ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ: ತಾಲ್ಲೂಕು ಕೇಂದ್ರಕ್ಕೆ ಭರದ ಸಿದ್ಧತೆ

ನಿಜಾಮರ ಆಡಳಿತದಲ್ಲಿ ಜಿಲ್ಲಾ ಕೇಂದ್ರವಾಗಿದ್ದ ಚಿಟಗುಪ್ಪ
Last Updated 22 ಮಾರ್ಚ್ 2017, 9:11 IST
ಅಕ್ಷರ ಗಾತ್ರ

ಚಿಟಗುಪ್ಪ: ಹುಮನಾಬಾದ್ ತಾಲ್ಲೂಕಿನ  ಚಿಟಗುಪ್ಪ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಬಜೇಟ್‌ನಲ್ಲಿ ಘೋಷಣೆ ಮಾಡಿರುವುದಕ್ಕೆ ಪಟ್ಟಣದ ಜನರಲ್ಲಿ ಸಂಭ್ರಮ ಮನೆ ಮಾಡಿದೆ. ನಿಜಾಮರ ಆಳ್ವಿಕೆಯಲ್ಲಿ ಮಿನಿಯಾಬಾದ್ ಆಗಿದ್ದ ಚಿಟಗುಪ್ಪ, ಜಿಲ್ಲಾ ಕೇಂದ್ರವಾಗಿತ್ತು.

27 ಕಿ.ಮೀ ವಿಸ್ತೀರ್ಣ ಹೊಂದಿರುವ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. ವಿಶೇಷ ತಹಶೀಲ್ದಾರ್ ಕಚೇರಿ, ಪುರಸಭೆ, ಉಪ ಕೃಷಿ ಮಾರುಕಟ್ಟೆ ಪ್ರಾಂಗಣ, ಸರ್ಕಾರಿ ಪದವಿ ಮಹಾವಿದ್ಯಾಲಯ ಇವೆ. ರಾಜಕೀಯ, ಶೈಕ್ಷಣಿಕ, ವ್ಯಾಪಾರಿ ಕೇಂದ್ರವಾಗಿ ಪಟ್ಟಣ ಬೆಳೆಯುತ್ತಿದೆ.

1984–87ರಲ್ಲಿ ಆಗಿನ ಸರ್ಕಾರ ಪಿ.ಸಿ.ಗದ್ದಿಗೌಡ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಾಲ್ಲೂಕು ಪುನರ್‌ ವಿಂಗಡಣಾ ಸಮಿತಿಯ ವರದಿ, ವಾಸು ದೇವರಾವ್ ಸಮಿತಿ , ನ್ಯಾಯಮೂರ್ತಿ ಕುಲದೀಪ ಸಿಂಗ್ ಆಯೋಗದ ವರದಿಗಳಲ್ಲಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು.

ಇದರಲ್ಲಿ ಹುಮನಾಬಾದ್ ತಾಲ್ಲೂಕಿನ 39, ಕಲಬುರ್ಗಿ ತಾಲ್ಲೂಕಿನ 11, ಚಿಂಚೋಳಿ ತಾಲ್ಲೂಕಿನ 16 ಗ್ರಾಮಗಳು ಸೇರಿಸಿ ಒಟ್ಟು 66 ಗ್ರಾಮಗಳನ್ನು ಒಳಗೊಂಡ ತಾಲ್ಲೂಕು ರಚಿಸಲು ಸೂಚಿಸಲಾಗಿದೆ.

ಹಿಂದಿನ ಬಿಜೆಪಿ ಸರ್ಕಾರ ಎಂ.ಪಿ.ಪ್ರಕಾಶ ನೇತೃತ್ವದಲ್ಲಿ ಚಿರಂಜಿವಿ ಸಿಂಗ್, ಎಸ್.ಕೆ.ಶಿವಾನಂದ್ ಮತ್ತು ಜಿ.ಎಸ್.ನಾರಾಯಣ ಸ್ವಾಮಿ ಸದಸ್ಯರನ್ನೊಳಗೊಂಡ  4ನೇ ಸಮಿತಿ ರಚಿಸಿ ಅವರಿಂದ ಪಡೆದ ವರದಿಯಂತೆ ಚಿಟಗುಪ್ಪ ಪಟ್ಟಣಕ್ಕೆ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಿತ್ತು.

ಈಗ ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಅಧಿಕೃತವಾಗಿ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಿದೆ. ಚಿಟಗುಪ್ಪ ಪಟ್ಟಣದ ಸದ್ಯದ ಜನಸಂಖ್ಯೆ 2011ರ ಜನಗಣತಿಯಂತೆ  25,298 ಇದೆ.

ತಾಲ್ಲೂಕಿಗೆ ಸೇರಲಿರುವ ಗ್ರಾಮಗಳು: ಹುಮನಾಬಾದ್ ತಾಲ್ಲೂಕು: ಚಿಟಗುಪ್ಪ, ಹಳ್ಳಿಖೇಡ(ಕೆ), ಕಠಳ್ಳಿ, ಹಣಕುಣಿ, ಬೊರಂಪಳ್ಳಿ, ಚಿತ್ತಕೋಟ್, ಕಲ್ಲೂರ್, ಮುಸ್ತಾಪುರ್, ಮುಸ್ತರಿ, ಕೊಡಂಬಲ್, ಗುರದಾಳ್, ಮುದ್ನಾಳ್, ರಾಂಪುರ್, ವಳಖಿಂಡಿ, ಇಟಗಾ, ಭಾಸ್ಕರ್ ನಗರ್, ತಾಳಮಡಗಿ, ಕಂದಗೂಳ್, ಮಾಡ ಗೂಳ್, ಬೆಳಕೇರಾ, ಶಾಮತಾಬಾದ್, ನಿರ್ಣಾ, ಮುತ್ತಂಗಿ, ಬಶಿರಪುರ್, ಅಲ್ಲಿಪುರ್, ದೆವಗಿರಿ,

ಭಾದ್ರಾಪುರ್, ಮದರಗಿ, ಉಡಬಾಳ್, ಬನ್ನಳ್ಳಿ, ಮಂಗಲಗಿ, ನಾಗನಕೇರಾ, ಬೇಮ ಳಖೇಡಾ, ಉಡಮನಳ್ಳಿ, ಕರಕನಳ್ಳಿ, ಸೈದಾಪುರ್, ಚಾಂಗಲೇರಾ, ಕಾರ ಪಾಕಪಳ್ಳಿ, ಮೀನಕೇರಾ, ಬೋರಾಳ್, ಮನ್ನಾ ಎಖ್ಖೇಳಿ.

ಕಲಬುರ್ಗಿ ತಾಲ್ಲೂಕು: ಮರಮಂಚಿ, ಕಿಣ್ಣಿ ಸಡಕ್, ಕಿಣ್ಣಿಸರಪೊಸ್, ಗೊಬ್ಬುರವಾಡಿ, ನಿಲಖೇಡ್, ಹೊನ್ನಳ್ಳಿ, ಪಟೋದಾ, ಮಲಸಾಪುರ್, ಸೊಂತ್, ಜಮಗಾ.

ಚಿಂಚೋಳಿ ತಾಲ್ಲೂಕು: ಐನಾಪುರ್, ಬೆಮಳಖೇಡಾ, ಸಲಗರ್ ಬಸಂತಪುರ್, ಯೆತೆಬರಪುರ್,ಸಾಲೆಬಿರನಳ್ಳಿ, ಮರಪಳ್ಳಿ, ಹಸರಗುಂಡಗಿ, ಗಾರಂಪಳ್ಳಿ, ನಾಗರಹಳ್ಳ, ಯಲಮಡಗಿ, ಚನ್ನೂರ್, ಕೊಟಗಾ, ಗಡಿಲಿಂಗದಳ್ಳಿ, ಖಾನಾಪುರ್, ಭೂಂಯಾರ್(ಬಿ), ಭೂಂಯಾರ್ (ಕೆ), ಗೊಗಿ, ಭತರಗಾ, ಚೆಂಗಟಾ, ಪಂಗರಗಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT