ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕ್ವಾಷ್‌: ಎರಡನೇ ಸುತ್ತಿಗೆ ಜೋಷ್ನಾ ಚಿಣ್ಣಪ್ಪ

Last Updated 22 ಮಾರ್ಚ್ 2017, 19:09 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಭಾರತದ ಜೋಷ್ನಾ ಚಿಣ್ಣಪ್ಪ ಬ್ರಿಟಿಷ್ ಓಪನ್ ಸ್ಕ್ವಾಷ್‌ ಟೂರ್ನಿಯಲ್ಲಿ ಬುಧವಾರ ಎರಡನೇ ಸುತ್ತು ತಲುಪಿದ್ದಾರೆ.

ದೀಪಿಕಾ ಪಳ್ಳಿಕಲ್ ಹಾಗೂ ಸೌರವ್ ಘೋಷಾಲ್ ಅವರ ಸೋಲಿನ ಬಳಿಕ ಜೋಷ್ನಾ ಈ ಟೂರ್ನಿಯಲ್ಲಿ ಭಾರತದ ಏಕೈಕ ಭರವಸೆ ಎನಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಜೋಷ್ನಾ 11–6, 8–11, 11–6, 12–10ರಲ್ಲಿ ಆಸ್ಟ್ರೇಲಿಯಾದ ರಾಚೆಲ್ ಗ್ರಿನ್‌ಹ್ಯಾಮ್ ಅವರನ್ನು ಮಣಿಸಿದರು.

ಎರಡನೇ ಸುತ್ತಿನಲ್ಲಿ ಭಾರತದ ಆಟಗಾರ್ತಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಈಜಿಪ್ಟ್‌ನ ರನೀಮ್ ಎಲ್ ವೆಲಿ ವಿರುದ್ಧ ಆಡಲಿದ್ದಾರೆ. ದೀಪಿಕಾ 4–11, 5–11, 13–11, 1–11ರಲ್ಲಿ ಇಂಗ್ಲೆಂಡ್‌ನ ಲೂರಾ ಮೊಸಾರೊ ವಿರುದ್ಧ ಸೋಲು ಕಂಡರು. ಅರ್ಹತಾ ಸುತ್ತಿನ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಘೋಷಾಲ್ 7–11, 4–11, 4–11ರಲ್ಲಿ ಸ್ಕಾಟ್ಲೆಂಡ್‌ನ ಅಲನ್ ಕ್ಲೇನ್‌ ವಿರುದ್ಧ ಸೋಲು ಅನುಭವಿಸಿದರು.

ಒಂದು ವಾರದ ಹಿಂದೆ ಘೋಷಾಲ್ ವಿಂಬಲ್ಡನ್ ಕ್ಲಬ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇದೇ ಆಟಗಾರನ ಎದುರು ಸೋಲು ಕಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT