ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಹಕ್ಕಿಗಾಗಿ ಹೋರಾಡಿದ ಅಂಬೇಡ್ಕರ್‌

‘ಧರ್ಮ–ಸಾಹಿತ್ಯ–ಚಳವಳಿ ಮತ್ತು ದಲಿತಲೋಕ’: ರಾಜ್ಯಮಟ್ಟದ ವಿಚಾರ ಸಂಕಿರಣ
Last Updated 22 ಮಾರ್ಚ್ 2017, 10:23 IST
ಅಕ್ಷರ ಗಾತ್ರ

ಮಂಡ್ಯ: ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡಿ ಪದತ್ಯಾಗ ಮಾಡಿದ ಬಿ.ಆರ್‌.ಅಂಬೇಡ್ಕರ್‌ ಒಬ್ಬ ದಾರ್ಶನಿಕ ವ್ಯಕ್ತಿ ಎಂದು ಸಾಹಿತಿ ಸಿದ್ದಲಿಂಗಯ್ಯ ಹೇಳಿದರು.

ನಗರದ ರೈತ ಸಭಾಂಗಣದಲ್ಲಿ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಹೊರಾವರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಿಂದ ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಮಂಗಳವಾರ ನಡೆದ ‘ಧರ್ಮ–ಸಾಹಿತ್ಯ–ಚಳವಳಿ ಮತ್ತು ದಲಿತಲೋಕ’ ಎಂಬ ವಿಚಾರ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಿಳೆಯರ ಹೋರಾಟದಲ್ಲಿ ಭಾಗವಹಿಸಿದ್ದಲ್ಲದೇ, ಅವರಿಗೆ ಸೂಕ್ತ ನ್ಯಾಯ ದೊರಕಿಸುವ ಸಲುವಾಗಿ ಕಾನೂನು ಮಂತ್ರಿ ಸ್ಥಾನವನ್ನೇ ತ್ಯಜಿಸಿದ್ದರು. ದತ್ತು ಸ್ವೀಕಾರ, ಆಸ್ತಿಯ ಹಕ್ಕು, ವಿಧವೆಯರಿಗೆ ಮರು ವಿವಾಹ ಸೇರಿದಂತೆ ಇತರೆ ಬೇಡಿಕೆಗಳನ್ನು ಮುಂದಿಟ್ಟು ಮಹಿಳಾ ಪರ ಹೋರಾಟ ಮಾಡಿದ್ದರು. ಜತೆಗೆ ಹಿಂದೂ ಮಸೂದೆ ಪಾಸ್‌ ಹಾಗಬೇಕು ಎಂದು ಒತ್ತಾಯಿಸಿದ್ದರು ಎಂದು ಹೇಳಿದರು.

ಯಾವುದೇ ಚಳವಳಿ ಹೋರಾಟದಲ್ಲಿ ಪುರುಷರಷ್ಟೇ ಮಹಿಳೆಯರೂ ಭಾಗವಹಿಸಿದರೆ ಹೋರಾಟ ಯಶಸ್ವಿಯಾಗುತ್ತವೆ. ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಅವರ ಜತೆ ಮಹಿಳೆಯರೂ ಪ್ರಧಾನವಾಗಿ ಹೋರಾಟ ಮಾಡಿದ್ದರು ಎಂಬುದನ್ನು ಮರೆಯಬಾರದು ಎಂದರು.

ಅಂಬೇಡ್ಕರ್‌ ಅವರಿಂದಲೇ ದಲಿತ ಚಳವಳಿಗೆ ಶಕ್ತಿ ಬಂದಿದ್ದು. ದಲಿತ ಸಾಹಿತ್ಯವು ಕನ್ನಡ ಭಾಷೆಯಲ್ಲಿ ಶಕ್ತಿಯುತ ಆಗುತ್ತಿದೆ. ಕುವೆಂಪು ಅವರು ಶಾಸ್ತ್ರ ಸಂಪ್ರದಾಯ ಇಲ್ಲದೇ ಸರಳತೆಗೆ ಮಾರು ಹೋಗಿದ್ದ ಒಬ್ಬ ಮಹಾನ್‌ ವ್ಯಕ್ತಿ ಎಂದು ಬಣ್ಣಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್‌. ಹನುಮಂತಯ್ಯ ಮಾತನಾಡಿ, ಅಂಬೇಡ್ಕರ್‌ ವಿಚಾರಗಳನ್ನು ಪುನರ್‌ ಮನನ ಮಾಡುವುದಕ್ಕಿಂತ. ಅವರು ತೋರಿಸಿದ ಬೆಳಕಿನಲ್ಲಿ ನಡೆಯುವುದು ಮುಖ್ಯ ಆಗುತ್ತದೆ. ಅಂಬೇಡ್ಕರ್‌ ಅವರ ಹೆಸರಿನಲ್ಲಿ ಇಂದು ಚಳವಳಿ ಛಿದ್ರಗೊಂಡಿದೆ. ಅವು ಒಗ್ಗೂಡಿಕೆ ಬರದೇ ಹೋದರೆ ಯಶಸ್ಸು ಸಿಗುವುದಿಲ್ಲ ಎಂದು ಎಚ್ಚರಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಟಿ.ಡಿ.ಕೆಂಪರಾಜು ಮಾತನಾಡಿ, ದೇಶದಲ್ಲಿ ಭ್ರೂಣ ಹತ್ಯೆ, ಭ್ರಷ್ಟಾಚಾರ, ಅತ್ಯಾಚಾರ ವಿದ್ಯಾವಂತರಿಂದ ನಡೆಯುತ್ತಿವೆ ಎಂಬುದು ದುರಂತ. ಸಮಾಜ ಘಾತುಕ ಕೆಲಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಜ್ಞಾವಂತರೇ ಭಾಗವಹಿಸುತ್ತಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಕೆ.ಪಿ. ಶ್ರೀನಾಥ್‌ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ಕೇಂದ್ರ ವಿಜಯಶ್ರೀ ಸಬರದ, ವಿಶೇಷಾಧಿಕಾರಿ ಎನ್‌. ಚಂದ್ರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT