ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ; ಬೆಲೆ ಏರಿಕೆಯ ಬಿಸಿ

Last Updated 22 ಮಾರ್ಚ್ 2017, 7:22 IST
ಅಕ್ಷರ ಗಾತ್ರ

ರೋಣ: ತರಕಾರಿ ಬೆಲೆ ಮತ್ತೊಮ್ಮೆ ಗ್ರಾಹಕರಿಗೆ ಚುರುಕು ಮುಟ್ಟಿಸಿದೆ. ಮೆಣಸಿನಕಾಯಿಯನ್ನು ಕೆಲ ದಿನಗಳ ಹಿಂದೆ ₹10 ಕ್ಕೂ ಕೆ.ಜಿ ಕೇಳುವವರಿರ ಲಿಲ್ಲ. ಟೊಮೆಟೊ, ಬದನೆಕಾಯಿ ಸೇರಿ ಇತರ ತರಕಾರಿಗಳ ಕತೆಯೂ ಇದೆ ಆಗಿತ್ತು. ಆದರೆ, ಈಗ ಎಲ್ಲ ವಿಧದ ತರಕಾರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಗೆ ಪೂರೈಕೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ.

ರೋಣ, ಹೊಳೆಆಲೂರ, ಗಜೇಂದ್ರ ಗಡ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿ ದ್ದಾರೆ. ಇದರಿಂದ ನೀರಾವರಿ ಸೌಲಭ್ಯದ ಮೂಲಕ ತರಕಾರಿ ಬೆಳೆದ ರೈತರು ನಗು ತ್ತಿದ್ದರೆ, ಒಣ ಬೇಸಾಯ ನಂಬಿದ ರೈತರು ನಿರಾಸೆಯಲ್ಲಿ ಮುಳಗಿದ್ದಾರೆ.

ರೋಣ ಸಂತೆಯಲ್ಲಿ ₹ 70ರಿಂದ 80ಕ್ಕೆ ಮಾರಾಟವಾದ ಕೆ.ಜಿ ಮೆಣಸಿನ ಕಾಯಿ ಈಗ ₹ 100 ಗಡಿಗೆ ಬಂದು ನಿಂತಿದೆ. ಹಠಾತ್ ಬೆಲೆಯ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಬರಗಾಲದ ಕಾರಣ ಬಿನ್ಸ್, ಟೊಮೆಟೊ ಸೇರಿ ಇತರ ತರಕಾರಿಗಳ ದರ ಏರಿಕೆಯಾಗಿದೆ. ನೆರೆಯ ಜಿಲ್ಲೆಗ ಳಾದ ಬಾಗಲಕೋಟೆ, ಬೆಳಗಾವಿಯಿಂದ ತರಕಾರಿ ಆಮದು ಮಾಡಿಕೊಳ್ಳುತ್ತಿರುವು ದರಿಂದ ಸಾಗಣೆ ವೆಚ್ಚ ಹೆಚ್ಚಿದ್ದು, ತರ ಕಾರಿ ದರ ಹೆಚ್ಚಲು ಕಾರಣವಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಬುಡ್ನೇ ಸಾಬ್ ಮಾರನಬಸರಿ.
-ಬಸವರಾಜ ಪಟ್ಟಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT