ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಘೋಷಣೆಗೆ ಆಗ್ರಹ

ಮೂಲ್ಕಿ : ತಾಲ್ಲೂಕು ಹೋರಾಟ ಸಮಿತಿಯಿಂದ ಪ್ರತಿಭಟನೆ
Last Updated 23 ಮಾರ್ಚ್ 2017, 5:59 IST
ಅಕ್ಷರ ಗಾತ್ರ

ಮೂಲ್ಕಿ: ‘ಬಂದರು, ನ್ಯಾಯಾಲಯ, ಪ್ರವಾಸಿ ಕೇಂದ್ರ ಹೀಗೆ ಎಲ್ಲ ಅರ್ಹತೆಗಳು ಇರುವ ಮೂಲ್ಕಿಯನ್ನು ಶೀಘ್ರದಲ್ಲಿ ಬಜೆ ಟ್ ಅಧಿವೇಶನ ಮುಗಿಯುವ ಮೊದಲೇ ಅಧಿಕೃತವಾಗಿ ತಾಲ್ಲೂಕಾಗಿ ಪ್ರಕಟಿಸ ಬೇಕು’ ಎಂದು ಮೂಲ್ಕಿ ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಪುನರೂರು ಆಗ್ರಹಿಸಿದರು.

ಮೂಲ್ಕಿ ತಾಲ್ಲೂಕು ಘೋಷಿಸಲು ಆಗ್ರಹಿಸಿ ಬುಧವಾರ ಮೂಲ್ಕಿ ತಾಲ್ಲೂಕು ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಮೂಲ್ಕಿಯನ್ನು ಆಡಳಿತಾತ್ಮಕವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಮೂಲ್ಕಿ ಹೋ ಬಳಿ ಸುಮಾರು 32 ಗ್ರಾಮವನ್ನು ಹೊಂ ದಿದೆ. ಇಲ್ಲೇ ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುತ್ತದೆ. ಮೂಲ್ಕಿಯ ನಂತರ ಬೆಳವಣಿಗೆ ಕಂಡಿರುವ ಮೂಡು ಬಿದಿರೆ ಹಾಗೂ ಕಾಪು ತಾಲ್ಲೂಕು ಘೋಷಣೆ ಮಾಡಿರುವುದರಿಂದ ಮೂಲ್ಕಿಯನ್ನು ಶೀಘ್ರದಲ್ಲಿ ಬಜೆಟ್ ಅಧಿ ವೇಶನ ಮುಗಿಯುವ ಮೊದಲೇ ಅಧಿಕೃ ತವಾಗಿ ತಾಲ್ಲೂಕಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಕಾರ್ಯ ದರ್ಶಿ ದಿನೇಶ್ ಹೆಗ್ಡೆ ಉಳೆಪಾಡಿ ಮಾತ ನಾಡಿ, ‘ಸರ್ಕಾರದಿಂದ ನೇಮಿಸಲ್ಪಟ್ಟ ಎಲ್ಲ ಸಮಿತಿಗಳು ಮೂಲ್ಕಿ ತಾಲ್ಲೂಕಿಗೆ ಶಿಫಾರಸ್ಸು ನೀಡಿತ್ತು. ಮೂಲ್ಕಿ ಹೋಬ ಳಿಯನ್ನು ಮೂಡುಬಿದಿರೆಗೆ ಸೇರಿಸುವ ಪ್ರಯತ್ನಕ್ಕೆ ವಿರೋಧ ಇದೆ.

ಶಿಕ್ಷಣ ಸಂಸ್ಥೆ ಗಳು, ಧಾರ್ಮಿಕ ಕೇಂದ್ರಗಳು, ಕೈಗಾ ರಿಕಾ ಪ್ರಾಂಗಣ, ವೃತ್ತ ನಿರೀಕ್ಷಕ ಕಚೇರಿ, ರಿಜಿಸ್ಟ್ರಾರ್ ಕಚೇರಿ ಹೀಗೆ ಎಲ್ಲವೂ ಇದ್ದರೂ ಮೂಲ್ಕಿ ತಾಲ್ಲೂಕಿನಿಂದ ವಂಚಿ ತವಾಗಿದೆ.

ವಿಶೇಷ ತಹಶೀಲ್ದಾರರನ್ನು ನೇಮಿಸಿ ಮೂಲ್ಕಿ ತಾಲ್ಲೂಕಿಗೆ ಪೂರಕ ವಾದ ವಾತಾವರಣ ನಿರ್ಮಾಣವಾಗಿ ದ್ದರೂ ಮೂಲ್ಕಿ ತಾಲ್ಲೂಕಿನಿಂದ ಹಿನ್ನಡೆ ಅನುಭವಿಸಿದೆ’ ಎಂದು ಹೇಳಿದರು.

ಮೂಲ್ಕಿ ವಿಶೇಷ ತಹಶೀಲ್ದಾರ್ ಕಿಶೋರ್‌ ಕುಮಾರ್‌ಗೆ ಸಮಿತಿಯಿಂದ ಮನವಿಯನ್ನು ಸಲ್ಲಿಸಲಾಯಿತು. ‘ಮನವಿ ಯನ್ನು ಶೀಘ್ರವಾಗಿ ಮುಖ್ಯಮಂತ್ರಿಗಳಿಗೆ ರವಾನಿಸುತ್ತೇನೆ’ ಎಂದು ತಹಶೀಲ್ದಾರ್ ಭರವಸೆ ನೀಡಿದರು.

ಕೆ.ಭುವನಾಭಿರಾಮ ಉಡುಪ, ಗೋಪಿನಾಥ ಪಂಡಂಗ, ಧನಂಜಯ ಮಟ್ಟು, ಹರೀಶ್ ಪುತ್ರನ್, ದೇವಪ್ರಸಾದ ಪುನರೂರು, ಮನ್ಸೂರ್ ಎಚ್., ಮಧು ಆಚಾರ್ಯ, ಸತ್ಯಜಿತ್ ಸುರತ್ಕಲ್, ವಿನೋದ್ ಸಾಲ್ಯಾನ್, ಶಾಲೆಟ್ ಪಿಂಟೊ, ಇಕ್ಬಾಲ್‌ ಅಹ್ಮದ್, ಜೀವನ್ ಶೆಟ್ಟಿ, ಸುನಿಲ್ ಆಳ್ವಾ, ಕಸ್ತೂರಿ ಪಂಜ, ಸಾಧು ಅಂಚನ್, ಹರ್ಷರಾಜ್ ಶೆಟ್ಟಿ, ಸುಜಿತ್ ಸಾಲ್ಯಾನ್, ಬಿ.ಎಂ.ಆಸೀಫ್, ಸಾಹುಲ್ ಅಹಮದ್, ಅಬ್ದುಲ್ ರಜಾಕ್, ಪುತ್ತುಬಾವ, ಉಮಾನಾಥ ಕೋಟ್ಯಾನ್, ಈಶ್ವರ ಕಟೀಲು ಮುಂತಾದವರು ಇದ್ದರು.

*
ವಿಶೇಷ ತಹಶೀಲ್ದಾರರನ್ನು ನೇಮಿಸಿ ಮೂಲ್ಕಿ ತಾಲ್ಲೂಕಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದರೂ ಮೂಲ್ಕಿಯು ತಾಲ್ಲೂಕಿನಿಂದ ಹಿನ್ನಡೆ ಅನುಭವಿಸಿದೆ.
-ದಿನೇಶ್ ಹೆಗ್ಡೆ ಉಳೆಪಾಡಿ,
ಹೋರಾಟ ಸಮಿತಿಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT