ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಹಾರ ವಿತರಣೆಯಲ್ಲಿ ತಾರತಮ್ಯ’

Last Updated 22 ಮಾರ್ಚ್ 2017, 7:25 IST
ಅಕ್ಷರ ಗಾತ್ರ

ಮುಂಡರಗಿ: ರೈತರ ಬೆಳೆ ಹಾನಿ ಪರಿ ಹಾರ ವಿತರಿಸುವಲ್ಲಿ ತಾಲ್ಲೂಕು ಆಡ ಳಿತವು ತಾರತಮ್ಯ ಎಸಗಿದ್ದು, ತಕ್ಷಣ ಅದನ್ನು ಸರಿಪಡಿಸಿ ಎಲ್ಲ ರೈತರಿಗೂ ಸಮಾನವಾಗಿ ಬೆಳೆನಷ್ಟ ಪರಿಹಾರ ವಿತರಿ ಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಲಿಂಗಾಯತ ಪಂಚಮ ಸಾಲಿ ಸಮಾಜದ ಕಾರ್ಯದರ್ಶಿ ಬಸವ ರಾಜ ನವಲಗುಂದ ಮಾತನಾಡಿ, ಸರ್ಕಾರ ಬೆಳೆ ನಷ್ಟ ಅನುಭವಿಸಿದ ರೈತ ರಿಗೆ ಬೆಳೆ ಹಾನಿ ಪರಿಹಾರವನ್ನು ಬಿಡು ಗಡೆಗೊಳಿಸಿದೆ. ರೈತರಿಗೆ ಮಂಜೂರಾಗಿ ರುವ ಹಣ ವಿತರಿಸುವಲ್ಲಿ ತಾಲ್ಲೂಕು ಆಡಳಿತ ತಾರತಮ್ಯ ಎಸಗಿದೆ ಎಂದರು.

ಕಂದಾಯ ಇಲಾಖೆಯ ಅಧಿಕಾರಿ ಗಳು ಅವೈಜ್ಞಾನಿಕವಾಗಿ ಬೆಳೆನಷ್ಟವನ್ನು ಮಾಡಿದ್ದಾರೆ. ಇದರಿಂದಾಗಿ ಸರ್ಕಾರ ಮಂಜೂರು ಮಾಡಿರುವ ಪರಿಹಾರದಲ್ಲಿ ತಾರತಮ್ಯ ಉಂಟಾಗುತ್ತಲಿದೆ. ಅಧಿಕಾರಿ ಗಳು ಮಾಡಿರುವ ತಪ್ಪಿಗೆ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಅವರು ಆರೋಪಿಸಿದರು.

ರೈತರ ಜಮೀನು ಪ್ರಮಾಣ, ಬೆಳೆ ವರ್ಗಿಕರಣ, ಭೂಮಿಯ ಫಲವತ್ತತೆ, ಬೆಳೆ ಬಿತ್ತನೆ ಆದಾರದ ಮೇಲೆ ಬೆಳೆ ನಷ್ಟವನ್ನು ವಿತರಿಸಲಾಗುತ್ತದೆ ಎಂದು ರೈತರನ್ನು ನಂಬಿಸಲಾಗುತ್ತದೆ. ಕೆಲ ರೈತ ರಿಗೆ ಕಡಿಮೆ ಪರಿಹಾರ, ಕೆಲವು ರೈತರಿಗೆ ಪರಿಹಾರ ವಿತರಿಸಿ ರೈತರಲ್ಲಿ ತಾರತಮ್ಯ ಎಸ ಗಲಾಗಿದೆ ಎಂದು ಅವರು ಹೇಳಿದರು.

ರೈತರ ಜಮೀನುಗಳಿಗೆ ತೆರಳಿ ರೈತರ ಬೆಳೆ ನಷ್ಟವನ್ನು ಕುದ್ದಾಗಿ ಪರಿಶೀಲಿಸಿ ಪರಿಹಾರವನ್ನು ವಿತರಿಸಬೇಕು. ಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಮನ ಬಂದಂತೆ ಬೆಳೆ ನಷ್ಟವನ್ನು ನಮೂದಿಸಿರುವುದರಿಂದ ರೈತರು ತೊಂದರೆ ಅನುಭವಿಸಬೇಕಿದೆ ಎಂದರು.

ಬರಗಾಲದ ಕಾರಣದಿಂದ ರೈತರು ಹಾಗೂ ಕೃಷಿ ಕೂಲಿಕಾರ್ಮಿಕರು ಉದ್ಯೋಗ ಹುಡುಕಿಕೊಂಡು ಗುಳೆ ಹೋಗುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿ ಯಲ್ಲಿ ಸರ್ಕಾರ ರೈತರಿಗೆ ಸೂಕ್ತ ಬೆಳೆ ಪರಿ ಹಾರವನ್ನು ವಿತರಿಸಬೇಕು. ಆ ಮೂಲಕ ಅವರು ಗುಳೆ ಹೋಗುವುದನ್ನು ತಪ್ಪಿಸ ಬೇಕು ಎಂದು ಮನವಿ ಮಾಡಿದರು.
ಎಪಿಎಂಸಿ ಮಾಜಿ ಸದಸ್ಯ ಕೊಟ್ರ ಗೌಡ ಪಾಟೀಲ, ಎಸ್.ಎಸ್.ಕಾಮಣ್ಣ ವರ, ಅಂದಾನಗೌಡ ಕುಲಕರ್ಣಿ, ಯಮ ನಪ್ಪ ಭಜಂತ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT