ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಒತ್ತಾಯ, ಮನವಿ

Last Updated 23 ಮಾರ್ಚ್ 2017, 6:30 IST
ಅಕ್ಷರ ಗಾತ್ರ

ಚಾಮರಾಜನಗರ: ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಜಿಲ್ಲಾ ಶಿವಕುಮಾರ ಸ್ವಾಮೀಜಿ ಭಕ್ತ ವೃಂದ, ಅಖಿಲ ಭಾರತ ವೀರಶೈವ ಮಹಾ ಸಭಾದ ಜಿಲ್ಲಾ ಮತ್ತು ತಾಲ್ಲೂಕು ಘಟಕ ಒತ್ತಾಯಿಸಿದೆ.

ಬುಧವಾರ ನಗರದಲ್ಲಿ ಜಿಲ್ಲಾಧಿಕಾರಿ ಬಿ. ರಾಮು ಅವರ ಮೂಲಕ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಯಿತು.
ಹಿಮಾಲಯ ಪರ್ವತದಲ್ಲಿ ನೂರಾರು ವರ್ಷಗಳ ಹಿಂದೆ ಸಾಧು– ಸಂತರು ನೆಲೆಸಿದ್ದರು. ಅವರೆಲ್ಲರೂ ಮುಕ್ತಿಗಾಗಿ ತಪಸ್ಸು ಮಾಡಿದ್ದರು. ಆದರೆ, ಸಿದ್ದಗಂಗಾ ಮಠದ ಸ್ವಾಮೀಜಿ ಅವರು 11 ದಶಕದಿಂದಲೂ ಸಮಾಜದ ಕಲ್ಯಾಣ ಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಸಂಘ ತಿಳಿಸಿದೆ.

ತಪಸ್ವಿ ಹಾಗೂ ಸಮಾಜ ಸುಧಾರಕ ರಾಗಿದ್ದ ಉದ್ದಾನ ಶಿವಯೋಗಿ ಅವರ ನಂತರ 1941ರಿಂದ ಶಿವಕುಮಾರ ಸ್ವಾಮೀಜಿ ಅವರು ಮಠದ ಮುಖ್ಯಸ್ಥ ರಾಗಿದ್ದಾರೆ. ಸಿದ್ದಗಂಗಾ ಮಠವು ವೀರ ಶೈವ ಮಠವಾಗಿದೆ. 700 ವರ್ಷಗಳಷ್ಟು ಇತಿಹಾಸ ಹೊಂದಿದೆ ಎಂದು ತಿಳಿಸಿದೆ.

ಸಿದ್ದಗಂಗಾ ಮಠದಲ್ಲಿ ಯಾವುದೇ ತಾರತಮ್ಯ ಮಾಡದೆ 10 ಸಾವಿರಕ್ಕೂ ಹೆಚ್ಚು ಬಡವಿದ್ಯಾರ್ಥಿಗಳಿಗೆ ಶಿಕ್ಷಣ ನೀಡ ಲಾಗುತ್ತಿದೆ. 8 ದಶಕದಿಂದಲೂ ಈ ಸೇವೆ ಮುಂದುವರಿಸಿಕೊಂಡು ಬಂದಿದ್ದಾರೆ.

ಪ್ರತಿವರ್ಷ ನೂರಾರು ಸ್ನಾತಕೋತ್ತರ ಪದವಿ, ಪದವೀಧರರು, ಎಂಜಿನಿಯರ್‌ ಗಳು, ಶಿಕ್ಷಕರು ಮತ್ತು ಕೌಶಲ ಹೊಂದಿದ ಕಾರ್ಮಿಕರು ಹೊರಬರುತ್ತಿದ್ದಾರೆ. ಇದರ ಹಿಂದೆ ಸ್ವಾಮೀಜಿ ಅವರ ಕೊಡುಗೆ ಹೆಚ್ಚಿದೆ ಎಂದು ಹೇಳಿದೆ.

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾ ಜದ ಆಸ್ತಿಯಾಗಿ ರೂಪಿಸುತ್ತಿದ್ದಾರೆ. ತ್ರಿವಿಧ ದಾಸೋಹಿಯಾಗಿದ್ದಾರೆ. ಈಗಾ ಗಲೇ, ಸ್ವಾಮೀಜಿ ಅವರಿಗೆ ‘ಪದಶ್ರೀ’ ಪ್ರಶಸ್ತಿ ನೀಡಲಾಗಿದೆ. ಸಮಾಜದ ಅಭ್ಯು ದಯಕ್ಕೆ ಅವರು ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ರಾಷ್ಟ್ರದ ಅತ್ಯುನ್ನತ ಗೌರವ ವಾದ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಮಾಜಿ ಶಾಸಕ ಸಿ.ಗುರುಸ್ವಾಮಿ, ನಟೇಶ್‌, ಬಿ.ಕೆ.ರವಿ ಕುಮಾರ್‌, ನಂದೀಶ್‌, ಕೆ.ವೀರಭದ್ರಸ್ವಾಮಿ, ರತ್ನಮ್ಮ, ಶಿವು, ಪುಟ್ಟಮಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT