ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳವಿಲ್ಲದೆ ಸಮಾಜಸೇವೆ

ಜಲಸಂರಕ್ಷಣೆಗೆ ಶ್ರೀದುರ್ಗಾಮಿತ್ರ ವೃಂದದ ಶ್ರಮ
Last Updated 22 ಮಾರ್ಚ್ 2017, 7:05 IST
ಅಕ್ಷರ ಗಾತ್ರ

ಸಿದ್ದಾಪುರ: ಸಂಘಟನೆಯಲ್ಲಿರುವ ಸದಸ್ಯರಿಗೆ ಸಮಾಜಸೇವೆ ಮಾಡಬೇಕೆ ನ್ನುವ ತುಡಿತ ಹೆಚ್ಚಾದರೆ ಬಂಡವಾಳ ವಿಲ್ಲದೆಯೂ ಸಮಾಜ ಸೇವೆ ಮಾಡ ಬಹುದು ಎನ್ನುವುದನ್ನು ಇಲ್ಲಿನ ದುರ್ಗಾಮಿತ್ರ ವೃಂದದ ಸದಸ್ಯರು ಸಾಧಿಸಿ ತೋರ್ಪಡಿಸಿದೆ. ಅಂತರ್ಜಲ ಕುಸಿಯುತ್ತಿರುವ ಕಾಲಘಟ್ಟದಲ್ಲಿ ಹೊಳೆಗೆ ಕಟ್ಟೆಕಟ್ಟುವ ಮೂಲಕ ನೀರನ್ನು ಸಂಗ್ರ ಹಿಸಿ ಮೂಕಪ್ರಾಣಿಗಳಿಗೆ ಸುಲಭ ವಾಗಿ ನೀರು ಒದಗುವಂತೆ ಮಾಡಿದ್ದಾರೆ.

ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಜಾಡಿ ದುರ್ಗಾಪರಮೇಶ್ವರಿ ದೇವ ಸ್ಥಾನದ ಸಮೀಪದಲ್ಲಿರುವ ಕುಂಟು ಹೊಳೆಗೆ ಶ್ರೀ ದುರ್ಗಾಮಿತ್ರವೃಂದದ ಸದಸ್ಯರೆಲ್ಲ ಒಂದಾಗಿ ಕುಂಟುಹೊಳೆ ಹರಿದುಹೋಗುವ ಕುದುರೆ ಬ್ರಹ್ಮಸ್ಥಾನ ವಿರುವಲ್ಲಿ ಕಟ್ಟು ಹಾಕಿದ್ದರು. ವಿಶಾಲ ವಾಗಿ ಹರಿಯುವ ಹೊಳೆಗೆ ಆ ಭಾಗದಲ್ಲಿ ಕಟ್ಟು ಹಾಕಿದರೆ ಮೂಕಪ್ರಾಣಿಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರು ಒದಗಿ ಸಬಹುದು ಎಂಬುದು ಅವರ ಉದ್ದೇಶ.

ಕೊಂಜಾಡಿಗುಡ್ಡೆ, ಗಂಟುಬೀಳು, ತೊನ್ನಾಸೆ, ಶೇಡಿಮನೆ ಬರದಕಲ್ಲು, ಹೆಬ್ಬಾಗಿಲುಮನೆ, ಕಾಟ್ಕೇರಿ ಇತರ ಪ್ರದೇಶಗಳಲ್ಲಿರುವ ಹತ್ತಾರು ಮನೆಗಳ ದನಕರುಗಳು ಮೇಯಲು ಈ ಭಾಗವನ್ನೆ ಆಶ್ರಯಿಸಿವೆ. ಗೋಮಾಳವಿಲ್ಲದಿದ್ದರೂ ಹಡಿಲುಬಿದ್ದಿರುವ ಗದ್ದೆಯಲ್ಲಿ ಹಸಿರು ಹುಲ್ಲು ಇಲ್ಲದಿದ್ದರೂ ದನಕರುಗಳು ಪ್ರತಿನಿತ್ಯ ಅಲ್ಲಿಗೆ ಬಂದು ಹೊಟ್ಟೆ ತುಂಬಿ ಸಿಕೊಳ್ಳುತ್ತವೆ.

ಬೇಸಿಗೆ ಪ್ರಾರಂಭದ ಫೆಬ್ರುವರಿ-ಮಾರ್ಚ್ ತಿಂಗಳಲ್ಲಿಯೇ ಹೊಳೆಯ ನೀರು ಸಂಪೂರ್ಣ ಒಣಗಿ ಹೋಗುತ್ತಿತ್ತು. ಈ ಸಮಯದಲ್ಲಿ ದನಕರುಗಳಿಗೆ ಕುಡಿಯಲು ನೀರಿಲ್ಲದೆ ತೊಂದರೆಯಾಗುತ್ತಿತ್ತು. ಇಂಥ ಸಮಸ್ಯೆ ಪರಿಹರಿಸಲು ಶ್ರೀ ದುರ್ಗಾಮಿತ್ರವೃಂದದ ಸದಸ್ಯರು ಮುಂದಾಗಿದ್ದರು.

‘ಕೂಲಿ ಕೆಲಸವನ್ನೇ ಆಶ್ರಯಿಸಿರುವ ಸಂಘದ ಸದಸ್ಯರು ರಜಾದಿನವಾದ ಡಿಸೆಂಬರ್ ತಿಂಗಳ ಪ್ರಥಮ ಭಾನುವಾರ ದಂದು ಹರಿಯುತ್ತಿರುವ ಹೊಳೆಗೆ ಸಿಮೆಂಟ್ ಚೀಲಗಳನ್ನೆ ಬಳಸಿ ಕಟ್ಟು ಹಾಕಿದ್ದೇವು. ಸುಮಾರು ನೂರಕ್ಕೂ ಅಧಿಕ ಸಿಮೆಂಟ್ ಚೀಲಕ್ಕೆ ನದಿಯಲ್ಲಿಯೇ ಸಿಗುವ ಮರಳನ್ನು ತುಂಬಿಸಿ ಒಂದರ ಮೇಲೊಂದು ಹೇರಿದ್ದೆವು. ನೀರಿನ ಒತ್ತಡ ಹೆಚ್ಚಿದ್ದರಿಂದ ಒಮ್ಮೆ ಕಟ್ಟು ಒಡೆದಿತ್ತು.

ನಂತರ ಮತ್ತಷ್ಟು ಸಿಮೆಂಟ್ ಚೀಲಕ್ಕೆ ಮರಳು ತುಂಬಿಸಿ ಕಟ್ಟು ಬಲ ಗೊಳಿಸಿದೆವು. ಬಹಳಷ್ಟು ನೀರು ನಿಂತಿ ದ್ದು, ದನಕರುಗಳಿಗೆ ಸಹಾಯವಾಗಿದೆ. ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ಸಂಪೂ ರ್ಣ ಒಣಗಿ ಹೋಗುತ್ತಿದ್ದ ನದಿಯಲ್ಲಿ ಈಗಲೂ ನೀರಿದೆ ಎಂದಾದರೆ ಅದಕ್ಕೆ ನಾವು ನಿರ್ಮಿಸಿದ ಸಿಮೆಂಟ್ ಚೀಲದ ಕಟ್ಟೆ ಕಾರಣ’ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಪ್ರಭಾಕರ ನಾಯ್ಕ.

‘ಪ್ರತಿವರ್ಷ ಸುತ್ತಲಿರುವ ಮನೆಗಳ ಬಾವಿಯಲ್ಲಿ ನೀರು ಒಣಗಿ ಹೋಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಹೊಳೆಗೆ ಕಟ್ಟು ಹಾಕಿದ ಪರಿಣಾಮ ಬಾವಿಯಲ್ಲಿ ನೀರಿನ ಮಟ್ಟ ಕುಸಿದಿಲ್ಲ. ಹೊಳೆಯಲ್ಲಿ ನೀರು ನಿಂತಿರುವುದರಿಂದ ಅಂತರ್ಜಲದ ಮಟ್ಟವೂ ವೃದ್ಧಿಯಾಗಿದೆ.

ದನಕರುಗಳು, ಕಾಡುಪ್ರಾಣಿ- ಪಕ್ಷಿಗಳಿಗೆ ಕುಡಿಯಲು ನೀರಿನ ಆಸರೆಯಾದಂತಾಗಿದೆ. ಹೊಳೆ ಸಮೀಪ ದಲ್ಲಿ ಬಿಸಿಲು ಹೊತ್ತಿನಲ್ಲಿ ಪ್ರಾಣಿ ಪಕ್ಷಿಗಳು ನೀರು ಕುಡಿಯಲು ಬರುವುದರಿಂದ ಕಣ್ಣಿಗೆ ಕಾಣಸಿಗುತ್ತಿವೆ’ ಎಂದು ಹೇಳುತ್ತಾರೆ ಸಂಘದ ಸದಸ್ಯ ಅಣ್ಣಪ್ಪ.
-ಸಂದೇಶ್ ಶೆಟ್ಟಿ ಆರ್ಡಿ

*
ಬಂಡವಾಳವಿಲ್ಲದೆ ಹೊಳೆಗೆ ಕಟ್ಟೆಕಟ್ಟುವ ಮೂಲಕ ಪ್ರಾಣಿ ಪಕ್ಷಿಗಳಿಗೆ ಸಹಕಾರಿಯಾಗುವುದ ರೊಂದಿಗೆ ಅಂತರ್ಜಲದ ಮಟ್ಟ ಹೆಚ್ಚಿಸಲು ಸಾಧ್ಯವಾಗಿದೆ.
-ಗೋವಿಂದ ನಾಯ್ಕ ಗಂಟುಬೀಳು,
ಶ್ರೀ ದುರ್ಗಾಮಿತ್ರ ವೃಂದದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT