ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ಹಕ್ಕು ಪಡೆದ ಎಂಸಿಎ, ಎಸ್‌ಸಿಎ

ಆವರ್ತ (ರೊಟೇಷನ್‌) ನಿಯಮದಡಿ ಅವಕಾಶ ಲಭ್ಯ
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಧಾ ಸಮಿತಿಯ ‘ಒಂದು ರಾಜ್ಯ ಒಂದು ಮತ’ ಶಿಫಾರಸಿನ ಅನ್ವಯ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪೂರ್ಣ ಪ್ರಮಾಣದ ಸದಸ್ಯತ್ವ ಕಳೆದು ಕೊಂಡಿರುವ ಮುಂಬೈ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಮತ್ತು ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಗಳು (ಎಸ್‌ಸಿಎ) ಆವರ್ತ (ರೊಟೇಷನ್‌) ನಿಯಮದ ಅನುಸಾರ ಮತದಾನದ ಹಕ್ಕು ಪಡೆಯಲಿವೆ.

ಈ ಸಂಸ್ಥೆಗಳಿಗೆ ವಾರ್ಷಿಕ ಮಹಾ ಸಭೆಯಲ್ಲಿ ಮತದಾನ ಮಾಡುವ ಅವಕಾಶ ಕಲ್ಪಿಸುವ ಸಲುವಾಗಿ ಬಿಸಿಸಿಐ, ತನ್ನ ಬೈಲಾದಲ್ಲಿರುವ 3 (ಎ)(2)ಸಿ ನಿಯಮದ ಅನ್ವಯ ನಡೆದುಕೊಳ್ಳಲಿದೆ. ಒಂದು ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಕ್ರಿಕೆಟ್‌ ಸಂಸ್ಥೆಗಳು ಇದ್ದರೆ, ಇವುಗಳ ಪೈಕಿ ವರ್ಷಕ್ಕೆ ಒಂದು  ಸಂಸ್ಥೆ ಆವರ್ತ ನಿಯಮದ ಪ್ರಕಾರ  ಬಿಸಿಸಿಐ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದೆ.

ನೂತನ ನಿಯಮದ ಅನ್ವಯ ಮುಂಬೈ ಕ್ರಿಕೆಟ್‌ ಸಂಸ್ಥೆ, ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಮತ್ತು ವಿದರ್ಭ ಕ್ರಿಕೆಟ್‌ ಸಂಸ್ಥೆಗಳ ಪೈಕಿ ಒಂದೊಂದು ವರ್ಷ ಒಂದೊಂದು ಸಂಸ್ಥೆ  ಬಿಸಿಸಿಐ ಸಭೆಯಲ್ಲಿ ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿ ಸಲಿವೆ. ಗುಜರಾತ್‌ ಕ್ರಿಕೆಟ್‌ ಸಂಸ್ಥೆ, ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಮತ್ತು ಬರೋಡಾ ಕ್ರಿಕೆಟ್‌ ಸಂಸ್ಥೆಗಳಿಗೂ ಈ ನಿಯಮ  ಅನ್ವಯ ವಾಗಲಿದೆ.

ಇವುಗಳ ಪೈಕಿ ಒಂದು ವರ್ಷ ಒಂದು ಸಂಸ್ಥೆ ಗುಜರಾತ್‌ ರಾಜ್ಯದ ಪ್ರತಿನಿಧಿಯಾಗಿ ಬಿಸಿಸಿಐ ಸಭೆಯಲ್ಲಿ ಭಾಗವಹಿಸಲಿದೆ. ಪ್ರತಿ ರಾಜ್ಯದಲ್ಲೂ  ಕ್ರಿಕೆಟ್‌ ಸಂಸ್ಥೆಗಳ ಹೆಸರು ಭಿನ್ನವಾಗಿರುವ ಕಾರಣ ಬಿಸಿಸಿಐ ಕ್ರಿಕೆಟ್‌ ಸಂಸ್ಥೆಗಳ ಬದಲು 30 ರಾಜ್ಯಗಳ ಪಟ್ಟಿಯನ್ನು ಸಿದ್ಧಗೊಳಿಸಿದೆ. 

ಈ ಮೊದಲು ಬಿಸಿಸಿಐಗೆ  ಸುಪ್ರೀಂ ಕೋರ್ಟ್‌ ನೇಮಿಸಿದ್ದ ಆಡಳಿತಾಧಿಕಾರಿ ಗಳ ಸಮಿತಿ ‘ಒಂದು ರಾಜ್ಯ ಒಂದು ಮತ’ ಶಿಫಾರಸಿನ ಅನ್ವಯ ಮಹಾರಾಷ್ಟ್ರ ಮತ್ತು ಗುಜರಾತ್‌ ಸಂಸ್ಥೆಗಳಿಗೆ ಕಾಯಂ ಮತ ಚಲಾವಣೆಯ ಹಕ್ಕು ನೀಡಿತ್ತು. ಹೀಗಾಗಿ ಎಂಸಿಎ, ಎಸ್‌ಸಿಎ, ವಿದರ್ಭ ಮತ್ತು ಬರೋಡಾ ಕ್ರಿಕೆಟ್‌ ಸಂಸ್ಥೆಗಳು ಈ ಹಕ್ಕು ಕಳೆದುಕೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT