ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಓದಲು ಬಾರದ ಮೇಯರ್‌ಗಳು..!

ವಿಜಯಪುರ ಮಹಾನಗರ ಪಾಲಿಕೆಯ ಬಜೆಟ್ ಮಂಡಿಸದ ಮೂವರು ಮೇಯರ್‌
Last Updated 23 ಮಾರ್ಚ್ 2017, 9:08 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಮಹಾ ನಗರ ಪಾಲಿಕೆಯ ಮೇಯರ್‌ ಹುದ್ದೆಯನ್ನು ಇಲ್ಲಿಯವರೆಗೂ ಮೂವರು ಅಲಂಕರಿಸಿ ದರೂ, ಕನ್ನಡ ಓದಲು ಬಾರದು ಎಂಬ ಏಕೈಕ ಕಾರಣಕ್ಕೆ ಬಜೆಟ್‌ ಮಂಡನೆಯಿಂದ ದೂರ ಉಳಿದವರೇ ಆಗಿದ್ದಾರೆ.

ಈ ಹಿಂದಿನ ಎರಡು ಬಜೆಟ್‌ ಗಳಂತೆಯೇ 2017–18ನೇ ಸಾಲಿನ ಬಜೆಟ್‌ ಸಹ ಹಲವು ತಕರಾರಿನ ನಡುವೆ ಸೋಮವಾರ ಭೂತನಾಳ ಕೆರೆ ಆವರಣದಲ್ಲಿ ಅಧಿಕಾರಿಗಳಿಂದ ಮಂಡನೆಯಾಯಿತು.

ಬಜೆಟ್‌ ಸಭೆ ಆರಂಭದಲ್ಲೇ ತಾಸಿಗೂ ಹೆಚ್ಚಿನ ಅವಧಿ ಆಕ್ಷೇಪ ವ್ಯಕ್ತವಾದವು. ನಂತರ ಅಧಿಕಾರಿ ಬಜೆಟ್‌ ಮಂಡನೆಗೆ ಮುಂದಾಗುತ್ತಿದ್ದಂತೆ ಹಲ ಸದಸ್ಯರು ತಕರಾರು ತೆಗೆದರು. ಬಜೆಟ್‌ ಯಾರು ಮಂಡಿಸಬೇಕು ಎಂಬ ವಿಷಯ ಬೆಂಬಿಡದ ಭೂತದಂತೆ ಮತ್ತೆ ಪ್ರಸ್ತಾಪಿತಗೊಂಡಿತು.

ಲೋಕಸಭೆ, ವಿಧಾನಸಭೆಯಲ್ಲಿನ ಬಜೆಟ್‌ ಮಂಡನೆಯೂ ಈ ಸಂದರ್ಭ ಚರ್ಚೆಗೀಡಾಯಿತು. ಮೇಯರ್‌ ಬಜೆಟ್‌ ಮಂಡಿಸದಿದ್ದರೆ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದರೂ ಬಜೆಟ್‌ ಮಂಡಿಸಲಿ ಎಂಬ ಒತ್ತಡದ ನಡುವೆಯೂ ಅಧಿಕಾರಿ ಬಜೆಟ್‌ ಮಂಡಿಸಿದರು.

ಮೇಯರ್‌ ಬಜೆಟ್‌ ಮಂಡನೆಗೆ ಮುಂದಾಗದಿದ್ದ ರಹಸ್ಯವನ್ನು ‘ಪ್ರಜಾವಾಣಿ’ ಬೆನ್ನತ್ತಿದ ಸಂದರ್ಭ ಹೊರ ಬಂದ ಸತ್ಯವಿದು... ‘ಮೇಯರ್‌ ಅನೀಸ್‌ ಫಾತಿಮಾ ಬಕ್ಷಿ ಅವರಿಗೆ ಸಮರ್ಪಕವಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಅವರು ಕನ್ನಡದಲ್ಲಿ ಬಜೆಟ್‌ ಮಂಡಿಸಲು ಸಾಧ್ಯವೇ?’ ಎಂಬ ಸತ್ಯಾಂಶವನ್ನು ಹೆಸರು ಬಹಿರಂಗಪಡಿ ಸಲಿಚ್ಚಿಸದ ಪಾಲಿಕೆಯ ಕೆಲ ಸದಸ್ಯರು, ಅಧಿಕಾರಿ ಗಳು ಬಹಿರಂಗಗೊಳಿಸಿದರು.

ಹಾಲಿ ಮೇಯರ್‌ ಸಭೆಗಳಲ್ಲೂ ಸದಸ್ಯರ ಆಕ್ಷೇಪ, ಪ್ರಶ್ನೆಗೆ ಉತ್ತರಿಸಲ್ಲ. ನಾವು ಕನ್ನಡದಲ್ಲಿ ಕೇಳುವ ಪ್ರಶ್ನೆ ಅವರಿಗೆ ಅರ್ಥ ವಾದರೂ, ಮಾತ ನಾಡಲು ಬರುವು ದಿಲ್ಲವಾದ್ದರಿಂದ ಉತ್ತರಿ ಸುವ ಗೋಜಿಗೆ ಹೋಗಲ್ಲ. ಹಿಂದಿ, ಇಂಗ್ಲಿಷ್‌ ನಲ್ಲಿ ಪ್ರಶ್ನಿಸಿದರೆ ಮಾತ್ರ ಪ್ರತಿಕ್ರಿಯಿಸುತ್ತಾರೆ ಎನ್ನುತ್ತಾರೆ ಹಲ ಸದಸ್ಯರು.

‘ಹಲ ಸಭೆಗಳಲ್ಲಿ ಇಂಗ್ಲಿಷ್‌ನಲ್ಲಿ ಚರ್ಚಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ದರೂ ಪ್ರಯೋಜನವಾಗಿಲ್ಲ. ಕೆಲವೊಮ್ಮೆ ಸಭೆ ಲಂಡನ್‌ನಲ್ಲೋ, ನವದೆಹಲಿ ಯಲ್ಲೋ ನಡೆಯುತ್ತದೆ ಎಂಬಂತೆ ಭಾಸ ವಾಗುತ್ತದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಗಮನಿಸಿದರೆ ವಿಜಯಪುರ ಕರ್ನಾಟಕದ ನಕ್ಷೆಯೊಳಗೆ ಇದೆಯೋ ಎಂಬ ಅನುಮಾನ ನಮ್ಮನ್ನು ಕಾಡು ತ್ತಿದೆ’ ಎನ್ನುತ್ತಾರೆ ಪಾಲಿಕೆಯ ಬಿಜೆಪಿ ಸದಸ್ಯ ಪ್ರಕಾಶ ಮಿರ್ಜಿ.

ಹಿಂದೆಯೂ ಇದೇ ಕತೆ: ಇಲ್ಲಿನ ಮಹಾನಗರ ಪಾಲಿಕೆಯ ಪ್ರಥಮ ಮೇಯರ್‌ ಆಗಿ ಆಯ್ಕೆಯಾಗುವ ಮೂಲಕ ಇತಿಹಾ ಸದ ಪುಟಗಳಲ್ಲಿ ದಾಖಲಾದ ಕಾಂಗ್ರೆಸ್‌ನ ಸಜ್ಜಾದೆ ಪೀರಾ ಮುಶ್ರೀಫ್‌ ಕನ್ನಡ ಮಾತ ನಾಡುತ್ತಿದ್ದರೂ, ಓದಲು ಬಾರದ ಕಾರಣ ಅಧಿಕಾರಿಗಳಿಂದ 2015–16ನೇ ಸಾಲಿನ ಬಜೆಟ್‌ ಮಂಡಿಸಿದ್ದರು.

ಕ್ಷಿಪ್ರ, ಅಚ್ಚರಿ ರಾಜಕೀಯ ಬೆಳವ ಣಿಗೆ ಮೂಲಕ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಎರಡನೇ ಅವಧಿಗೆ ಮೇಯರ್‌ ಆಗಿ ಆಯ್ಕೆಯಾದ ಸಂಗೀತಾ ಪೋಳ ಮರಾಠಿ ಮೂಲದ ವರು. ಕನ್ನಡ ಮಾತನಾಡಿದರೂ ಓದಲು ಬಾರದ ಕಾರಣ ಇವರು ಸಹ 2016–17ನೇ ಸಾಲಿನ ಬಜೆಟ್‌ ಭಾಷಣವನ್ನು ಅಧಿಕಾರಿಗಳಿಗೆ ಓದಲು ಅನುಮತಿ ನೀಡಿದ್ದರು.

ಈ ಸಂದರ್ಭ ಸದಸ್ಯರು ಎತ್ತಿದ ಆಕ್ಷೇಪಗಳಿಗೆ ಮನ್ನಣೆ ನೀಡದೆ, ಯಾವ ಅಹವಾಲು ಕೇಳಿಸಿಕೊಳ್ಳದೆ ಅಧಿಕಾರಿ ಮೌನಕ್ಕೆ ಶರಣಾಗಿದ್ದ ಸಂದರ್ಭ, ಎಲ್ಲ ವಿರೋಧವನ್ನು ಬದಿಗೊತ್ತಿದ ಸಂಗೀತಾ ಪೋಳ ಬಜೆಟ್‌ ಮಂಡಿಸದಿದ್ದರೂ ‘ಬಜೆಟ್‌ ಅಂಗೀಕರಿಸಲಾಗಿದೆ’ ಎಂಬ ಒಂದು ಸಾಲಿನ ನಿರ್ಣಯ ಕೈಗೊಳ್ಳುವ ಮೂಲಕ ಬಜೆಟ್‌ ಸಭೆಗೆ ಇತಿಶ್ರೀ ಹಾಕಿದ್ದು ಪಾಲಿಕೆಯ ಇತಿಹಾಸದ ಪುಟ ಗಳಲ್ಲಿ ದಾಖಲಾಗಿರುವುದು ವಿಶೇಷ.

ಪಾಲಿಕೆಗೆ ಮೂರು ವರ್ಷ: ವಿಜಯಪುರ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಗತಿಸಿದೆ. ಆರಂಭದ ಆರು ತಿಂಗಳು ಅಧಿಕಾರಿಗಳ ಆಡಳಿತ ಹೊರತುಪಡಿಸಿದರೆ, ಉಳಿದ ಅವಧಿ ಚುನಾಯಿತ ಜನಪ್ರತಿನಿಧಿಗಳ ಆಡಳಿತ ನಡೆದಿದೆ.

2013ರ ಡಿಸೆಂಬರ್ 20ರಂದು ವಿಜಯಪುರ ನಗರಸಭೆ, ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿತ್ತು. ಇದು ವರೆಗೂ ನಾಲ್ಕು ಬಜೆಟ್‌ ಮಂಡನೆಯಾ ಗಿವೆ. 2014–15ರ ಬಜೆಟ್‌ ಅಧಿಕಾರಿ ಗಳಿಂದ ರೂಪಿತಗೊಂಡು, ಅನು ಮೋದನೆ ಪಡೆದಿತ್ತು.

2015–16, 2016–17, 2017–18ನೇ ಸಾಲಿನ ಬಜೆಟ್‌ಗಳು ಪಾಲಿಕೆಯ ಅಧಿಕಾರಿ ವರ್ಗದಿಂದ ರೂಪಿತಗೊಂಡಿ ದ್ದರೂ, ಚುನಾಯಿತ ಜನಪ್ರತಿನಿಧಿಗಳ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಮೂರು ಬಜೆಟ್‌ಗಳನ್ನು ಆಡಳಿತದ ಚುಕ್ಕಾಣಿ ಹಿಡಿದ ಮೇಯರ್‌ಗಳಿಗೆ ಕನ್ನಡ ಓದಲು ಬಾರದು ಎಂಬ ಏಕೈಕ ಕಾರಣಕ್ಕೆ ಅಧಿಕಾರಿಗಳು ಮಂಡಿಸಿದ್ದಾರೆ.

*
ಮೇಯರ್ ಬಜೆಟ್ ಮಂಡಿಸದಿದ್ದರೆ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷನಾದ ನನಗೆ ಅವಕಾಶ ಕೊಡ ಬೇಕಿತ್ತು. ಈ ವಿಷಯದಲ್ಲಿ ನನ್ನ ಜತೆ ಮೇಯರ್‌ ಚರ್ಚೆ ನಡೆಸಲಿಲ್ಲ.
-ಸಂತೋಷ ಚವ್ಹಾಣ,
ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ

*
ಬಜೆಟ್‌ ಮಂಡಿಸುವಂತೆ ಅಧಿಕಾರಿಗಳಿಗೆ ಸೂಚಿಸುವ ಅಧಿಕಾರವನ್ನು ಮೇಯರ್‌ ಹೊಂದಿದ್ದಾರೆ. ಮೇಯರ್‌ ಮೌಖಿಕ ಆದೇಶದ ಪ್ರಕಾರ ಲೆಕ್ಕಪತ್ರ ವಿಭಾಗದ ಅಧಿಕಾರಿ ಮಂಡಿಸಿದ್ದಾರೆ.
ಶ್ರೀಹರ್ಷ ಶೆಟ್ಟಿ
ಪಾಲಿಕೆಯ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT