾಲುವೆ ನಿರ್ಮಿಸ ಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗದೆ ಅಲ್ಲಿಯೇ ಇಂಗುತ್ತದೆ. ಒಂದು ವೇಳೆ ಬೇಸಿಗೆಯಲ್ಲಿ  ಬೇರೆ ಕಾರಣದಿಂದ ನೀರು ಪೂರೈಸಲು ಸಾಧ್ಯವಾಗದಿದ್ದರೂ ತೋಟ ಒಣಗದೆ ಹಸಿರಾಗಿಯೇ ಇರುತ್ತದೆ.

ಗುಡ್ಡಗಾಡು ಪ್ರದೇಶದಲ್ಲಿರುವ ತೋಟದಲ್ಲಿ ನೀರು ಕೊಟ್ಟರೆ ಮಾತ್ರ ಉತ್ತಮ ಫಸಲು ದೊರೆಯುತ್ತದೆ. ಇಂಗು ಗುಂಡಿ ಮಾಡುವುದರಿಂದ ಅನುಕೂಲ ಎನ್ನುತ್ತಾರೆ ವಿನಯ್.

ಕಣಿವೆ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾಗಿರುವ ವಿನಯ್ 150 ಎಕರೆ ಅರಣ್ಯ ಪ್ರದೇಶದಲ್ಲೂ ನೀರು ಇಂಗಿಸುವ ಪ್ರಯೋಗ ಮಾಡಿದ್ದಾರೆ. ಇವರು ಸಾವ ಯವ ಕೃಷಿಯಲ್ಲಿ ಮಾಡಿದ ಸಾಧನೆಗೆ ಬೆಂಗಳೂರು ಜಿಕೆವಿಕೆ ಕೃಷಿ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಸ್ತುತ ವರ್ಷ ಮಳೆಯು ಕಡಿಮೆ ಯಾಗಿ ಅಲ್ಲಲ್ಲಿ ಇಂಗಿ ಹೋಗುವ ರೀತಿ ಬಂದಿದೆ. ಇಂಗು ಗುಂಡಿ ನಿರ್ಮಿಸಿರು ವುದರಿಂದ ಅಂತರ್ಜಲ ಮೇಲಿದೆ. ಮಣ್ಣು ಕೊಚ್ಚಿಹೋಗುವುದು ತಪ್ಪಿದೆ ಎನ್ನುವ ಕಣಿವೆ ವಿನಯ್ ಅವರ ಸಂಪರ್ಕ ಸಂಖ್ಯೆ: 9448211122.  
-ಕೆ.ವಿ.ನಾಗರಾಜ್

*
ಮಳೆ ನೀರನ್ನು ಮರುಪೂರಣ ಮಾಡುವು ದರಿಂದ  ಅಂತರ್ಜಲ ಹೆಚ್ಚಿಸಬಹುದು. ಕೊಳವೆ ಬಾವಿಗೂ ನೀರು ಇಂಗಿಸುವಂತೆ ಮಾಡಬಹುದು
-ಕಣಿವೆವಿನಯ್,
ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT