ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇರುಬೀಜ ಕಾರ್ಮಿಕರ ವೇತನ ಹೆಚ್ಚಳಕ್ಕೆ ಆಗ್ರಹ

Last Updated 23 ಮಾರ್ಚ್ 2017, 5:48 IST
ಅಕ್ಷರ ಗಾತ್ರ

ಕಾರ್ಕಳ: 2012ದಿಂದ ಈತನಕ ಕಾರ್ಮಿಕರ ವೇತನ ಹೆಚ್ಚಳವಾಗಿಲ್ಲ. ಕಾರ್ಮಿಕ ಕಾಯ್ದೆಯಂತೆ ತಮಗೆ ಕನಿಷ್ಠ ವೇತನ ನೀಡಬೇಕು ಎಂದು  ಒತ್ತಾಯಿಸಿ ತಾಲ್ಲೂಕಿನ ನೂರಾರು ಗೇರುಬೀಜ ಸಂಸ್ಕರಣಾ ಘಟಕಗಳಲ್ಲಿ ದುಡಿಯುತ್ತಿ ರುವ ಕಾರ್ಮಿಕರು ದಕ್ಷಿಣ ಕನ್ನಡ ಗೇರುಬೀಜ ಶ್ರಮಿಕ ಸಂಘದ ನೇತೃತ್ವ ದಲ್ಲಿ ಶಾಸಕ ವಿ.ಸುನೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಕಾರ್ಖಾನೆಗಳಲ್ಲಿ ಗೇರುಬೀಜ ಸಂಸ್ಕರಣೆಗೆ ಯಂತ್ರಗಳನ್ನು ಬಳಸುತ್ತಿ ರುವ ಕಾರಣ ಕಾರ್ಮಿಕರ ಕೆಲಸದ ಸ್ವರೂಪದಲ್ಲಿ ಬದಲಾವಣೆಯಾಗಿದೆ. ಕನಿಷ್ಠ ವೇತನದಲ್ಲಿಯೂ ಕಡಿತವಾಗಿರು ವುದರಿಂದ ಕಾರ್ಮಿಕರ ದೈನಂದಿನ ಜೀವನ ದುಸ್ತರವಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ದಿನಗೂಲಿ ನೌಕರರಿಗೆ ಹಾಗೂ ಗುತ್ತಿಗೆ ಆಧಾರದಲ್ಲಿ ದುಡಿಯು ತ್ತಿರುವ ಕಾರ್ಮಿಕರಿಗೆ ಕನಿಷ್ಠ ವೇತನ ವನ್ನು ಶೇ 43ರಷ್ಟು ಏರಿಕೆ ಮಾಡಿದೆ. ಆದರೆ, ಗೇರುಬೀಜ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಳೆದ 5ವರ್ಷಗಳಿಂದ ವೇತನವನ್ನು ಪರಿಷ್ಕರಿಸಲಿಲ್ಲ ಎಂದು ದೂರಿದರು.

ಭಾರತೀಯ ಮಜ್ದೂರ್ ಸಂಘದ ಮೂಲಕ ಕನಿಷ್ಠ ವೇತನ ಸಲಹಾ ಸಮಿತಿಯಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಲಾಗಿದೆ. ಈ ಕುರಿತು ಒಂದು ಉಪಸಮಿತಿ ರಚಿಸಲಾಗಿದೆ ಎಂದು ಹೇಳಲಾಗಿದ್ದರೂ ಈ ತನಕ ಉಪಸಮಿತಿ ಕಾರ್ಯೋನ್ಮುಖವಾಗದಿರುವುದು ಬೇಸರದ ಸಂಗತಿ. ಹೀಗಾಗಿ, ಶಾಸಕರು ವಿಧಾನಸಭೆಯಲ್ಲಿ ಈ ಕುರಿತು ಕಾರ್ಮಿಕ ಸಚಿವರ ಗಮನಸೆಳೆದು ಕಾರ್ಮಿಕರ ವೇತನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಂಘದ ಅಧ್ಯಕ್ಷ ಕೆ. ವಿಶ್ವನಾಥ ಶೆಟ್ಟಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಸಂಘದ ಉಪಾಧ್ಯಕ್ಷೆ ಸರಸ್ವತಿ, ಸಂಘಟನಾ ಕಾರ್ಯದರ್ಶಿ ಕರುಣಾಕರ ಪೂಜಾರಿ, ಚಂದ್ರಹಾಸ ಶೆಟ್ಟಿ ಮೊದಲಾ ದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT