ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ: ಏಕ ರೀತಿ ಪರೀಕ್ಷೆ, ಮೌಲ್ಯಮಾಪನ ವ್ಯವಸ್ಥೆ ಜಾರಿ

Last Updated 22 ಮಾರ್ಚ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮುಂದಿನ ವರ್ಷದಿಂದ (2017–18)  6ರಿಂದ 9ನೇ ತರಗತಿಗೆ ಏಕ ರೀತಿಯ ಮೌಲ್ಯಮಾಪನ, ಪರೀಕ್ಷಾ ವಿಧಾನ ಮತ್ತು ಗ್ರೇಡಿಂಗ್‌ ಪದ್ಧತಿಯನ್ನು ಜಾರಿಗೊಳಿಸಿದೆ.

ಇಲ್ಲಿಯವರೆಗೆ ಜಾರಿಯಿದ್ದ ಸಮಗ್ರ ಮತ್ತು ನಿರಂತರ ಮೌಲ್ಯಮಾಪನ ವ್ಯವಸ್ಥೆಯನ್ನು (ಸಿಸಿಇ) ಕೈಬಿಟ್ಟಿರುವ ಮಂಡಳಿಯು ಅದರ ಬದಲಿಗೆ ಹೊಸ ವಿಧಾನವನ್ನು ಜಾರಿಗೊಳಿಸಿ ಸುತ್ತೋಲೆ ಹೊರಡಿಸಿದೆ.

ಶಾಲೆ ಬದಲಿಸುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿತ್ತು: ಇಲ್ಲಿಯವರೆಗೆ ಮಂಡಳಿ ಮಾನ್ಯತೆ ಪಡೆದಿರುವ ವಿವಿಧ ಶಾಲೆಗಳಲ್ಲಿ 6ರಿಂದ 9 ನೇ ತರಗತಿಗೆ ವಿವಿಧ ಮಾನದಂಡಗಳ ಅನ್ವಯ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಯುತ್ತಿತ್ತು.

ವಿದ್ಯಾರ್ಥಿಗಳು ಒಂದು ಶಾಲೆ ಬಿಟ್ಟು ಮತ್ತೊಂದು ಶಾಲೆ ಸೇರುವಾಗ ಈ ವಿಭಿನ್ನ ಪದ್ಧತಿಗಳು ಅವರಿಗೆ ಮಾರಕವಾಗುತ್ತಿದ್ದವು. ಈ ಕುರಿತು ಮಂಡಳಿಗೆ ದೂರುಗಳು ಬಂದಿದ್ದವು. ಹೊಸ ವಿಧಾನದಿಂದಾಗಿ ಇಂಥಹ ಸಮಸ್ಯೆಗಳು  ಎದುರಾಗುವುದಿಲ್ಲ ಎಂದು ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

l ಹೊಸ ವಿಧಾನ: ಲಿಖಿತ ಪರೀಕ್ಷೆಗೆ 80 ಹಾಗೂ ಆಂತರಿಕ ಮೌಲ್ಯಮಾಪನಕ್ಕೆ 20 ಅಂಕಗಳು (ಘಟಕ ಪರೀಕ್ಷೆಗೆ 10, ನೋಟ್‌ ಪುಸ್ತಕ ಸಲ್ಲಿಕೆಗೆ 5, ವಿಷಯ ಸಂವರ್ಧನೆಗೆ 5 ಅಂಕಗಳು). ಶೇ 80:20 ಅಂಕಗಳ ಅನುಪಾತದಲ್ಲಿಯೇ  ಅರ್ಧ ವಾರ್ಷಿಕ ಮತ್ತು ವಾರ್ಷಿಕ ಪರೀಕ್ಷೆ ನಡೆಯಬೇಕು.

l ಏಕರೀತಿಯ ಗ್ರೇಡಿಂಗ್‌ ವಿಧಾನ:  6ರಿಂದ 8ನೇ ತರಗತಿವರೆಗೆ 91ರಿಂದ 100 ಅಂಕಗಳಿಗೆ ‘ಎ1’ ಗ್ರೇಡ್‌, 81ರಿಂದ 90 ಅಂಕಗಳಿಗೆ ‘ಎ2’, 71ರಿಂದ 80 ಅಂಕಗಳಿಗೆ ‘ಬಿ1‘, 61ರಿಂದ 70 ಅಂಕಗಳಿಗೆ ‘ಬಿ2’, 51ರಿಂದ 60 ಅಂಕಗಳಿಗೆ ‘ಸಿ1’, 41ರಿಂದ 50 ಅಂಕಗಳಿಗೆ ‘ಸಿ2’, 33ರಿಂದ 40 ಅಂಕಗಳಿಗೆ ‘ಡಿ’ ಹಾಗೂ 32ಕ್ಕಿಂತ ಕಡಿಮೆ ಅಂಕಕ್ಕೆ ‘ಇ’ (ಸುಧಾರಣೆ ಅಗತ್ಯ).

l 9ನೇ ತರಗತಿಗೂ ಬಹುತೇಕ ಇದೇ ರೀತಿಯ ಗ್ರೇಡಿಂಗ್‌ ವ್ಯವಸ್ಥೆ ಇರುತ್ತದೆಯಾದರೂ, 32 ಮತ್ತು ಅದಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗೆ ‘ಫೇಲ್‌’ ಎಂದು ಅಂಕಪಟ್ಟಿಯಲ್ಲಿ ನಮೂದಿಸಬೇಕು.

l ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆ, ಶಿಸ್ತು, ಹಾಜರಾತಿ, ನಡವಳಿಕೆಯನ್ನು ಆಧರಿಸಿ ಅಂಕಪಟ್ಟಿಯಲ್ಲಿ ‘ಎ’ (ಅತ್ಯುತ್ತುಮ), ‘ಬಿ’ (ಉತ್ತಮ), ‘ಸಿ’ (ತೃಪ್ತಿಕರ) ಗ್ರೇಡ್‌ಗಳನ್ನು ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT