‘ಈ ಹಿಂದೆ ಕಿ.ಮೀಗೆ ₹19.50 (ಎ.ಸಿ) ಹಾಗೂ ₹14.50 (ನಾನ್ ಎ.ಸಿ) ಗರಿಷ್ಠ ದರ ನಿಗದಿ ಮಾಡಿದ್ದೆವು. ಈ ಬಾರಿ ಕನಿಷ್ಠ ದರವನ್ನೂ ನಿಗದಿಪಡಿಸಲಾಗಿದ್ದು, ಸರ್ಕಾರ ಒಪ್ಪಿಗೆ ನೀಡಿದ ಬಳಿಕವೇ ಈ ದರ ಜಾರಿಗೆ ಬರಲಿದೆ’ ಎಂದು ತಿಳಿಸಿದರು. ದರ ಬಗ್ಗೆ ಮಾತನಾಡಿದ ಟ್ಯಾಕ್ಸಿ ಚಾಲಕರೊಬ್ಬರು, ‘ಖಾಸಗಿ ಕಂಪೆನಿಗಳ ದರ ನಿಗದಿಯಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗ ಕನಿಷ್ಠ ದರ ನಿಗದಿ ಮಾಡಿದ್ದು ಒಳ್ಳೆಯದಾಗಿದೆ. ಇದಕ್ಕೆ ಸರ್ಕಾರವು ತ್ವರಿತವಾಗಿ ಒಪ್ಪಿಗೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.