ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ಕಲೆಗಳ ಉಳಿವು ಅಗತ್ಯ’

ಜಾನಪದ ಕಲೋತ್ಸವ ಹಾಗೂ ಗೀತಗಾಯನ ಕಾರ್ಯಕ್ರಮ
Last Updated 22 ಮಾರ್ಚ್ 2017, 9:41 IST
ಅಕ್ಷರ ಗಾತ್ರ

ರಾಮನಗರ: ‘ರೈತಾಪಿ ಸಮುದಾಯದ ಒಂದು ಭಾಗವಾಗಿದ್ದ ಜಾನಪದ ಕಲೆಗಳು ವೈಜ್ಞಾನಿಕತೆಯ ಪ್ರಭಾವಕ್ಕೆ ಸಿಲುಕಿ ನಶಿಸಿ ಹೋಗುತ್ತಿವೆ’ ಎಂದು ಆರ್‌ಟಿಐ ಕಾರ್ಯಕರ್ತ ದೊಡ್ಡಗಂಗವಾಡಿ ಉಮೇಶ್‌ ಆತಂಕ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಬಸ್‌ ನಿಲ್ದಾಣದ ಆವರಣದಲ್ಲಿ ಹಸಿರು ವನ ಸಾಮಾಜಿಕ, ಸಾಂಸ್ಕೃತಿಕ,  ಶಿಕ್ಷಣ ಟ್ರಸ್ಟ್‌ ಈಚೆಗೆ ಹಮ್ಮಿಕೊಂಡಿದ್ದ ಜಾನಪದ ಕಲೋತ್ಸವ ಹಾಗೂ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಶ್ರಮಿಕರ ಕಲೆಗಳನ್ನು ಆಧುನಿಕ ಯಂತ್ರೋಪಕರಣಗಳು ಮಾಯವಾಗುವಂತೆ ಮಾಡುತ್ತಿವೆ, ಈ ಕಲೆಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ’ ಎಂದು ತಿಳಿಸಿದರು.

ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೊತ್ತೀಪುರ ಗೋವಿಂದರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ವೀರಗಾಸೆ, ಪಟ ಕುಣಿತ, ಪೂಜಾ ಕುಣಿತ, ತಮಟೆ ಹಾಗೂ ಗೀತ ಗಾಯನವನ್ನು ರಂಗಯ್ಯ ಮತ್ತು ತಂಡ, ಶ್ರೀನಿವಾಸ್ ಮತ್ತು ತಂಡ, ರಾಜಣ್ಣ ಮತ್ತು ತಂಡ, ಗಂಗಾಧರ್ ಮತ್ತು ತಂಡದವರು ನಡೆಸಿಕೊಟ್ಟರು.

ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮರಿಲಿಂಗಯ್ಯ,ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಂಜನಾಪುರ ವಾಸು, ಹಸಿರು ವನ ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣ ಟ್ರಸ್ಟಿನ ಅಧ್ಯಕ್ಷ ಸುದೀಪ್‌, ಕಾರ್ಯದರ್ಶಿ ಮಧುಸೂದನ್‌, ಕನ್ನಡ ಸೇನೆಯ ಗೌರವ ಅಧ್ಯಕ್ಷ ಚನ್ನೇಗೌಡ, ಶಿವಣ್ಣ, ರವೀಶ್, ಲಕ್ಕಸಂದ್ರ ಗಂಗಾಧರ್, ಕೃಷ್ಣಪ್ಪ, ಶಿವರಾಜು, ಹರೀಶ್, ನಲ್ಲಹಳ್ಳಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT