ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ವಿರೋಧಿ ರಾಜ್ಯ, ಕೇಂದ್ರ ಸರ್ಕಾರ

ಜೆಡಿಎಸ್‌ ಪ್ರತಿಭಟನೆ– ಅಣಕು ಶವಯಾತ್ರೆ: ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಆರೋಪ
Last Updated 22 ಮಾರ್ಚ್ 2017, 7:16 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ರೈತರ ಸಾಲ ಮನ್ನಾ ಮಾಡುತ್ತಾರೆ ಎಂದು ಇಟ್ಟುಕೊಂಡಿದ್ದ ಭರವಸೆಯನ್ನು ಸುಳ್ಳು ಮಾಡಿರುವ ರಾಜ್ಯ ಹಾಗೂ  ಕೇಂದ್ರ ಸರ್ಕಾರ ಗಳೆರಡೂ ಸತ್ತು ಹೋಗಿವೆ ಎಂದು ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಆರೋಪಿಸಿದರು.

ರೈತರ ಗೋಳು ಕೇಳುವ ತಾಳ್ಮೆ, ಕಣ್ಣು, ಕಿವಿ, ಬಾಯಿ ಇಲ್ಲ. ಇವೆರಡು ಸರ್ಕಾರ ಗಳು ಸತ್ತುಹೋಗಿರುವುದರಿಂದ ಅವು ಗಳ ಅಂತಿಮ ಶವಯಾತ್ರೆ ಮಾಡುತ್ತಿ ದ್ದೇವೆ. ಏ.15ರ ನಂತರ ರೈತವಿರೋಧಿ ಸರ್ಕಾರ ಕಿತ್ತೊಗೆಯುವ ಅಭಿಯಾನ ನಡೆಸುತ್ತೇವೆ ಎಂದು ದೇವರ ಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಳ ರೈತ ವಿರೋಧಿ ಧೋರಣೆ ಖಂಡಿಸಿ ತಾಲ್ಲೂಕು ಜೆಡಿಎಸ್ ನೇತೃತ್ವದಲ್ಲಿ ಸಾವಿ ರಾರು ರೈತರು, ಜೆಡಿಎಸ್ ಕಾರ್ಯ ಕರ್ತರು ಮಂಗಳವಾರ ಪಟ್ಟಣದಲ್ಲಿ ನಡೆ ಸಿದ ಎರಡೂ ಸರ್ಕಾರಗಳ ಶವಯಾತ್ರೆ, ಬೃಹತ್ ಪ್ರತಿಭಟನೆ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಈ ಮತಕ್ಷೇತ್ರದಲ್ಲಿ 25 ವರ್ಷ ಗಳಿಂದ ಕಾಂಗ್ರೆಸ್ಸಿನ ದುರಾಡಳಿತ ಹೆಚ್ಚಾಗಿದೆ. ಹುಡ್ಕೋ ಸೈಟ್, ಗಾರ್ಡನ್ ನಿವೇಶನ, ಎನ್ಎ ಪ್ಲಾಟುಗಳನ್ನು ಪತ್ನಿ, ಸಂಬಂಧಿಕರ ಹೆಸರು ಬಳಸಿ ಲೂಟಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಲೂಟಿಕೋರರ ಬಂಡವಾಳ ದಾಖಲೆ ಸಮೇತ ಜನರ ಮುಂದಿಡುತ್ತೇನೆ.

ತೊಗರಿ ಖರೀದಿ ಸಮಸ್ಯೆ ಗಂಭೀರ ವಾಗಿದೆ. ಈ ತಾಲ್ಲೂಕಿನಲ್ಲಿ ಕಾಂಗ್ರೆಸ್ ಕಿತ್ತೊಗೆಯುವತನಕ ವಿರಮಿಸುವುದಿಲ್ಲ ಎಂದರು. ಸಭೆಯನ್ನುದ್ದೇಶಿಸಿ ಜಿಲ್ಲಾ ಪಂಚಾ ಯಿತಿ ಸದಸ್ಯ ಬಸನಗೌಡ ವಣಿಕ್ಯಾಳ ಮಾತನಾಡಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ   ಸೋಮನಗೌಡ ಹಾದಿಮನಿ, ರಾಜುಗೌಡ ಬಿರಾದಾರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಯ್ಯ ಬೂದಿಹಾಳ ಮಠ, ಸದಸ್ಯ ರಾದ ಶಾಜಾದಬಿ ಹುಣಚಗಿ, ಮಹಾ ದೇವಿ ಬಿರಾದಾರ, ಜೆಡಿಎಸ್ ಅಧ್ಯಕ್ಷ ಈರಸಂಗಪ್ಪಗೌಡ ಬಾಗೇವಾಡಿ, ಮಹಿಳಾ ಘಟಕದ ಅದ್ಯಕ್ಷೆ ಸಂಗಮ್ಮ ದೇವರಳ್ಳಿ, ಪ್ರಮುಖರಾದ ಗುರುನಾಥ ಬಿರಾದಾರ,

ರಸೂಲ ದೇಸಾಯಿ, ಕೆ.ವೈ.ಬಿರಾದಾರ, ಕಾನಗೌಡ ಪಾಟೀಲ, ಓಂಕಾರೆಪ್ಪ ಪಟ್ಟಣದ, ಎ.ಡಿ. ಮೋಮೀನ್, ಎಂ.ಎಸ್.ಅಮಲ್ಯಾಳ, ಸೋಮನಗೌಡ ಬಿರಾದಾರ ಕವಡಿ ಮಟ್ಟಿ, ಚನ್ನಪ್ಪ ಕಂಠಿ, ಜಲಾಲ ಮುದ್ನಾಳ, ವೀರೇಶ ಹಿರೇಮಠ. ಮಂಜು ಅಬ್ಬಿಹಾಳಮಠ, ಲಕ್ಷ್ಮಣ ಬಿಜ್ಜೂರ, ಮಹಾಂತೇಶ   ಗಂಗನಗೌಡರ, ಮೋಹನ ಹಂಚಾಟೆ, ಶಾಂತಗೌಡ ಮಂಗ್ಯಾಳ, ಶಿವು ಶಿವಪುರ, ಸಂತೋಷ ತೋಟದ,

ಭೀಮನಗೌಡ ತಂಗಡಗಿ, ಶೇಖರಗೌಡ ತಂಗಡಗಿ, ಬಲಭೀಮ ನಾಯಕಮಕ್ಕಳ, ಬುರಾನ್ ಬನ್ನೆಟ್ಟಿ, ಚನಬಸಪ್ಪಗೌಡ ಪಾಟೀಲ, ಅಪ್ಪು ಮೈಲೇಶ್ವರ ಸೇರಿದಂತೆ ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ರೈತರು, ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಾಲ್ಕು ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಿಎಂ, ಸಿಎಂಗೆ ಬರೆದ ಮನವಿಯನ್ನು ತಹಶೀಲ್ದಾರ್ ಎಂಎಎಸ್ ಬಾಗವಾನ ಅವರಿಗೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT