ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ್‌ ಸಿಂಗ್‌ಗೆ ಎರಡು ಚಿನ್ನದ ಪದಕ

ಪ್ಯಾರಾ ಅಥ್ಲೆಟಿಕ್ಸ್‌: ಭಾರತಕ್ಕೆ 8 ಪದಕ
Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಪ್ಯಾರಾ ಅಥ್ಲೀಟ್‌  ಸುಂದರ್‌ ಸಿಂಗ್‌ ಗುರ್ಜಾರ್‌ ಅವರು ದುಬೈನಲ್ಲಿ ನಡೆಯುತ್ತಿರುವ 9ನೇ ಫಾಜಾ ಅಂತರರಾಷ್ಟ್ರೀಯ ಪ್ಯಾರಾ ಗ್ರ್ಯಾಂಡ್‌ ಪ್ರಿ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಬುಧವಾರ ನಡೆದ ಎಫ್‌–46 ವಿಭಾಗದ ಜಾವಲಿನ್‌ ಥ್ರೋ ಸ್ಪರ್ಧೆಯಲ್ಲಿ ಸುಂದರ್‌ ಚಿನ್ನಕ್ಕೆ ಕೊರಳೊಡ್ಡಿದರು. ಅವರು 60.33 ಮೀಟರ್ಸ್‌ ದೂರ ಜಾವಲಿನ್‌ ಎಸೆದರು.

ಎರಡು ವರ್ಷಗಳ ಹಿಂದೆ ಅಪಘಾತ ದಲ್ಲಿ ಬಲಗೈ ಕಳೆದುಕೊಂಡಿದ್ದ 21 ವರ್ಷದ ಸುಂದರ್‌ ಅವರು ಡಿಸ್ಕಸ್‌ ಥ್ರೋನಲ್ಲೂ ಚಿನ್ನಕ್ಕೆ ಮುತ್ತಿಕ್ಕಿದರು.
ಭಾರತದ ಅಥ್ಲೀಟ್‌ 44.56 ಮೀಟರ್ಸ್‌ ಡಿಸ್ಕಸ್‌ ಎದುರು ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿದರು.

ರಣಬೀರ್‌ಗೆ ಚಿನ್ನ: ಪುರುಷರ ಎಫ್‌–44 ವಿಭಾಗದ ಜಾವಲಿನ್‌ ಥ್ರೋ ಸ್ಪರ್ಧೆಯಲ್ಲಿ ನರೇಂದರ್‌ ರಣಬೀರ್‌ ಮೊದಲ ಸ್ಥಾನ ಗಳಿಸಿ ಭಾರತದ ಖಾತೆಗೆ ಮೂರನೇ ಚಿನ್ನ ಸೇರ್ಪಡೆ ಮಾಡಿದರು. ಅವರು ಜಾವಲಿನ್‌ ಅನ್ನು 47.75 ಮೀಟರ್ಸ್‌ ದೂರ ಎಸೆದರು.

ಪುರುಷರ ಟಿ–42/44/46 ವಿಭಾಗದ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಆನಂದನ್‌ ಗುಣಶೇಖರನ್‌ ಬೆಳ್ಳಿ ತಮ್ಮದಾಗಿಸಿಕೊಂಡರು.
ಟಿ–13/20 ವಿಭಾಗದ 800 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ರಾಮಕರಣ್‌ ಸಿಂಗ್‌, ಎಫ್‌–40/41/42 ವಿಭಾಗದ ಶಾಟ್‌ಪಟ್‌ನಲ್ಲಿ ಸುರ್ಜಿತ್‌ ಸಿಂಗ್‌, ಟಿ–11/12/13 ವಿಭಾಗದ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ರೋಹಿತ್‌ ಹಾಗೂ ಟಿ–42/44/46 ವಿಭಾಗದ 400 ಮೀಟರ್ಸ್‌ನಲ್ಲಿ ಪ್ರಮೋದ್‌ ಕೆ. ಯಾದವ್‌ ಅವರು ಕಂಚಿನ ಸಾಧನೆ ಮಾಡಿದರು.

ಒಟ್ಟಾರೆ ಎಂಟು ಪದಕ ಗೆದ್ದಿರುವ ಭಾರತ ತಂಡ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಈ ಕೂಟದಲ್ಲಿ ಒಟ್ಟು 48 ದೇಶಗಳು ಭಾಗವಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT