ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಸಮಸ್ಯೆಗೆ ಸ್ಪಂದಿಸುವೆ: ಸಿದ್ರಾಮಪ್ಪ

Last Updated 22 ಮಾರ್ಚ್ 2017, 9:17 IST
ಅಕ್ಷರ ಗಾತ್ರ

ಸುರಪುರ: ‘ವಕೀಲರು ಇತರರಿಗೆ ಮಾದರಿಯಾಗುವಂತೆ ನಡೆದುಕೊಳ್ಳಬೇಕು. ವಕೀಲರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ವಕೀಲರು ವೃತ್ತಿ ಘನತೆ ಕಾಪಾಡಿಕೊಳ್ಳಬೇಕು’ ಎಂದು ವಕೀಲರ ಸಂಘದ ನೂತನ ಅಧ್ಯಕ್ಷ ಸೂಗೂರ ಸಿದ್ರಾಮಪ್ಪ ಹೇಳಿದರು.

ಇಲ್ಲಿಯ ನ್ಯಾಯಾಲಯದ ವಕೀಲರ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
‘ವರ್ಷದ ಹಿಂದೆ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಮಂಜೂರು ಆದರೂ ಕಾರ್ಯರಂಭಗೊಂಡಿಲ್ಲ. ಶೀಘ್ರ ಕಾರ್ಯಾರಂಭ ಮಾಡಲು ಯತ್ನಿಸಲಾಗುವುದು. ಎರಡು ದಿನಗಳ ಹಿಂದೆ ಹೈಕೋರ್ಟ್‌ ಆಡಳಿತಾತ್ಮಕ ನ್ಯಾಯಮೂರ್ತಿಯ ಭೇಟಿ ಮಾಡಿ ನ್ಯಾಯಾಧೀಶರ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ’ ಎಂದರು.

‘ಜಿಲ್ಲಾ ನ್ಯಾಯಾಲಯದಲ್ಲಿ ತಾಲ್ಲೂಕಿನ ಪ್ರಕರಣಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಒದಗಿಸುವಂತೆ ಮತ್ತು ಕ್ಯಾಂಟೀನ್ ಆರಂಭ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ನ್ಯಾಯಮೂರ್ತಿಗಳ ಗಮನಕ್ಕೆ ತರಲಾಗಿದೆ’ ಎಂದರು.

‘ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶೀಘ್ರದಲ್ಲಿಯೇ ನ್ಯಾಯಾಧೀಶರನ್ನು ಒದಗಿಸಿಕೊಡುವುದಾಗಿ ಆಡಳಿತಾತ್ಮಕ ನ್ಯಾಯಮೂರ್ತಿ ಎನ್.ಫಣೀಂದ್ರ ಅವರು ಭರವಸೆ ನೀಡಿದ್ದಾರೆ.  ಉಳಿದ ಸಮಸ್ಯೆಗೂ ಸ್ಪಂದಿಸುವುದಾಗಿ ತಿಳಿಸಿದ್ದಾರೆ’ ಎಂದರು.

ನಿರ್ಗಮಿತ ಅಧ್ಯಕ್ಷ ದೇವಿಂದ್ರಪ್ಪ ಬೇವಿನಕಟ್ಟಿ, ಉಪಾಧ್ಯಕ್ಷ ವಿ.ಎಸ್. ಬೈಚಬಾಳ. ಕಾರ್ಯದರ್ಶಿ ಸುರೇಂದ್ರ ದೊಡ್ಮನಿ, ಖಜಾಂಚಿ ದೇವು ನಾಯಕ, ವಕೀಲರಾದ ಬಸಲಿಂಗಪ್ಪ ಪಾಟೀಲ, ರಾಮನಗೌಡ ಸುಬೇದಾರ, ಉದಯಸಿಂಗ, ರಮಾನಂದ ಕವಲಿ. ಯಲ್ಲಪ್ಪ ಹುಲಿಕಲ್, ನಂದನಗೌಡ ಪಾಟೀಲ.

ಮಹ್ಮದ ಹುಸೇನ್, ನಂದಣ್ಣ ಬಾಕ್ಲಿ, ಬಸವರಾಜ ಕಿಲ್ಲೇದಾರ, ಗುರುಪಾದಪ್ಪ ಬನ್ನಾಳ, ಸಂಗಣ್ಣ ಬಾಕ್ಲಿ, ವೆಂಕಟೇಶ ನಾಯಕ, ಪ್ರಕಾಶ ಕವಲಿ, ಮಲ್ಲು ಭೊವಿ. ಭೀಮಣ್ಣ ಡಿ.ಕೆ. ಶಾಂತಗೌಡ ಪಾಟೀಲ, ಮಾನಪ್ಪ ಬಡಿಗೇರ. ಮಾನಪ್ಪ ಕವಡಿಮಟ್ಟಿ, ಶೇಖಾವತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT