ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂಗಿ ತಾಯಿಯ ಪಾತ್ರದಲ್ಲಿ ಲಾರಾ

Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು, ಮಾಡೆಲಿಂಗ್‌, ಸಿನಿಮಾ ಕ್ಷೇತ್ರಗಳಲ್ಲಿಯೂ ಸೈ ಎನಿಸಿಕೊಂಡ ಲಾರಾ ದತ್ತ ಇದೀಗ ಏಕಾಂಗಿಯಾಗಿ ಮಗುವನ್ನು ಸಲಹುವ  ತಾಯಿಯ ಪಾತ್ರದಲ್ಲಿ ಅಭಿನಯಿಸಲು ತಯಾರಿ ನಡೆಸುತ್ತಿದ್ದಾರೆ.ಇದು ಅವರದ್ದೇ ಚಿತ್ರ ನಿರ್ಮಾಣ ಸಂಸ್ಥೆಯ ಎರಡನೇ ಚಿತ್ರ.

ಒಬ್ಬಂಟಿ ತಾಯಿಯೊಬ್ಬಳ ಮಾನಸಿಕ ತೊಳಲಾಟದ ಪಯಣವನ್ನು ತೆರೆಯ ಮೇಲೆ ಅವರು ಕಟ್ಟಿಕೊಡಲಿದ್ದಾರೆ. ಇನ್ನೂ ಹೆಸರಿಡಲಾಗದ ಈ ಚಿತ್ರದಲ್ಲಿ ವಿನಯ್‌ ಪಾಠಕ್‌ ಕೂಡ ಅಭಿನಯಿಸಿದ್ದಾರೆ.

‘ಚಲೊ ದಿಲ್ಲಿ ಸಿನಿಮಾದಲ್ಲಿ ಹಾಸ್ಯ ಹಾಗೂ ಹೃದಯಸ್ಪರ್ಶಿ ಕಥಾನಕ ಇತ್ತು. ಅಂಥದ್ದೇ ಇನ್ನೊಂದು ಕಥೆಗಾಗಿ ಹುಡುಕಾಡುತ್ತಿದ್ದೆವು. ಈಗಾಗಲೇ ರಾಷ್ಟ್ರ ಪ್ರಶಸ್ತಿ ಗಳಿಸಿರುವ ಸುಶೀಲ್‌ ರಾಜಪಾಲ್‌ ಈ ಕಥೆಯನ್ನು ಹೇಳಿದರು. ಒಂದೇ ಸಲಕ್ಕೆ ಜನರು ನಗುತ್ತಾರೆ ಜೊತೆಗೆ ಅತ್ತು ಹಗುರಾಗುತ್ತಾರೆ. ಅಂಥ ಕಥೆ ಈ ಚಿತ್ರದ್ದು’ ಎಂದು ಹೇಳಿಕೊಂಡಿದ್ದಾರೆ ಲಾರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT