ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ: 87 ಶಾಲೆಗಳಲ್ಲಿ 855 ಸೀಟು ಲಭ್ಯ

ಕೊಡಗು: ಎಲ್‌ಕೆಜಿ, 1ನೇ ತರಗತಿಗೆ ಪ್ರವೇಶ; ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಕೆಗೆ ಅವಕಾಶ
Last Updated 23 ಮಾರ್ಚ್ 2017, 6:12 IST
ಅಕ್ಷರ ಗಾತ್ರ

ಮಡಿಕೇರಿ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಪ್ರಸಕ್ತ ಸಾಲಿಗೆ ಕೊಡಗು ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಮಾರ್ಚ್‌ 31ರ ಒಳಗೆ ಅರ್ಜಿ ಸಲ್ಲಿಸಬಹುದು.

ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಈ ಅವಕಾಶಕ್ಕೆ ಅರ್ಹರು. 87 ಶಾಲೆಗಳಲ್ಲಿ 855 ಸೀಟುಗಳಿಗೆ ಪ್ರವೇಶಾವಕಾಶವಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಖಾಸಗಿ ಶಾಲೆಗಳಲ್ಲಿ (ಅಲ್ಪಸಂಖ್ಯಾತ ಶಾಲೆ ಹೊರತುಪಡಿಸಿ) ಮಕ್ಕಳ ಶಿಕ್ಷಣ ಹಕ್ಕು ಅಧಿನಿಯಮದಂತೆ ಶೇ 25ರಷ್ಟು ಸೀಟುಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯ ಮೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಲ್ಲಿ ಆರ್‌ಟಿಇ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ.

2017–18ನೇ ಸಾಲಿಗೆ ಪ್ರಾರಂಭಿಕ ತರಗತಿಗಳಾದ ಎಲ್‌ಕೆಜಿ ಮತ್ತು 1ನೇ ತರಗತಿ ಪ್ರವೇಶಕ್ಕೆ ಇದೇ 31ರ ಒಳಗೆ ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು ತಿಳಿಸಿದ್ದಾರೆ.

ಏನು ನಿಯಮ?: ಎಲ್‌ಕೆಜಿ ದಾಖಲಾತಿಗೆ 3 ವರ್ಷ 10 ತಿಂಗಳು, 1ನೇ ತರಗತಿಗೆ 5 ವರ್ಷ 10 ತಿಂಗಳು ಆಗಿರಬೇಕು. ಇತರೆ ವರ್ಗದವರಿಗೆ ₹ 3.5 ಲಕ್ಷ ಆದಾಯ ಮಿತಿ ನಿಗದಿ ಪಡಿಸಲಾಗಿದೆ. ಪ್ರವರ್ಗ –1, ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಆದಾಯ ಮಿತಿ ಇಲ್ಲ. ಪೋಷಕರು ತಮ್ಮ ವಾರ್ಡ್/ಜನವಸತಿ ಪ್ರದೇಶದ ಶಾಲೆಗಳ ಆಯ್ಕೆಗೆ ಅವಕಾಶ ಇದೆ. ಸೀಟು ಆಯ್ಕೆ ಪ್ರಕ್ರಿಯೆಯಲ್ಲಿ ವಾರ್ಡ್ ವ್ಯಾಪ್ತಿಯವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಎಲ್‌ಕೆಜಿ, 1ನೇ ತರಗತಿಗೆ ಪ್ರವೇಶಕ್ಕೆ ಲಭ್ಯವಿರುವ ಸೀಟುಗಳ ಸಂಖ್ಯೆ–
-ಮಡಿಕೇರಿ ತಾಲ್ಲೂಕು: 
ಮೂರ್ನಾಡು ಮಾರುತಿ ಎಜುಕೇಷನ್ ಟ್ರಸ್ಟ್ ಶಾಲೆಯಲ್ಲಿ 1ನೇ ತರಗತಿಗೆ 11 ಸೀಟುಗಳು, ಮೂರ್ನಾಡು ಜ್ಞಾನಜ್ಯೋತಿ ಎಜುಕೇಷನ್ ಟ್ರಸ್ಟ್‌ 12 ಸೀಟುಗಳು, ಮೂರ್ನಾಡು ಪ್ರಾಥಮಿಕ ಶಾಲೆಯ ಎಲ್‌ಕೆಜಿಗೆ 13 ಸೀಟುಗಳು, ಕೊಟ್ಟಮುಡಿ ಮರ್ಕಜ್ ಪಬ್ಲಿಕ್ ಶಾಲೆಯಲ್ಲಿ 1ನೇ ತರಗತಿಗೆ 11, ನಾಪೋಕ್ಲು ಶ್ರೀರಾಮ ಟ್ರಸ್ಟ್ 11, ನಾಪೋಕ್ಲು ಸೇಕ್ರೇಡ್ 6, ಎಕ್ಸೆಲ್ ಸ್ಕೂಲ್ ಆಫ್ ಎಜುಕೇಷನ್ 6, ನರಿಯಂದಡ ಪ್ರಾಥಮಿಕ ಶಾಲೆಯಲ್ಲಿ 4, ಕೆಸಿಇ ಶಾಲೆ ಕಕ್ಕಬ್ಬೆ 4, ಆಕ್ಸಪರ್ಡ್ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿಗೆ 7,

ಬಲ್ಲಮಾವಟಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 6, ಯಶಸ್ವಿ ಪ್ರಾಥಮಿಕ ಶಾಲೆ 7, ಭಾಗಮಂಡಲ ಜ್ಞಾನೋದಯ ಶಾಲೆ (ಎಲ್‌ಕೆಜಿ) 5, 1ನೇ ತರಗತಿಗೆ 2 ಸೀಟು, ಬೆಟ್ಟಗೇರಿ ಉದಯ ಶಾಲೆಯಲ್ಲಿ 4, ಚೇರಂಬಾಣೆ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆ (ಎಲ್‌ಕೆಜಿ) 11, 1ನೇ ತರಗತಿಗೆ 1 ಸೀಟು, ಅರುಣ ಪ್ರಾಥಮಿಕ ಶಾಲೆ (ಎಲ್‌ಕೆಜಿ) 9, ಸಾಂದೀಪನಿ ವಿದ್ಯಾಪೀಠ (ಎಲ್‌ಕೆಜಿ) 7, ಎಸ್‌ಕೆಎನ್‌ಎನ್‌ಎಂ ಕರಿಕೆ ಶಾಲೆ (ಎಲ್‌ಕೆಜಿ) 7,

ಶ್ರೀಕೃಷ್ಣ ವಿದ್ಯಾಮಂದಿರ (ಎಲ್‌ಕೆಜಿ) 14, ಮಡಿಕೇರಿಯ ಕ್ರೆಸೆಂಟ್ ಶಾಲೆ 1ನೇ ತರಗತಿಗೆ 7, ಲಿಟ್ಲ ಪ್ಲವರ್ ಶಾಲೆ (ಎಲ್‌ಕೆಜಿ) 6, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ (ಎಲ್‌ಕೆಜಿ) 11, ಒಂದನೇ ತರಗತಿಗೆ 12, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ 1ನೇ ತರಗತಿ ಪ್ರವೇಶಕ್ಕೆ 15, ನಗರದ ಬ್ಲಾಸಂ ಶಾಲೆ 1ನೇ ತರಗತಿಗೆ 2 ಸೀಟು, ಶ್ರೀರಾಜರಾಜೇಶ್ವರಿ ವಿದ್ಯಾಲಯ, ಮಡಿಕೇರಿ (ಎಲ್‌ಕೆಜಿ) 2 ಸೀಟು.

ವಿರಾಜಪೇಟೆ ತಾಲ್ಲೂಕು: ಕಾವೇರಿ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 7, ತ್ರಿವೇಣಿ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 7, 1ನೇ ತರಗತಿಗೆ 1 ಸೀಟು, ಬಿಟ್ಟಂಗಾಲ ಬಿಎಂಪಿ ಪ್ರಾಥಮಿಕ ಶಾಲೆ 1ನೇ ತರಗತಿಗೆ ೪ ಸೀಟುಗಳು, ಹನ್ವರ್ ಹುದಾ ಪಬ್ಲಿಕ್ ಶಾಲೆ (ಎಲ್‌ಕೆಜಿ) 12 ಸೀಟು, ವಿಜತಾ ಕಡಂಗ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 5, 1ನೇ ತರಗತಿಗೆ 1 ಸೀಟು. ಎಸ್ಎಂಎಸ್ ಹಿರಿಯ ಪ್ರಾಥಮಿಕ ಶಾಲೆ ಅರಮೇರಿ (ಎಲ್‌ಕೆಜಿ) 12, ಪ್ರಾಥಮಿಕ ಶಾಲೆ 1, ಧ್ರುವ ಪ್ರಾಥಮಿಕ ಶಾಲೆ (ಎಲ್‌ಕೆಜಿ) 7, ಹಳ್ಳಿಗಟ್ಟು ನಿನಾಡ (ಎಲ್‌ಕೆಜಿ) 3 ಸೀಟು, 1ನೇ ತರಗತಿಗೆ 2 ಸೀಟು,

ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯ (ಎಲ್‌ಕೆಜಿ) 7, 1ನೇ ತರಗತಿಗೆ 2 ಸೀಟು, ಸಾಯಿಶಂಕರ್ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 2, 1ನೇ ತರಗತಿಗೆ ೩, ಲಯನ್ಸ್ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 18, 1ನೇ ತರಗತಿಗೆ 2, ಸರ್ವ ದೈವತಾ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 11, 1ನೇ ತರಗತಿಗೆ ಮೂರು ಸೀಟು.

ಪ್ರತಿಭಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 3, 1ನೇ ತರಗತಿಗೆ 8, ಶ್ರೀಮಂಗಲ ಜೈಸಿ ಆಂಗ್ಲ ಶಾಲೆ (ಎಲ್‌ಕೆಜಿ) 5, 1ನೇ ತರಗತಿಗೆ 4, ಪಟ್ಟಿ ಕಾಡು ಆಂಗ್ಲ ಮಾಧ್ಯಮ ಶಾಲೆ (ಎಲ್‌ಕೆಜಿ) 11, ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆ (ಎಲ್‌ಕೆಜಿ) 6, ಸುಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 3, ಸಚಿಟರ್ ಎಜುಕೇಷನ್ ಅಸಹಿ ಅಬ್ದುಲ್ ಹಿ ಸೆಕ್ವಾಪಿ (ಎಲ್‌ಕೆಜಿ) 7, 1ನೇ ತರಗತಿಗೆ 1, ಆತೂರು ಕೂರ್ಗ್ ಪಬ್ಲಿಕ್ ಶಾಲೆ 1ನೇ ತರಗತಿಗೆ 17, ನ್ಯಾಷನಲ್ ಅಕಾಡೆಮಿ ಶಾಲೆ (ಎಲ್‌ಕೆಜಿ) 3 ಸೀಟು, 1ನೇ ತರಗತಿಗೆ 6.

ಗೋಣಿಕೊಪ್ಪ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 8, 1ನೇ ತರಗತಿ 2, ಮರ್ಕಾಜ್ ಪಬ್ಲಿಕ್ ಶಾಲೆ (ಎಲ್‌ಕೆಜಿ) 8, 1ನೇ ತರಗತಿ 2, ಶ್ರೀರಾಜೇಶ್ವರಿ ವಿದ್ಯಾನಿಕೇತನ್ ಎಲ್.ಪಿ. ಶಾಲೆ ದೇವರಪುರ (ಎಲ್‌ಕೆಜಿ) 8, ಮಚಿಮಂಡ ದೇವಯ್ಯ ಮೆಮೋರಿಯಲ್ ಪಬ್ಲಿಕ್ ಶಾಲೆ ಅಮ್ಮತ್ತಿ (ಎಲ್‌ಕೆಜಿ) 3, ನೇತಾಜಿ ಹಿರಿಯ ಪ್ರಾಥಮಿಕ ಶಾಲೆ, ಅಮ್ಮತ್ತಿ (ಎಲ್‌ಕೆಜಿ) 11, ರೋಲಿಕ್ಸ್ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 3,

1ನೇ ತರಗತಿ 2, ಮೌಂಟನ್ ವಿವ್ ಹಿರಿಯ ಪ್ರಾಥಮಿಕ ಶಾಲೆ ವಿರಾಜಪೇಟೆ (ಎಲ್‌ಕೆಜಿ) 9, ಕೂರ್ಗ್ ವ್ಯಾಲಿ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 7, 1ನೇ ತರಗತಿ 2, ವಿರಾಜಪೇಟೆ ಪ್ರಗತಿ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 7, ವಿನಾಯಕ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 6, 1ನೇ ತರಗತಿ 4, ವಿರಾಜಪೇಟೆ ರೋಟರಿ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 9, ವಿರಾಜಪೇಟೆ ಬ್ರೈ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 10.

ಸೋಮವಾರಪೇಟೆ ತಾಲ್ಲೂಕು: ಮಸಗೋಡು ಚೆನ್ನಮ್ಮ ಶಾಲೆ (ಎಲ್‌ಕೆಜಿ) 2, ಚೌಡ್ಲು ಸಾಂದೀಪನಿ ಕಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 13, ಸೋಮವಾರಪೇಟೆ ಜ್ಞಾನವಿಕಾಸ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 9, 1ನೇ ತರಗತಿಗೆ 1, ವಿಶ್ವಮಾನವ ಕುವೆಂಪು ಹಿ.ಪ್ರಾ.ಶಾಲೆ (ಎಲ್‌ಕೆಜಿ) 13, 1ನೇ ತರಗತಿ 3, ಕಲ್ಲುಮಠ ಎಸ್‌ಕೆಎಸ್ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 13, 1ನೇ ತರಗತಿ 5,

ಕೊಡ್ಲಿಪೇಟೆ ಕಿರಿಕೊಡ್ಲಿ ಮಠ ಎಸ್ಎಲ್ಎಸ್ ಪ್ರಾಥಮಿಕ ಶಾಲೆ (ಎಲ್‌ಕೆಜಿ) 13, 1ನೇ ತರಗತಿಗೆ 2, ಚಿಕ್ಕಕೊಳತೂರು ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 3, 1ನೇ ತರಗತಿ 3, ಶನಿವಾರಸಂತೆ ಕಾವೇರಿ ಕಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 13, ಶನಿವಾರಸಂತೆ ಶ್ರೀವಿಘ್ನೇಶ್ವರ ಗೋಲ್ಡನ್ ಶಾಲೆ (ಎಲ್‌ಕೆಜಿ) 11, 1ನೇ ತರಗತಿ 5, ಜಾನಕಿ ಕಾಳಪ್ಪ ಕಾನ್ವೆಂಟ್ ಆಲೂರು ಸಿದ್ದಾಪುರ (ಎಲ್‌ಕೆಜಿ) 13.

ಗೌಡಳ್ಳಿ ಕಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 6, ಮುಳ್ಳುಸೋಗೆ ಕ್ರೈಸ್ಟ್ ಪ್ರಾಥಮಿಕ ಶಾಲೆ (ಎಲ್‌ಕೆಜಿ) 9, ಕುಶಾಲನಗರ ಗಂಧದ ಕೋಟೆ ಕೆ.ಎಂ.ಟಿ. ಕಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 3, 1ನೇ ತರಗತಿಗೆ 1, ಗುಡ್ಡೆಹೊಸೂರು ಬೆಳ್ಳೂರು ಉದ್ಗಮ್ ಕಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 9, 1ನೇ ತರಗತಿ 2, ನಂಜರಾಯಪಟ್ಟಣ ಜ್ಞಾನವಾಹಿನಿ ಶಾಲೆ (ಎಲ್‌ಕೆಜಿ) 10, ನೆಲ್ಯಹುದಿಕೇರಿ ಆಂಗ್ಲೋ ವರ್ನಾಕ್ಯುಲರ್ ಪ್ರಾಥಮಿಕ ಶಾಲೆ (ಎಲ್‌ಕೆಜಿ) 13, ಅತ್ತೂರು ಜ್ಞಾನಗಂಗಾ ವಸತಿ ಶಾಲೆ (ಎಲ್‌ಕೆಜಿ) 10, 1ನೇ ತರಗತಿ 17, ಶಿರಂಗಾಲ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ (ಎಲ್‌ಕೆಜಿ) 6,

ಹೆಬ್ಬಾಲೆ ಸಿಕ್ರೇಟ್ ಹಾರ್ಟ್ ಹಿ.ಪ್ರಾ. ಶಾಲೆ (ಎಲ್‌ಕೆಜಿ) 13, ಕೂಡಿಗೆ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆ(ಎಲ್‌ಕೆಜಿ) 12, ಕೂಡುಮಂಗಳೂರು ಕಿಶೋರ್ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 4, ೧ನೇ ತರಗತಿಗೆ 4 ಸೀಟು, ಕೊಡಗರಹಳ್ಳಿ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆ(ಎಲ್‌ಕೆಜಿ) 20, ೧ನೇ ತರಗತಿಗೆ 13, ಹಟ್ಟಿಹೊಳೆ ನಿರ್ಮಲ ವಿದ್ಯಾಭವನ (ಎಲ್‌ಕೆಜಿ) 12,

ಗರ್ವಾಲೆ ಭಾರತೀಯ ವಿದ್ಯಾಭವನ (ಎಲ್‌ಕೆಜಿ) 3, ಮಾದಾಪುರ ಎಸ್.ಜೆ.ಎಂ. ಕಿರಿಯ ಪ್ರಾಥಮಿಕ ಶಾಲೆ(ಎಲ್‌ಕೆಜಿ) 7, ಕುಶಾಲನಗರ ಬ್ರಿಲಿಯಂಟ್ ಬ್ಲೂಮ್ ಕಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 1, ಕುಶಾಲನಗರ ಯೂನಿಕ್ ಅಕಾಡೆಮಿ ಕಿರಿಯ ಪ್ರಾಥಮಿಕ ಶಾಲೆ (ಎಲ್‌ಕೆಜಿ) 13, 1ನೇ ತರಗತಿಗೆ 6.

ವಲಯವಾರು ವಿವರ: ಜಿಲ್ಲೆಯ ಮೂರು ಶೈಕ್ಷಣಿಕ ವಲಯಗಳ ಶಾಲಾವಾರು, ವರ್ಗವಾರು ಸೀಟು, ಬಿಇಒ ಕಚೇರಿ ಸಹಾಯವಾಣಿ ಕೇಂದ್ರಗಳ ವಿವರ:
ಮಡಿಕೇರಿ ತಾಲ್ಲೂಕು: 26 ಶಾಲೆಗಳು, 69 ಎಸ್‌ಸಿ, 17 ಎಸ್‌ಟಿ, 141 ಇತರೆ. ಒಟ್ಟು 227 ಸೀಟುಗಳು ಲಭ್ಯ ಇವೆ. ದೂರವಾಣಿ: 08272 225664, 94497 47771.

ಸೋಮವಾರಪೇಟೆ ತಾಲ್ಲೂಕು: 28 ಶಾಲೆಗಳು, 101 ಎಸ್‌ಸಿ, 22 ಎಸ್‌ಟಿ, 200 ಇತರೆ. ಒಟ್ಟು 323 ಸೀಟುಗಳು ಲಭ್ಯ ಇವೆ. ದೂರವಾಣಿ: 08276 282 162, ಮೊಬೈಲ್‌: 99863 91766.

ವಿರಾಜಪೇಟೆ ತಾಲ್ಲೂಕು: 33 ಶಾಲೆಗಳು, 94 ಎಸ್‌ಸಿ, 22 ಎಸ್‌ಟಿ, 189 ಇತರೆ. ಒಟ್ಟು 305 ಸೀಟುಗಳು ಲಭ್ಯ ಇವೆ. ದೂರವಾಣಿ: 08274 257249, ಮೊಬೈಲ್‌: 9449766926.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT