ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿ’

Last Updated 23 ಮಾರ್ಚ್ 2017, 5:44 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಕ್ರಿಯಾಶೀಲತೆ  ಹೆಚ್ಚು ಅವಶ್ಯ ಎಂದು ವಿಜ್ಞಾನಿ ಡಾ.ಬಿ.ಎಸ್. ನಾಯ್ಡು ತಿಳಿಸಿದರು.
ನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ಎಸ್‌ಎನ್‌ಪಿ ಸಭಾಂಗಣದಲ್ಲಿ ಜ್ಞಾನ ಭಾರತಿ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಹಾಗೂ ಪೋಷಕರು  ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ವೈಜ್ಞಾ ನಿಕ ಮನೋಭಾವ ಬೆಳೆಸಬೇಕು.  ಒಂದು ಮಗು ತಾಂತ್ರಿಕವಾಗಿ, ಸಾಮಾಜಿ ಕವಾಗಿ ಪ್ರಬುದ್ಧನಾದರೆ ಮಾತ್ರ ಆ ಮಗು ದೇಶಕ್ಕೆ  ಆಸ್ತಿಯಾಗುತ್ತದೆ.  ಶಾಲೆಗಳು ದೇಶಕ್ಕೆ  ಉತ್ತಮ ಪ್ರಜೆಯನ್ನು ನೀಡುವ ಕಾರ್ಖಾನೆಗಳಾಗಬೇಕು.

ಮನುಷ್ಯನ ಜೀವನದಲ್ಲಿ ದಿನದಿಂದ ದಿನಕ್ಕೆ ಸಂಬಂ ಧಗಳು  ಬೆಲೆ ಕಳೆದು ಕೊಳ್ಳುತ್ತಿದ್ದು, ಶಾಲೆಗಳು ಮಕ್ಕಳಲ್ಲಿ ಬೌದ್ಧಿಕ ಶಿಕ್ಷಣದ ಜೊತೆ ಮಾನವೀಯ ಮೌಲ್ಯಗಳ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ ಜ್ಞಾನಭಾರತಿ ಶಾಲೆ ಮುನ್ನಡೆಯುತ್ತಿದೆ ಎಂದರು.

ಜ್ಞಾನರಶ್ಮಿ  ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ನಂದಕುಮಾರ್ ಮಾತ ನಾಡಿ, ಜ್ಞಾನಭಾರತಿ ಶಾಲೆ ಸಮಾಜದ ಎಲ್ಲಾ ವರ್ಗದ  ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ನೀಡುತ್ತಾ ನಗರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.

ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ಪೂರಕ ವಾತಾವರಣವಿದ್ದು, ವಿದ್ಯಾರ್ಥಿಗಳು  ಜೀವನದಲ್ಲಿ  ಉತ್ತಮ ಉದ್ದೇಶ ಹಾಗೂ ಗುರಿ ಹೊಂದಬೇಕು. ಪೋಷಕರ ಕನಸನ್ನು ಈಡೇರಿಸಬೇಕು. ಶಿಕ್ಷಣ ಪಡೆಯುವುದರ ಜತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಜ್ಞಾನಭಾರತಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಉಮಾಶಂಕರ್ ಮಾತನಾಡಿ, ಶಾಲೆಯು ಗುಣಮಟ್ಟದ ಶಿಕ್ಷಣ ನೀಡುತ್ತಾ ಯಶಸ್ಸಿನತ್ತ ದಾಪು ಗಾಲು ಹಾಕಲು ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರ ಕಾರಣವಾಗಿದ್ದು, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಶಿಸ್ತು ರೂಢಿಸಬೇಕು. ಜೀವನದಲ್ಲಿ ಶಿಸ್ತನ್ನು ಪಾಲಿಸುವ ವ್ಯಕ್ತಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಕ್ರೈಸ್ತ್ ದ ಕಿಂಗ್ ಶಾಲೆಯ ಕಾರ್ಯ ದರ್ಶಿ ಶ್ರೀನಿವಾಸ್ ಹಾಗೂ ಗುತ್ತಿಗೆದಾರ ಜನಾರ್ಧನ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ  ವಿದ್ಯಾರ್ಥಿ ಗಳಿಗೆ  ಬಹುಮಾನ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ  ಶಾಲೆ ಪ್ರಾಂಶುಪಾಲೆ ಯು.ವೈಷ್ಣವಿ, ಶಿಕ್ಷಕಿಯರಾದ ಸುನೀತಾ, ಶಿಲ್ಪಾ, ಸೌಮ್ಯ, ಸುಮಾ, ವೀಣಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT